Ducati India ನಿಂದ ಹೊಸ ಬೈಕ್ ಬಿಡುಗಡೆ, ಬೆಲೆ ಎಷ್ಟು ಗೊತ್ತಾ?
1. ಬೈಕ್ ಬೆಲೆ ಎಷ್ಟು? - BS6 Scrambler ಮಾದರಿಯ ಎರಡು ಬೈಕ್ ಗಳಾಗಿರುವ Scrambler Nightshift ನ ಎಕ್ಸ್-ಷೋರೂಂ ಬೆಲೆ ರೂ. 9,80,000 ಆಗಿದ್ದರೆ, Scrambler Desert Sled ಬೆಲೆ 10,89,000 ರೂ. ಆಗಿದೆ. (Ducati India)
2. ಎರಡು ಬೈಕ್ ಗಳಲ್ಲಿ ಜಬರ್ದಸ್ತ್ ಇಂಜಿನ್ - Ducati Scrambler Nightshift ಹಾಗೂ Desert Sled ಎರಡೂ ಬೈಕ್ ಗಳು 803 ಸಿಸಿ ಎಲ್-ಟ್ವಿನ್ ಎರಡು-ವಾಲ್ವ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತವೆ. ಇದು ಅತ್ಯುತ್ತಮ ಟಾರ್ಕ್ ಹೊಂದಿದ್ದು, ಇದು ಸವಾರಿಯಲ್ಲಿ ಅಪಾರ ಶಕ್ತಿಯ ಅನುಭವವನ್ನು ನೀಡುತ್ತದೆ. ಲೇಟ್ ನೈಟ್ ರೈಡ್ ಈ ಬೈಕ್‌ನೊಂದಿಗೆ ವಿಭಿನ್ನ ಅನುಭವವನ್ನು ನೀಡುತ್ತದೆ. ಇದರ ಎಂಜಿನ್ 8,250 ಆರ್‌ಪಿಎಂನಲ್ಲಿ 73 ಎಚ್‌ಪಿ ಶಕ್ತಿಯನ್ನು ನೀಡುತ್ತದೆ ಮತ್ತು 5,750 ಆರ್‌ಪಿಎಂನಲ್ಲಿ ಗರಿಷ್ಠ ಟಾರ್ಕ್ ಉತ್ಪಾದಿಸುತ್ತದೆ. (Ducati India)
3. ಆರು ಸ್ಪೀಡ್ ಗಿಯರ್ ಬಾಕ್ಸ್ - ಈ ಎರಡೂ ಬೈಕ್ ಗಳಲ್ಲಿ 6 ಸ್ಪೀಡ್ ಗಿಯರ್ ಬಾಕ್ಸ್ ಗಳನ್ನು ಅಳವಡಿಸಲಾಗಿದೆ. ಇದರಲ್ಲಿರುವ ಮಲ್ಟಿ ಪ್ಲೇಟ್ ಕ್ಲಚ್ ಹೈಡ್ರೋಲಿಕ್ ಕಂಟ್ರೋಲ್ ನೊಂದಿಗೆ ಬರುತ್ತದೆ. (Ducati India)
4. ಈ ನಗರಗಳಲ್ಲಿ ಬುಕಿಂಗ್ ಮಾಡಬಹುದು - ದೇಶದ 9 ನಗರಗಲಾಗಿರುವ ದೆಹಲಿ-NCR, ಮುಂಬೈ, ಪುಣೆ, ಅಹ್ಮದಾಬಾದ್, ಹೈದರಾಬಾದ್, ಬೆಂಗಳೂರು, ಕೊಚ್ಚಿ, ಕೊಲ್ಕತ್ತಾ ಹಾಗೂ ಚೆನ್ನೈನಲ್ಲಿ ನೀವು Ducati India ಡೀಲರ್ ಬಳಿ ಹೋಗಿ ನೀವೂ ಕೂಡ ಈ ಬೈಕ್ ಬುಕಿಂಗ್ ಮಾಡಬಹುದು. (Ducati India)
5.Desert Sled ಬೈಕ್ ನ ಟಾಯರ್ ಗಳು - ದುಕಾತಿಯ Desert Sled ಬೈಕ್ ನ ಮುಂಭಾಗದಲ್ಲಿ Pirelli SCORPION™ RALLY STR 120/70 R19 ಟಾಯರ್ ಹಾಗೂ ಹಿಂಭಾಗದಲ್ಲಿ Pirelli SCORPION™ RALLY STR 170/60 R17 ಟ್ಯಾಯರ್ ಅಳವಡಿಸಲಾಗಿದ್ದು, ಇದು ಆಫ್ ರೋಡ್ ಹಾಗೂ ದೂರದ ಪ್ರಯಾಣದ ವೇಳೆ ಅಧ್ಭುತ ಬ್ಯಾಲೆನ್ಸ್ ನೀಡುತ್ತದೆ. (Ducati India)