ಬ್ರಹ್ಮ ಯೋಗದಿಂದ ಈ ರಾಶಿಯವರಿಗೆ ಅದೃಷ್ಟ ಕೈ ಹಿಡಿಯಲಿದೆ; ನೀವು ಅಪಾರ ಸುಖ-ಸಂಪತ್ತು ಗಳಿಸುತ್ತೀರಿ!

Wed, 02 Oct 2024-6:29 pm,

ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮಹಾಲಯ ಅಮಾವಾಸ್ಯೆ ಶ್ರಾದ್ಧದ ದಿನದಂದು ಶುಭ ಯೋಗದ ಲಾಭವನ್ನು ಕೆಲ ರಾಶಿಯವರು ಪಡೆಯುತ್ತಾರೆ. ಈ ರಾಶಿಯವರು ಹಣದ ಲಾಭವನ್ನು ಗಳಿಸುವ ಸಾಧ್ಯತೆಯಿದೆ. ಅವರು ಅಪಾರ ಸಂಪತ್ತು ಗಳಿಸುತ್ತಾರೆ ಮತ್ತು ಸುಖ-ಸಂತೋಷದಿಂದ ಇರುತ್ತಾರೆ. ಅಕ್ಟೋಬರ್ 2ರಂದು ಯಾವ ರಾಶಿಯವರಿಗೆ ಅದೃಷ್ಟ ಒಲಿಯಲಿದೆ ಎಂಬುದರ ಬಗ್ಗೆ ತಿಳಿಯಿರಿ.

ಮಹಾಲಯ ಅಮಾವಾಸ್ಯೆಯ ದಿನ ಮಿಥುನ ರಾಶಿಯವರಿಗೆ ಒಳ್ಳೆಯದಾಗಲಿದೆ. ವ್ಯಾಪಾರಕ್ಕಾಗಿ ನೀವು ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯಬಹುದು. ನಿಮ್ಮ ಆರ್ಥಿಕ ಸ್ಥಿತಿಯು ಬಲವಾಗಿರುತ್ತದೆ. ಕುಟುಂಬದೊಂದಿಗೆ ನಿಮ್ಮ ಸಂಬಂಧ ಉತ್ತಮವಾಗಿರುತ್ತದೆ. ಮಿಥುನ ರಾಶಿಯವರ ಕುಟುಂಬದಲ್ಲಿ ಹಬ್ಬದ ವಾತಾವರಣ ಇರುತ್ತದೆ. ಆರ್ಥಿಕ ನಿರ್ಧಾರಗಳು ನಿಮ್ಮ ಕೈ ಹಿಡಿಯಲಿವೆ. ನಿಮಗೆ ಪೂರ್ವಜರ ಆಶೀರ್ವಾದ ಇರುತ್ತದೆ. ಮನೆಯನ್ನು ಅಲಂಕರಿಸುವ ಅಥವಾ ದುರಸ್ತಿ ಮಾಡುವ ಬಗ್ಗೆ ನಿಮ್ಮ ಕುಟುಂಬದ ಸದಸ್ಯರೊಂದಿಗೆ ಚರ್ಚಿಸಬಹುದು.

ಮಹಾಲಯ ಅಮಾವಾಸ್ಯೆ ಕನ್ಯಾ ರಾಶಿಯವರಿಗೆ ಅದ್ಭುತ ದಿನವಾಗಿರಲಿದೆ. ಗ್ರಹಗಳ ಸ್ಥಾನ ನಿಮ್ಮ ಪರವಾಗಿರುತ್ತವೆ. ಅಮವಾಸ್ಯೆ ತಿಥಿಯಂದು ಕುಟುಂಬದಲ್ಲಿ ಶ್ರಾದ್ಧ ನಡೆಯಲಿದೆ. ನೀವು ಯಾವುದೇ ಆಸ್ತಿಯಲ್ಲಿ ಹೂಡಿಕೆ ಮಾಡಲು ಯೋಜಿಸುತ್ತಿದ್ದರೆ ಇಂದು ಅತ್ಯಂತ ಮಂಗಳಕರ ದಿನವಾಗಿದೆ. ಕನ್ಯಾ ರಾಶಿಯ ಜನರು ತಮ್ಮ ಪೂರ್ವಜರ ಆಶೀರ್ವಾದದಿಂದ ಆರೋಗ್ಯ ಪಡೆಯುತ್ತಾರೆ. ನೀವು ತುಂಬಾ ಶಕ್ತಿಯುತವಾಗಿರುತ್ತೀರಿ. ಪೂರ್ವಜರ ಆಶೀರ್ವಾದದಿಂದ ನಿಮ್ಮ ಎಲ್ಲಾ ಕೆಲಸಗಳು ಪೂರ್ಣಗೊಳ್ಳುತ್ತವೆ. ಉದ್ಯಮಿಗಳಿಗೆ ಒಳ್ಳೆಯ ಸುದ್ದಿಗಳು ಬರುವ ಸಾಧ್ಯತೆಯಿದ್ದು, ಇದು ಭವಿಷ್ಯದಲ್ಲಿ ಉತ್ತಮ ಲಾಭವನ್ನು ನೀಡುತ್ತದೆ.

ಮಹಾಲಯ ಅಮಾವಾಸ್ಯೆಯು ವೃಶ್ಚಿಕ ರಾಶಿಯವರಿಗೆ ತುಂಬಾ ಅನುಕೂಲಕರವಾಗಿದೆ. ಸರ್ಕಾರಿ ಉದ್ಯೋಗಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳು ಶುಭ ಫಲಿತಾಂಶ ಪಡೆಯುತ್ತಾರೆ. ಇದು ನಿಮ್ಮ ಶ್ರಮಕ್ಕೆ ಸಿಕ್ಕ ಯಶಸ್ಸಾಗಿರುತ್ತದೆ. ವೃಶ್ಚಿಕ ರಾಶಿಯ ಜನರು ತಮ್ಮ ಪೂರ್ವಜರ ಆಶೀರ್ವಾದ ಪಡೆಯುತ್ತಾರೆ. ಇದರಿಂದ ಪ್ರಗತಿಯಲ್ಲಿರುವ ಅಡೆತಡೆಗಳು ದೂರವಾಗುತ್ತವೆ. ನೀವು ಯೋಜಿಸಿರುವ ಎಲ್ಲಾ ಕಾರ್ಯಗಳು ಪೂರ್ಣಗೊಳ್ಳುತ್ತವೆ. ಉದ್ಯೋಗ ಮತ್ತು ವ್ಯಾಪಾರ ಮಾಡುವವರಿಗೆ ಉತ್ತಮ ಲಾಭದ ಕಾರಣ, ಹಣಕಾಸಿನ ಪರಿಸ್ಥಿತಿ ಸುಧಾರಿಸುತ್ತದೆ. ನಿಮ್ಮ ಪ್ರಭಾವ ಎಲ್ಲೆಡೆ ಹೆಚ್ಚಾಗುತ್ತದೆ. ಸಮಾಜದಲ್ಲಿ ನೀವು ಗೌರವ ಮತ್ತು ಪ್ರತಿಷ್ಠೆ ಪಡೆಯುತ್ತೀರಿ.

ಮಹಾಲಯ ಅಮಾವಾಸ್ಯೆಯ ದಿನ ಕುಂಭ ರಾಶಿಯವರಿಗೆ ಭರ್ಜರಿ ಗುಡ್‌ ನ್ಯೂಸ್‌ ಸಿಗಲಿದೆ. ನವರಾತ್ರಿ ಹಾಗೂ ದೀಪಾವಳಿ ಹಬ್ಬದ ಕಳೆ ಮನೆಯಲ್ಲಿರುತ್ತದೆ. ವ್ಯಾಪಾರಸ್ಥರು ತಮ್ಮ ಬ್ಯುಸಿನೆಸ್‌ನಲ್ಲಿ ಕೆಲವು ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬಹುದು. ಇದು ಭವಿಷ್ಯದಲ್ಲಿ ಖಂಡಿತ ನಿಮಗೆ ಪ್ರಯೋಜನವನ್ನು ನೀಡುತ್ತದೆ. ಕುಂಭ ರಾಶಿಯವರಿಗೆ ಮನೆಯಲ್ಲಿ ಧಾರ್ಮಿಕ ವಾತಾವರಣವಿರುತ್ತದೆ. ಅವರು ತಮ್ಮ ಸಂಗಾತಿಯೊಂದಿಗೆ ನವರಾತ್ರಿ ಪೂಜೆಗೆ ಸಂಬಂಧಿಸಿದ ವಸ್ತುಗಳನ್ನು ಖರೀದಿಸಬಹುದು.

(ಗಮನಿಸಿ: ಈ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿರುತ್ತದೆ. ಇಲ್ಲಿನ ಸಲಹೆ ಸೂಚನೆಗಳನ್ನು ಅಳವಡಿಸಿಕೊಳ್ಳವು ಮೊದಲು ನೀವು ಕಡ್ಡಾಯವಾಗಿ ತಜ್ಞರ ಸಲಹೆ ಪಡೆದುಕೊಳ್ಳಬೇಕು. Zee Kannada News ಇದನ್ನು ದೃಢಪಡಿಸುವುದಿಲ್ಲ.)

ZEENEWS TRENDING STORIES

By continuing to use the site, you agree to the use of cookies. You can find out more by Tapping this link