30 ವರ್ಷಗಳ ಬಳಿಕ ಈ ರಾಶಿಯವರ ಜಾತಕದಲ್ಲಿ ರಾಜಯೋಗ: ದುಡ್ಡಿನ ಸುರಿಮಳೆ- ಇನ್ಮುಂದೆ ಸ್ವರ್ಗ ಸುಖ ಪಕ್ಕಾ!
ಮಂಗಳ ಗ್ರಹವು ಜುಲೈ 1 ರಿಂದ ಸಂಚಾರ ಪ್ರಾರಂಭಿಸಿ, ಸಿಂಹ ರಾಶಿಯನ್ನು ಪ್ರವೇಶಿಸಿದೆ. ಮತ್ತೊಂದೆಡೆ ಗುರು ಸ್ವರಾಶಿ ಮೀನ ರಾಶಿಯಲ್ಲಿದ್ದಾನೆ. ಮಂಗಳ ಮತ್ತು ಗುರು ಸಂಯೋಗದಿಂದ ನವಪಂಚಮ ಯೋಗವನ್ನು ಸೃಷ್ಟಿಯಾಗಿದೆ.
ನವಪಂಚಮ ಯೋಗವು ಎಲ್ಲಾ ಜನರ ಜೀವನದಲ್ಲಿ ದೊಡ್ಡ ಬದಲಾವಣೆಯನ್ನು ತರುತ್ತದೆ. ವಿಶೇಷವಾಗಿ 4 ರಾಶಿಗಳಿಗೆ ಅಪಾರ ಸಂಪತ್ತು ಮತ್ತು ಪ್ರಗತಿಯನ್ನು ನೀಡುತ್ತದೆ. ಅಂತಹ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯೋಣ.
ಮೇಷ: ನವಪಂಚಮ ಯೋಗವು ಮೇಷ ರಾಶಿಯವರಿಗೆ ಶುಭ ಫಲ ನೀಡಲಿದೆ. ಮಂಗಳನು ಮೇಷ ರಾಶಿಯ ಅಧಿಪತಿಯಾಗಿದ್ದು, ಮಂಗಳ ಮತ್ತು ಗುರು ಸಂಯೋಗದಿಂದ ಸೃಷ್ಟಿಯಾದ ನವಪಂಚಮ ಯೋಗವು ಸಂಪತ್ತು ಮತ್ತು ಗೌರವವನ್ನು ಹೆಚ್ಚಿಸುತ್ತದೆ. ಪ್ರತೀ ಕಾರ್ಯದಲ್ಲಿ ಯಶಸ್ಸನ್ನು ಪಡೆಯಬಹುದು.
ಕರ್ಕಾಟಕ: ನವಪಂಚಮ ಯೋಗವು ಕರ್ಕಾಟಕ ರಾಶಿಯವರಿಗೆ ಆರ್ಥಿಕ ಲಾಭವನ್ನು ನೀಡುತ್ತದೆ. ಆದಾಯದಲ್ಲಿ ಹೆಚ್ಚಳವಾಗಲಿದೆ. ಹೊಸ ವಾಹನ ಖರೀದಿಸಬಹುದು. ಇಲ್ಲವೇ ಹೂಡಿಕೆಯನ್ನೂ ಸಹ ಮಾಡಬಹುದು. ಬಡ್ತಿ ಸಿಗಬಹುದು.
ಸಿಂಹ ರಾಶಿ: ನವಪಂಚಮ ಯೋಗವು ಸಿಂಹ ರಾಶಿಯವರಿಗೆ ಲಾಭವನ್ನು ನೀಡುತ್ತದೆ. ಸಮಸ್ಯೆಗಳೆಲ್ಲವೂ ಕೊನೆಗೊಳ್ಳುತ್ತವೆ. ನಿಮ್ಮಷ್ಟು ಅದೃಷ್ಟವಂತರು ಬೇರಾರು ಇರಲ್ಲ. ಸ್ಥಗಿತಗೊಂಡ ಕೆಲಸಗಳು ಪೂರ್ಣಗೊಳ್ಳುತ್ತವೆ. ಆಧ್ಯಾತ್ಮದಲ್ಲಿ ಆಸಕ್ತಿ ಹೆಚ್ಚಲಿದೆ. ಯಶಸ್ಸನ್ನು ಪಡೆಯುವ ಸಾಧ್ಯತೆಗಳಿವೆ.
ತುಲಾ ರಾಶಿ: ನವಪಂಚಮ ಯೋಗವು ತುಲಾ ರಾಶಿಯವರಿಗೆ ಅದೃಷ್ಟವನ್ನು ತರುತ್ತದೆ. ವೃತ್ತಿ ಮತ್ತು ವ್ಯವಹಾರದಲ್ಲಿ ಬಹಳಷ್ಟು ಪ್ರಯೋಜನಗಳನ್ನು ಪಡೆಯುತ್ತಾರೆ. ಆದಾಯ ಹೆಚ್ಚಾಗುತ್ತದೆ.
(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)