ಧೀರ ಭಗತ್ ರಾಯ್ ಚಿತ್ರದ ಟ್ರೈಲರ್ ಲಾಂಚ್ ಮಾಡಿದ ದುನಿಯಾ ವಿಜಯ್

Mon, 28 Oct 2024-1:36 am,

ಪೊಲೀಸ್ ವ್ಯವಸ್ಥೆ ಕೋರ್ಟು ನ್ಯಾಯ ಅನ್ನೋದು ಇಲ್ಲದೆ ಹೋಗಿದ್ರೆ ಭಾರತದ ಪರಿಸ್ಥಿತಿ ನಮ್ಮ ಪರಿಸ್ಥಿತಿ ಕೆಟ್ಟದಾಗಿರುತ್ತಿತ್ತು...ಧೀರ ಭಗತ್ ರಾಯ್ ಟ್ರೈಲರ್ ಲಾಂಚ್ ಮಾಡಿ ಟ್ರೈಲರ್ ನೋಡಿದಾಗ ನನಗೆ ತುಂಬಾ ಹೆಮ್ಮೆ ಅನಿಸ್ತಿದೆ ಇಂತಹ ಸಿನಿಮಾಗಳು ಗೆಲ್ಲಬೇಕು ನ್ಯಾಯ ನೀತಿ ಸತ್ಯ ಯಾವತ್ತೂ ಜನರಿಗೆ ಸಿಗುವಂತಾಗಬೇಕು...ಈ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಒಳ್ಳೆಯ ನಾಯಕ ನಾಯಕಿ ನಿರ್ದೇಶಕರು ಹಾಗೂ ಒಂದು ಒಳ್ಳೆಯ ತಂಡ ಸಿಕ್ಕಂತಾಗಿದೆ ಅನ್ನೋ ಭರವಸೆ ನನಗಿದೆ...ನೀವೆಲ್ಲರೂ ನಾವೆಲ್ಲರೂ ಕಥೆಯನ್ನ ಆರಾಧಿಸೋಣ ಕಥೆ ಗೆದ್ದರೆ ನಾವು ಗೆಲ್ತಿವಿ ನಮ್ಮನ್ನು ನಾವು ಆರಾಧಿಸಿಕೊಳ್ಳುವುದು ಬೇಡ ಇದು ನನ್ನ ಸಲಹೆ...ಭೀಮದಲ್ಲಿ ನಾನು ಕೂಡ ಒಂದು ಪಾತ್ರವಾಗಿದ್ದೆ ಅಷ್ಟೇ ಆದರೆ ಚಿತ್ರಕ್ಕೆ ತಿದ್ದು ಕಥೆಯಿಂದ ಹೀಗಾಗಿ ನಾವೆಲ್ಲರೂ ಕಥೆಯನ್ನು ಆರಾಧಿಸೋಣ...ಒಳ್ಳೆಯ ಕಲಾವಿದರು ಒಳ್ಳೆಯ ತಂತ್ರಜ್ಞರು ಸಹೃದಯಿ ನಿರ್ಮಾಪಕರು ನೀವೆಲ್ಲ ಸೇರಿ ಮಾಡಿದ ಈ ಚಿತ್ರಕ್ಕೆ ನನ್ನ ಶುಭ ಹಾರೈಕೆಗಳು.

ಹೊಸ ತಂಡ ಹೊಸಬರು ಮಾಡುವಂತಹ ಕಥೆಗಳು ವಿಭಿನ್ನವಾಗಿರುತ್ತವೆ..ನಾವು ಸಿನಿಮಾ ಮಾಡುವಾಗಲೇ ತುಂಬಾ ಕಷ್ಟ ಇತ್ತು,,ಆದರೆ ಈಗ ಇನ್ನೂ ಕಷ್ಟ ಜಾಸ್ತಿ ಇದೆ ಒಂದು ಚಿತ್ರ ಮಾಡೋದು ಅಂದ್ರೆ ಏಳೆಂಟು ಜನ್ಮ ಎತ್ತಿದ ಹಾಗೆ..ಧೀರ ಭಗತ್ ರಾಯ್ ಸತ್ಯ ನ್ಯಾಯ ನೀತಿ ಹೋರಾಟ ಇವೆಲ್ಲವುಗಳನ್ನ ಒಳಗೊಂಡ ಚಿತ್ರ ಇದು ಅನ್ನೋದು ನನ್ನ ಭಾವನೆ, ಈ ಕುರಿತು ಚಿತ್ರತಂಡ ನನ್ನೊಟ್ಟಿಗೆ ಒಂದಷ್ಟು ವಿಷಯಗಳನ್ನು ಹಂಚಿಕೊಂಡಿದೆ ನನಗೆ ತುಂಬಾ ಖುಷಿಯಾಗಿದೆ.. ಪೊಲೀಸು ಕೋರ್ಟು ನ್ಯಾಯ ಅನ್ನೋದನ್ನ ನಾವು ನಂಬಬೇಕು ಸತ್ಯಕ್ಕೆ ಜಯ ಸಿಗ್ತಾ ಇದೆ, ನಾನು ಕೂಡ ಪೊಲೀಸರನ್ನು ಕಾನೂನನ್ನ ಕೋರ್ಟ್ ಅನ್ನ ನ್ಯಾಯವನ್ನ ನಂಬ್ತಿನಿ ಹಾಗೂ ಅದನ್ನ ಬೆಂಬಲಿಸ್ತೀನಿ...

ಸ್ಯಾಂಡಲ್ವುಡ್ ಸಲಗ ವಿಜಯ್ ಕುಮಾರ್ ಮನದಾಳದ ಮಾತು 

ಈ ತರಹದ ಕಾರ್ಯಕ್ರಮಗಳಿಗೆ ಬರೋದು ನನಗೆ ತುಂಬಾ ಇಷ್ಟ..ಧೀರ ಭಗತ್ ರಾಯ್ ಸಮಾನತೆಗೆ ಒತ್ತು ಕೊಡುವ ಚಿತ್ರ ಮತ್ತು ತಂಡದ ಜೊತೆಗೆ ನಾ ಇರ್ತೀನಿ ಯಾಕಂದ್ರೆ ಸಮಾನತೆ ಅನ್ನೋದು ನನಗೆ ಬಹಳ ಹೆಮ್ಮೆ ತರುವಂತ ವಿಚಾರ ಅದರಲ್ಲೂ ಹೋರಾಟಗಾರರು ಹೋರಾಟಗಾರರು ಕಥೆ ಅಂದ್ರೆ ನನಗೆ ಪ್ರೀತಿ...ಹೋರಾಟದ ಕಥೆಗಳಲ್ಲಿ ಕಿಚ್ಚು ಇರುತ್ತೆ ನ್ಯಾಯ ನೀತಿ ಇರುತ್ತೆ ಅದಕ್ಕೆ ಈ ಚಿತ್ರ ಜೊತೆಗೆ ನಾ ನಿಂತಿದ್ದೀನಿ..

ಭೂ ಸುಧಾರಣೆ ಕಾಯ್ದೆ ಹಿನ್ನೆಲೆಯಲ್ಲಿ ನಡೆಯೋ  ಧೀರ ಭಗತ್ ರಾಯ್ ಚಿತ್ರದ ಟ್ರೈಲರ್ ನಾಲ್ಕಾರೂ ಆಯಾಮಾಗಳಲ್ಲಿ ಕಾಣ್ತಿದೆ. ಅಷ್ಟೇ ಭರವಸೆಯಾಗಿ ಕಾಣ್ತಿರೋ ಈ ಚಿತ್ರದ ಇದೇ ಡಿಸೆಂಬರ್ಗೆ ಪ್ರೇಕ್ಷಕರೆದುರಿಗೆ ಬರ್ತಿದೆ. 

ಇವ್ರ ಜೊತೆಗೆ ಶರತ್ ಲೋಹಿತಶ್ವ, ನೀನಾಸಂ ಅಶ್ವಥ್, ಪ್ರವೀಣ್ ಗೌಡ ಹೆಚ್ ಸಿ, ಹರಿರಾಮ್ , ಕೆ.ಎ ಮ್ ಸಂದೇಶ್, ಸುಧೀರ್ ಕುಮಾರ್ ಮುರೋಳಿ  ಸೇರಿ ಪ್ರತಿಭಾನ್ವಿತಾ ತಾರಾ ಬಳಗವಿದೆ.  ವೈಟ್ ಲೋಟಸ್ ಎಂಟರ್ಟೈನ್ಮೆಂಟ್  ಮತ್ತು ಶ್ರೀ ಓಂ ಸಿನಿ ಎಂಟ್ರಟೈನರ್ಸ್ ಬ್ಯಾನರ್ ನಡಿಯಲ್ಲಿ ಈ ಚಿತ್ರ ನಿರ್ಮಾಣವಾಗಿದೆ.  ತಾಂತ್ರಕವಾಗಿ ಸಖತ್ ಸ್ಟ್ರಾಂಗ್ ಆಗಿ ಕಾಣ್ತಿರೋ ಈ ಸಿನಿಮಾಗೆ ಪೂರ್ಣಚಂದ್ರ ತೇಜಸ್ವಿ ಸಂಗೀತ ಸಂಯೋಜಿಸಿದ್ದು, ಸೆಲ್ಪಂ ಜಾನ್ ಛಾಯಾಗ್ರಹಣ ಮಾಡಿದ್ದಾರೆ. ಎನ್.ಎಂ ವಿಶ್ವ ಈ ಚಿತ್ರಕ್ಕೆ ಸಂಕಲನ ಮಾಡಿದ್ದಾರೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link