ಸಾಡೇಸಾತಿ ನಡೆಯುತ್ತಿದ್ದಾಗಲೂ ಈ ರಾಶಿಯವರ ಮೇಲೆ ಬರೀ ಕೃಪಾ ದೃಷ್ಟಿಯನ್ನೇ ಹರಿಸುವನು ಶನಿ ಮಹಾತ್ಮ! ಕಷ್ಟದ ನೆರಳು ಕೂಡಾ ಸೋಂಕಲು ಬಿಡನು ಛಾಯಾ ಪುತ್ರ

Mon, 16 Dec 2024-8:35 am,

ಕೆಲವೊಂದು ರಾಶಿಗಳಲ್ಲಿ ಶನಿ ದೆಸೆ ನಡೆಯುತ್ತಿದ್ದರೂ ಅವರನ್ನು ಶನಿ ದೇವ ಅಷ್ಟಾಗಿ ಕಾಡುವುದಿಲ್ಲವಂತೆ.ಯಾಕಂದರೆ ಈ ರಾಶಿಗಳು ಶನಿದೇವನ ಪ್ರಿಯ ರಾಶಿಗಳಾಗಿವೆ ಎಂದು ಹೇಳಲಾಗುತ್ತದೆ. 

ಈ ರಾಶಿಯವರ ಮೇಲೆ ಶನಿದೇವನ ಆಶೀರ್ವಾದ ತುಸು ಹೆಚ್ಚೇ ಇರುತ್ತದೆ ಎಂದು ಹೇಳಲಾಗುತ್ತದೆ. ಹಾಗಾಗಿ ಏಳೂವರೆ ಶನಿದೆಸೆ, ಎರಡೂವರೆ ಶನಿ ದೆಸೆ, ಅಷ್ಟಮ ಶನಿ ದೆಸೆ ಹೀಗೆ ಯಾವ   ಸಮಯದಲ್ಲಿಯೂ ಈ ರಾಶಿಯವರನ್ನು ಶನಿ ಮಹಾತ್ಮ ಕಾಡುವುದೇ ಇಲ್ಲವಂತೆ. 

ವೃಷಭ ರಾಶಿ : ವೃಷಭ ರಾಶಿಯ ಅಧಿಪತಿ ಶುಕ್ರ. ಆದರೆ ಶುಕ್ರನ ಜೊತೆಗೆ ಶನಿದೇವನೂ ಈ ರಾಶಿಯವರ ಮೇಲೆ ದಯೆ ತೋರುತ್ತಾನೆ. ಈ ರಾಶಿಯವರು ತಮ್ಮ ವೃತ್ತಿಜೀವನದಲ್ಲಿ ಉನ್ನತ ಸ್ಥಾನಕ್ಕೆ ಏರುತ್ತಾರೆ. ಮಾತ್ರವಲ್ಲ ಜೀವನದಲ್ಲಿ ಸಾಕಷ್ಟು ಹಣ ಮತ್ತು ಹೆಸರು ಗಳಿಸುತ್ತಾರೆ. 

ತುಲಾ ರಾಶಿ :ತುಲಾ ರಾಶಿಯ ವ್ಯಕ್ತಿಯ ಜಾತಕದಲ್ಲಿ ಉಳಿದ ಗ್ರಹಗಳು ತುಂಬಾ ಅಶುಭವಾಗಿಲ್ಲದಿದ್ದರೆ, ಶನಿದೇವರು ಶನಿ ದೆಸೆಯ ಅವಧಿಯಲ್ಲಿಯೂ ಕೆಟ್ಟ ಪರಿಣಾಮಗಳನ್ನು ಉಂಟುಮಾಡುವುದಿಲ್ಲ. ಶನಿಯ ಅನುಗ್ರಹದಿಂದ ತುಲಾ ರಾಶಿಯವರು ಉದ್ಯೋಗ ಮತ್ತು ವ್ಯವಹಾರದಲ್ಲಿ ಸಾಕಷ್ಟು ಪ್ರಗತಿಯನ್ನು ಸಾಧಿಸುತ್ತಾರೆ. 

ಕುಂಭ ರಾಶಿ : ಕುಂಭ ರಾಶಿಯ ಅಧಿಪತಿಯೇ ಶನಿದೇವ. ಹಾಗಾಗಿ ಇವರ ಮೇಲೆ ದಯೆ ಸ್ವಲ್ಪ ಹೆಚ್ಚೇ ಇರುತ್ತದೆ.ಈ ರಾಶಿಯವರ ಮೇಲೆ ಸದಾ ಶನಿಯ ಆಶೀರ್ವಾದವಿರುತ್ತದೆ.ಇವರು ಜೀವನದಲ್ಲಿ ಅಪಾರ ಹಣ ಮತ್ತು ಗೌರವವನ್ನು ಪಡೆಯುತ್ತಾರೆ. ಇವರು ಹಣಕಾಸಿನ ಮುಗ್ಗಟ್ಟು ಎದುರಿಸುವುದಿಲ್ಲ.ಶನಿ ಸಾಡೆಸಾತಿ ಮತ್ತು ಧೈಯಾದ ಸಮಯದಲ್ಲಿಯೂ ನಷ್ಟದ ಬದಲು ಲಾಭವನ್ನೇ ಗಳಿಸುತ್ತಾರೆ.

ಧನು ರಾಶಿ : ಧನು ರಾಶಿಯ ಅಧಿಪತಿ ಗುರು. ಗುರು ಮತ್ತು ಶನಿಯು ಸಮ ಸಂಬಂಧವನ್ನು ಹೊಂದಿರುವುದರಿಂದ ಶನಿಯು ಧನು ರಾಶಿಯವರಿಗೆ ತೊಂದರೆ ಕೊಡುವುದಿಲ್ಲ. ಸಾಡೇಸಾತಿ ಮತ್ತು ಧೈಯ್ಯಾ ಸಮಯದಲ್ಲಿಯೂ ಶನಿಯು ಧನು ರಾಶಿಯವರಿಗೆ ತೊಂದರೆ ಕೊಡುವುದಿಲ್ಲ. ಬದಲಿಗೆ, ಅವರಿಗೆ ಸ್ಥಾನ, ಹಣ, ಪ್ರತಿಷ್ಠೆ ಮತ್ತು ಎಲ್ಲವನ್ನೂ ನೀಡುತ್ತಾನೆ.   

ಮಕರ ರಾಶಿ : ಮಕರ ರಾಶಿಯ ಅಧಿಪತಿ ಕೂಡಾ ಶನೀಶ್ವರನೇ. ಹಾಗಾಗಿ ಈ ರಾಶಿಯವರ ಮೇಲೆ ಕೂಡಾ ಪ್ರೀತಿ ಜಾಸ್ತಿ. ಯಾವಾಗಲೂ ಈ ರಾಶಿಯವರ ಮೇಲೆ ದಯೆ ತೋರುತ್ತಾನೆ. ಶನಿಯ ಕೃಪೆಯಿಂದ ಈ ರಾಶಿಯವರು ಜೀವನದಲ್ಲಿ ಸಾಕಷ್ಟು ಪ್ರಗತಿ ಪಡೆಯುತ್ತಾರೆ. 

ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link