ಶಾಕಿಂಗ್‌ ನ್ಯೂಸ್‌...! ಸಿನಿರಂಗಕ್ಕೆ ಗುಡ್‌ ಬೈ ಹೇಳಲು ರೆಡಿಯಾದ ಸ್ಟಾರ್‌ ನಟಿ... ಏಕೆ ಗೊತ್ತೆ?

Fri, 12 Jul 2024-7:39 pm,

ದುಷಾರಾ ವಿಜಯನ್ ತಮಿಳು ಚಿತ್ರರಂಗದ ಜನಪ್ರಿಯ ನಟಿ.  

ʼಬೋದಿ ಏರಿ ಬುದ್ದಿ ಮಾರಿʼ ಎಂಬ ತಮಿಳು ಸಿನಿಮಾದ ಮೂಲಕ ದುಷಾರಾ ಚಿತ್ರರಂಗಕ್ಕೆ ನಾಯಕಿಯಾಗಿ ಪಾದಾರ್ಪಣೆ ಮಾಡಿದರು.  

ಮೊದಲ ಚಿತ್ರದಲ್ಲಿಯೇ ತಮ್ಮ ಅಭಿನಯದ ಮೂಲಕ ಮೆಚ್ಚುಗೆ ಪಡೆದರು. ನಂತರ ಪಾ ರಂಜಿತ್ ನಿರ್ದೇಶನದ ಸರ್ಪಟ್ ಪರಂಪರೈನಲ್ಲಿ ಆರ್ಯ ಎದುರು ಮರಿಯಮ್ಮ ಪಾತ್ರವನ್ನು ನಿರ್ವಹಿಸಿದರು.‌  

ಸರ್ಪಟ್‌ ಪರಂಪರೆಯ ನಂತರ, ಅವರು ಪಾ ರಂಜಿತ್ ಅವರ ನಕ್ಷತ್ರಂ ನಾಗರಗಂತದಲ್ಲಿ ನಟಿಸಿ ಪ್ರಶಂಸೆಗೆ ಪಾತ್ರರಾದರು.   

ಧನುಷ್ ನಿರ್ದೇಶನದ 50 ನೇ ಚಿತ್ರ ʼರಾಯನ್‌ʼ ನಲ್ಲಿ ಧನುಷ್ ಅವರ ತಂಗಿಯಾಗಿ ನಟಿಸಿದ್ದಾರೆ ದುಷಾರಾ.  

ಈ ಸಿನಿಮಾ ಜುಲೈ 26 ರಂದು ವಿಶ್ವಾದ್ಯಂತ ಚಿತ್ರ ಬಿಡುಗಡೆಯಾಗಲಿದ್ದು, ಚಿತ್ರತಂಡ ಚಿತ್ರದ ಪ್ರಚಾರದಲ್ಲಿ ನಿರತವಾಗಿದೆ.  

ನಟಿ ದುಶಾರ ವಿಜಯನ್ ಇತ್ತೀಚೆಗೆ ರಾಯನ್‌ ಚಿತ್ರದ ಪ್ರಚಾರಕ್ಕಾಗಿ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದರು. ಈ ವೇಳೆ ನಟಿ "ನನಗೆ 35 ವರ್ಷವಾದಾಗ ನಾನು ಚಿತ್ರರಂಗವನ್ನು ತ್ಯಜಿಸಿ, ಪ್ರಪಂಚ ಸುತ್ತಲು ಹೋಗುತ್ತೇನೆ" ಅಂತ ಹೇಳಿಕೊಂಡಿದ್ದಾರೆ.   

ಅಲ್ಲದೇ ಈ ಜಗತ್ತಿನಲ್ಲಿ ತಾವು ಭೇಟಿ ನೀಡದ ಸ್ಥಳಗಳೇ ಇಲ್ಲ ಎನ್ನುವ ರೀತಿಯಲ್ಲಿ ವಿಶ್ವ ಪರ್ಯಟನೆ ಮಾಡುವ ತಮ್ಮ ಬಯಕೆಯನ್ನ ವ್ಯಕ್ತಪಡಿಸಿದರು. ನಟಿ ತುಷಾರಾ ಅವರಿಗೆ ಈಗ 26 ವರ್ಷ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link