Dwarakish Death: ನಟ ರಿಷಬ್ ಶೆಟ್ಟಿಗೆ ದ್ವಾರಕೀಶ್‌ ತಮ್ಮ ಮನೆ ಮಾರಿದ್ದೇಕೆ..?

Tue, 16 Apr 2024-4:44 pm,

ಕೆಲ ವರ್ಷಗಳ ಹಿಂದಷ್ಟೇ ದ್ವಾರಕೀಶ್‌ ಅವರು ತಮ್ಮ ಮನೆಯನ್ನು ನಟ, ನಿರ್ದೇಶಕ ರಿಷಬ್ ಶೆಟ್ಟಿಗೆ ಮಾರಾಟ ಮಾಡಿದ್ದರು. 10 ಕೋಟಿ ರೂ.ಗೆ ಈ ಮನೆಯನ್ನು ರಿಷಬ್ ಖರೀದಿ ಮಾಡಿದ್ದರು ಎಂದು ವರದಿ ಆಗಿತ್ತು. ಹಾಗಾದ್ರೆ ಈ ಮನೆಯನ್ನು ಅವರು ಏಕೆ ಮಾರಿದರು? ಇದಕ್ಕೆ ಇಲ್ಲಿದೆ ಉತ್ತರ...

ಬೆಂಗಳೂರಿನ HSR ಲೇಔಟ್​ಲ್ಲಿ ದ್ವಾರಕೀಶ್ ಅವರು ಮನೆ ಮಾಡಿದ್ದರು. ಮಾಜಿ ಸಿಎಂ ಎಸ್.​ಎಂ.ಕೃಷ್ಣ ಅವರ ಸರ್ಕಾರ ಈ ಸೈಟ್‌ಅನ್ನು ದ್ವಾರಕೀಶ್ ಅವರಿಗೆ ನೀಡಿತ್ತಂತೆ. ಆದರೆ ಈ ಮನೆ ತುಂಬಾನೇ ದೊಡ್ಡಾಗಿತ್ತು. ನಮಗೆ ಏಕೆ ಇಷ್ಟು‌ ದೊಡ್ಡ ಮನೆ ಬೇಕು ಅಂತಾ ದ್ವಾರಕೀಶ್ ಅವರು ಇದನ್ನು ಮಾರಾಟ ಮಾಡಿದ್ದರಂತೆ. ಈ ಮನೆ ನಿರ್ಮಾಣ ಮಾಡಲು ದ್ವಾರಕೀಶ್‌ ಅವರು ಸಾಲ ಮಾಡಿದ್ದರಂತೆ. ಇದರ ಜೊತೆಗೆ ಇತರ ಸಾಲಗಳನ್ನು ಅವರು ತೀರಿಸಬೇಕಿತ್ತು. ಹೀಗಾಗಿ ಅವರು ಮನೆಯನ್ನು ಮಾರಿದ್ದರು ಎಂದು ತಿಳಿದುಬಂದಿದೆ. 

2021ರಲ್ಲಿ ದ್ವಾರಕೀಶ್ ಅವರು ಈ ಮನೆಯನ್ನು ನಟ ರಿಷಬ್ ಶೆಟ್ಟಿಗೆ ಮಾರಾಟ ಮಾಡಿದ್ದರು. ಅಂದಾಜು 10 ಕೋಟಿ ರೂ. ಕೊಟ್ಟು ರಿಷಬ್ ಇದನ್ನು ಖರೀದಿ ಮಾಡಿದ್ದರು ಎಂದು ವರದಿಯಾಗಿತ್ತು. ಆದರೆ ಎಷ್ಟು ಕೋಟಿ ರೂ.ಗೆ ವ್ಯವಹಾರ ನಡೆದಿದೆ ಅನ್ನೋ ಬಗ್ಗೆ ಇಬ್ಬರೂ ಅಧಿಕೃತ ಮಾಹಿತಿ ನೀಡಿರಲಿಲ್ಲ. 

ಚಿತ್ರರಂಗವನ್ನೇ ತಮ್ಮ ಉಸಿರು ಮಾಡಿಕೊಂಡಿದ್ದ ದ್ವಾರಕೀಶ್‌ ಅವರು ಹಲವಾರು ಸಿನಿಮಾ ನಿರ್ಮಾಣ ಮಾಡಿ ಕೈಸುಟ್ಟುಕೊಂಡಿದ್ದರು. ಕೋಟಿ ಕೋಟಿ ಸಾಲ ತೀರಿಸಲು ಅವರು ಮನೆ ಮತ್ತು ಇನ್ನಿತರ ಆಸ್ತಿ-ಪಾಸ್ತಿಗಳನ್ನು ಮಾರಾಟ ಮಾಡಿದ್ದರಂತೆ. ಸಿನಿಮಾ ಪ್ಲಾಪ್‌ ಆಗಿದ್ದರಿಂದಲೇ ದ್ವಾರಕೀಶ್‌ ಅವರಿಗೆ ದೊಡ್ಡ ಹೊಡೆತ ಬಿದ್ದಿತ್ತು. ಸಾಲದ ವಿಚಾರವಾಗಿ ಇದು ವಿವಾದಕ್ಕೂ ಗುರಿಯಾಗಿತ್ತು. 

ದ್ವಾರಕೀಶ್ ಅವರು ತಮ್ಮ ಪುತ್ರ ಯೋಗಿ ಜೊತೆ ವಾಸವಾಗಿದ್ದರು. ಬೆಂಗಳೂರಿನ ಇಲೆಕ್ಟ್ರಾನಿಕ್ ಸಿಟಿಯ ಗುಳಿಮಂಗಳದಲ್ಲಿ ವಾಸಿಸುತ್ತಿದ್ದರು. ಇದೇ ನಿವಾಸದಲ್ಲಿ ಅವರ ಪಾರ್ಥಿವ ಶರೀರ ಇಡಲಾಗಿದ್ದು, ಬುಧವಾರ (ಏಪ್ರಿಲ್ 17) ಬೆಳಗ್ಗೆ ಅವರ ಪಾರ್ಥಿವ ಶರೀರವನ್ನು ರವೀಂದ್ರ ಕಲಾಕ್ಷೇತ್ರಕ್ಕೆ ತರಲಾಗುತ್ತದೆ. ಬೆಳಗ್ಗೆ 11:30ರ ನಂತರ ಚಾಮರಾಜಪೇಟೆಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link