Dwarakish: ಪ್ರಚಂಡ ಕುಳ್ಳ ಆಸ್ತಿ-ಪಾಸ್ತಿ ಕೇಳಿದರೇ ಪಕ್ಕಾ ಶಾಕ್ ಆಗ್ತಿರಾ: ದ್ವಾರಕೀಶ್ ಸಾಲದ ಸುಳಿಯಲ್ಲಿ ಸಿಲುಕ್ಕಿದ್ದೇಕೆ!
ಚಂದನವನ ಹಿರಿಯ ನಟ-ನಿರ್ದೇಶಕ ದ್ವಾರಕೀಶ್ ಸಿನಿಮಾರಂಗದಲ್ಲಿ ಸತತ ಗೆಲುವು ಸಾಧಿಸಿದವರು, ಆ ಕಾಲಕ್ಕೆ ಲಕ್ಷಾಧಿಪತಿ ಆಗಿದ್ದರು. ಇವರು ಬಂಗಲೆಗಳನ್ನ ನಿರ್ಮಿಸುವುದರ ಜೊತೆಗೆ ಇಂಪೋರ್ಟೆಡ್ ಕಾರ್‌ಗಳನ್ನು ಕೂಡ ಖರೀದಿಸಿದ್ದರು.
ನಟ ದ್ವಾರಕೀಶ್ ಮದ್ರಾಸ್‌ನ ಟಿ ನಗರದಲ್ಲಿ 160*120 ವಿಸ್ತೀರ್ಣದಲ್ಲಿ ಭವ್ಯವಾದ ಬಂಗಲೆಯನ್ನು ಕಟ್ಟಿಸದ್ದರು. ಆ ಬಂಗಲೆಯಲ್ಲಿ ಕಡಿಮೆ ಅಂದರೂ 50 ಕಾರು ಪಾರ್ಕಿಂಗ್ ಮಾಡಬಹುದಿತ್ತು. ಅದೇ ಬಂಗಲೆಯಲ್ಲೇ ಒಂದು ಬಾರ್ ಕೂಡ ನಿರ್ಮಿಸಿ, ಆ ಕಾಲದಲ್ಲೇ ಐಷಾರಾಮಿ ಜೀವನ ಸಾಗಿಸಿದ್ದರು.
ನಟ-ನಿರ್ದೇಶಕ ದ್ವಾರಕೀಶ್ ಬೆಂಗಳೂರಿನಲ್ಲಿಯೂ ಸಹ ಎನ್ ಆರ್ ಕಾಲೋನಿಯಲ್ಲಿ ದೊಡ್ಡ ಮನೆ ಕಟ್ಟಿಸಿದ್ದರು. ಹಾಗೆಯೇ ರಾಗಿಗುಡ್ಡದಲ್ಲಿ ಒಂದು ಸೈಟ್ ಖರೀದಿಸಿದ್ದರು ಮತ್ತು ಇಂದಿರಾನಗರದಲ್ಲೂ ಭವ್ಯ ಬಂಗಲೆಯನ್ನು ನಿರ್ಮಿಸಿದ್ದರು.
ದ್ವಾರಕೀಶ್ ಪ್ಯಾಲೇಸ್ ಆರ್ಚೆಡ್‌ನಲ್ಲಿಯೂ ಕೂಡ ವಿಶಾಲವಾದ ಬಂಗಲೆಯನನು ಕಟ್ಟಿಸಿ, ಆಗಿನ ಕಾಲದಲ್ಲೇ ಅದರಿಂದ 5 ಲಕ್ಷ ರೂಪಾಯಿ ಬಾಡಿಗೆ ಬರುತ್ತಿತ್ತು ಎನ್ನಲಾಗಿದೆ.
ನಿರ್ಮಾಪಕ ದ್ವಾರಕೀಶ್ 1981ರಲ್ಲೇ ಇಂಪೋರ್ಟೆಡ್ ಹೋಂಡಾ ಕಾರು ಖರೀದಿ ಮಾಡಿದ ಕನ್ನಡದ ಮೊದಲ ನಟರಾಗಿದ್ದಾರೆ.
ದ್ವಾರಕೀಶ್ ಚಿತ್ರರಂಗದಲ್ಲಿ ಗೆಲುವನ್ನು ಮಾತ್ರ ಕಾಣದೆ ನಿರ್ಮಾಣದ 19 ಸಿನಿಮಾಗಳ ಸೋಲುಗಳಿಂದಾಗಿ ಗಳಿಸಿದ್ದೆಲ್ಲವನ್ನ ಕಳೆದುಕೊಳ್ಳಬೇಕಾದ ಪರಿಸ್ಥಿತಿ ಎದುರಾಯಿತು. ಈ ನಟ ಖರ್ಚಿನ ಬಗ್ಗೆ ಯಾವತ್ತೂ ತಲೆ ಕೆಡಿಸಿಕೊಳ್ಳದೇ, ಸಿನಿಮಾ ಚೆನ್ನಾಗಿ ದುಡ್ಡು ಸುರಿಯುತ್ತಿದ್ದರಿಂದ ಸಾಲದ ಸುಳಿಯಲ್ಲಿ ಸಿಲುಕಿಕೊಳ್ಳವ ಪರಿಸ್ಥಿತಿ ಉಂಟಾಯಿತು.