ಭೂಕಂಪದ ಬಳಿಕ ಟರ್ಕಿ - ಸಿರಿಯಾದಲ್ಲಿ ಕಂಡು ಬಂದ ಭಯಾನಕ ದೃಶ್ಯ!

Mon, 06 Feb 2023-4:08 pm,

ಸೋಮವಾರ ಮುಂಜಾನೆ ಆಗ್ನೇಯ ಟರ್ಕಿ ಮತ್ತು ಸಿರಿಯಾದಲ್ಲಿ 7.8 ತೀವ್ರತೆಯ ಭೂಕಂಪ ಸಂಭವಿಸಿದೆ. ಇದರಿಂದಾಗಿ ಹಲವು ಕಟ್ಟಡಗಳು ಕುಸಿದಿವೆ. ಸಿರಿಯಾ ಮತ್ತು ಟರ್ಕಿಯಲ್ಲಿ ಭೂಕಂಪದಿಂದಾಗಿ 568 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಅವಶೇಷಗಳಡಿ ಸಿಲುಕಿಕೊಂಡವರನ್ನು ಸ್ಥಳಾಂತರಿಸುವ ಕಾರ್ಯ ನಡೆಯುತ್ತಿದೆ.   

ಟರ್ಕಿ ಮತ್ತು ಸಿರಿಯಾದಲ್ಲಿ, ಕಟ್ಟಡಗಳ ಒಳಗೆ ಸಿಲುಕಿರುವವರು ಭೂಕಂಪ ಪೀಡಿತ ಪ್ರದೇಶಗಳಲ್ಲಿ ಸಹಾಯಕ್ಕಾಗಿ ಮನವಿ ಮಾಡುತ್ತಿರುವುದು ಕಂಡುಬಂದಿದೆ. ಈ ಭೂಕಂಪದ ಕೇಂದ್ರಬಿಂದು ಟರ್ಕಿಯ ಗಾಜಿಯಾಂಟೆಪ್ .  ಭೂಕಂಪ ಪೀಡಿತ ಪ್ರದೇಶಗಳಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. 

ಇಲ್ಲಿ ಸುಮಾರು 6 ಕಂಪನಗಳ ಅನುಭವವಾಗಿದೆ. ಹಾನಿಗೊಳಗಾದ ಕಟ್ಟಡಗಳಿಗೆ ತೆರಳದಂತೆ ಜನರಿಗೆ ಸೂಚಿಸಲಾಗಿದೆ. 

ಕನಿಷ್ಠ 130 ಕಟ್ಟಡಗಳು ಕುಸಿದಿವೆ.  ಅನೇಕ ಜನರು ಅವಶೇಷಗಳ ಅಡಿಯಲ್ಲಿ ಹೂತುಹೋಗಿದ್ದಾರೆ. 

ಯುಎಸ್ ಜಿಯೋಲಾಜಿಕಲ್ ಸರ್ವೆ ಪ್ರಕಾರ, ಭೂಕಂಪದ ಕೇಂದ್ರಬಿಂದು ಗಾಜಿಯಾಂಟೆಪ್‌ನಿಂದ ಸುಮಾರು 33 ಕಿ.ಮೀ ದೂರದಲ್ಲಿದೆ. ಹಲವು ಪ್ರಾಂತ್ಯಗಳಲ್ಲಿ ಇದರ ಕಂಪನದ ಅನುಭವವಾಗಿದೆ. ಇದಕ್ಕೂ ಮೊದಲು, 1999 ರಲ್ಲಿ ಟರ್ಕಿಯಲ್ಲಿ ಭೀಕರ ಭೂಕಂಪ ಸಂಭವಿಸಿ 17,000 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು.

ZEENEWS TRENDING STORIES

By continuing to use the site, you agree to the use of cookies. You can find out more by Tapping this link