ಟೂಥ್ ಪೇಸ್ಟ್ ಅಲ್ಲ ಈ ಹಣ್ಣಿನ ಸಿಪ್ಪೆ ಬಳಸಿದರೆ ಹಲ್ಲಿನಲ್ಲಿರುವ ಹಳದಿ ಕಲೆ ಸುಲಭವಾಗಿ ಮಾಯವಾಗುತ್ತದೆ!ಹುಳುಕು ಹಲ್ಲು, ಹಲ್ಲು ನೋವಿಗೂ ಇದೇ ಪರಿಹಾರ
ಪ್ರತಿನಿತ್ಯ ಹಲ್ಲುಜ್ಜಿದರೂ ಹಲ್ಲುಗಳಲ್ಲಿ ಹಳದಿ ಕಲೆಗಳು ಉಳಿದು ಬಿಡುತ್ತವೆ. ಕೆಲವೊಮ್ಮೆ ದಿನಕ್ಕೆರಡು ಬಾರಿ ಹಲ್ಲುಜ್ಜಿದರೂ ಹಲ್ಲುಗಳು ಮಾತ್ರ ಹಳದಿಯಾಗಿಯೇ ಇರುತ್ತವೆ.
ಹಲ್ಲುಗಳ ಬಿಳುಪನ್ನು ಮತ್ತೆ ಮರಳಿ ಪಡೆಯಲು ಟೂತ್ ಪೇಸ್ಟ್, ಮೌತ್ ವಾಶ್ ಇದ್ಯಾವುದನ್ನೂ ಬಳಸುವ ಅಗತ್ಯ ಇಲ್ಲ.ಮನೆಯಲ್ಲಿಯೇ ಇರುವ ಕೆಲವು ವಸ್ತುಗಳನ್ನು ಬಳಸಿ ಹಲ್ಲಿನ ಮೇಲೆ ಅಂಟಿ ಕುಳಿತಿರುವ ಹಳದಿ ಕಲೆಗಳನ್ನು ಸುಲಭವಾಗಿ ತೆಗೆದು ಹಾಕಬಹುದು.
ತೆಂಗಿನ ಎಣ್ಣೆಯೊಂದಿಗೆ ಅರಿಶಿನವನ್ನು ಮಿಶ್ರಣ ಮಾಡಿ ಅದನ್ನು ಹಲ್ಲುಗಳ ಮೇಲೆ ಹಚ್ಚಿ ಸ್ವಲ್ಪ ಸಮಯ ಹಾಗೆಯೇ ಬಿಡಿ. ನಂತರ ಹಲ್ಲನ್ನು ಚೆನ್ನಾಗಿ ಉಜ್ಜಬೇಕು. ಇದು ಹಲ್ಲುಗಳ ಮೇಲಿನ ಹಳದಿ ಬಣ್ಣವನ್ನು ಹೋಗಲಾಡಿಸುವುದು ಮಾತ್ರವಲ್ಲ ಬಾಯಿಯ ದುರ್ವಾಸನೆಯನ್ನು ಕೂಡಾ ನಿರ್ಮೂಲನೆ ಮಾಡುತ್ತದೆ.
ಹಲ್ಲುಗಳು ಹಳದಿ ಬಣ್ಣಕ್ಕೆ ತಿರುಗಿದ್ದರೆ,ನಿಂಬೆ ಹಣ್ಣಿನ ಸಿಪ್ಪೆಯನ್ನು ತೆಗೆದುಕೊಂಡು ಅವುಗಳನ್ನು ಹಲ್ಲಿನ ಮೇಲೆ ಉಜ್ಜಬೇಕು. ಈ ಮೂಲಕ ಹಲ್ಲುಗಳನ್ನು ಸುಲಭವಾಗಿ ಸ್ವಚ್ಛಗೊಳಿಸಬಹುದು.ಇದು ಹಲ್ಲು ನೋವಿನಿಂದಲೂ ಪರಿಹಾರ ನೀಡುತ್ತದೆ.
ಹಲ್ಲುಗಳನ್ನು ಸ್ವಚ್ಛಗೊಳಿಸಲು ಅಡಿಗೆ ಸೋಡಾದ ಪೇಸ್ಟ್ ಮಾಡಿ ಹಚ್ಚಿದರೂ ಪ್ರಯೋಜನವಾಗುವುದು.ಈ ಪೇಸ್ಟ್ ಮೂಲಕ ವಾರಕ್ಕೊಮ್ಮೆ ಬ್ರಷ್ ಮಾಡಿದರೆ ಹಳದಿ ಹಲ್ಲುಗಳು ಬಿಳಿಯಾಗಲು ಪ್ರಾರಂಭಿಸುತ್ತದೆ.
ಸಾಸಿವೆ ಎಣ್ಣೆಯಲ್ಲಿ ಒಂದು ಚಿಟಿಕೆ ಅರಿಶಿನ ಮತ್ತು ಉಪ್ಪನ್ನು ಬೆರೆಸಿ ಪೇಸ್ಟ್ ಮಾಡಿ ದಿನಕ್ಕೆ ಎರಡು ಬಾರಿ ಬ್ರಷ್ ಮಾಡಬೇಕು. ಹೀಗೆ ಮಾಡುವುದರಿಂದ ಹಲ್ಲುಗಳಲ್ಲಿರುವ ಕ್ರಿಮಿಗಳು ದೂರವಾಗುತ್ತವೆ.ಇದಲ್ಲದೇ ಬಾಯಿಯ ದುರ್ವಾಸನೆಯೂ ದೂರವಾಗುತ್ತದೆ.
ಸೂಚನೆ :ಈ ಮೇಲಿನ ಲೇಖನವು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ, ZEE NEWS ಅದನ್ನು ಖಚಿತಪಡಿಸುವುದಿಲ್ಲ