ತೆಂಗಿನೆಣ್ಣೆಗೆ ಇದೊಂದು ವಸ್ತು ಬೆರೆಸಿ ಹಚ್ಚಿದರೆ ಬೋಳು ತಲೆಯಲ್ಲಿಯೂ ಹುಟ್ಟುತ್ತದೆ ಕೂದಲು! ಬಿಳಿ ಕೂದಲಿಗೂ ಇದೇ ಶಾಶ್ವತ ಪರಿಹಾರ
ಕೊಬ್ಬರಿ ಎಣ್ಣೆಯು ಕೂದಲಿನ ಸರ್ವ ಸಮಸ್ಯೆಗಳಿಗೂ ಮದ್ದು ಎಂದರೆ ತಪ್ಪಲ್ಲ.ಇದರಲ್ಲಿರುವ ಲಾರಿಕ್ ಆಮ್ಲ ಮತ್ತು ಆರೋಗ್ಯಕರ ಕೊಬ್ಬುಗಳು ಕೂದಲಿಗೆ ಪೋಷಣೆ ನೀಡುತ್ತದೆ. ಈ ಎಣ್ಣೆಗೆ ಕೆಲವು ವಸ್ತುಗಳನ್ನು ಬೆರೆಸಿ ಹಚ್ಚಿದರೆ ಕೂದಲು ಉದುರುವುದು ಶಾಶ್ವತವಾಗಿ ನಿಲ್ಲುತ್ತದೆ.
ಕೂದಲು ಉದುರುವ ಸಮಸ್ಯೆಯಿಂದ ಮುಕ್ತಿ ಪಡೆಯಲು ಕರಿಬೇವಿನ ಎಲೆಯನ್ನು ತೆಂಗಿನೆಣ್ಣೆಯೊಂದಿಗೆ ಕುದಿಸಿ ಕೂದಲಿಗೆ ಹಚ್ಚಬೇಕು. ಇದು ಕೂದಲು ಉದುರುವುದನ್ನು ತಡೆಯುತ್ತದೆ ಮಾತ್ರವಲ್ಲ ಉದುರಿದ ಜಾಗದಲ್ಲಿ ಮತ್ತೆ ಕೂದಲು ಬೆಳೆಯಲು ಸಹಾಯ ಮಾಡುತ್ತದೆ.
ಕೂದಲಿನ ಬಲವನ್ನು ಹೆಚ್ಚಿಸಲು ಮತ್ತು ನೆತ್ತಿಯ ಆರೋಗ್ಯವನ್ನು ಕಾಪಾಡಿಕೊಳ್ಳಲು, ಮೆಂತ್ಯೆ ಮತ್ತು ತೆಂಗಿನ ಎಣ್ಣೆಯ ಮಿಶ್ರಣವನ್ನು ಹಚ್ಚಬಹುದು. ಮೆಂತ್ಯೆಯಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಮತ್ತು ಉರಿಯೂತ ನಿವಾರಕ ಅಂಶಗಳು ನೆತ್ತಿಯನ್ನು ಆರೋಗ್ಯಕರವಾಗಿಸುತ್ತದೆ.
ನೆಲ್ಲಿಕಾಯಿ ಪುಡಿ ತೆಂಗಿನೆಣ್ಣೆ ಯಾವಾಗಲೂ ಕೂದಲಿನ ಆರೋಗ್ಯಕ್ಕೆ ನೈಸರ್ಗಿಕ ಔಷಧವಾಗಿದೆ. ತೆಂಗಿನೆಣ್ಣೆಗೆ ಒಣಗಿದ ನೆಲ್ಲಿಕಾಯಿ ಪುಡಿಯನ್ನು ಮಿಶ್ರಣ ಮಾಡಿ ಹೇರ್ ಮಾಸ್ಕ್ ತಯಾರಿಸಿ ಕೂದಲಿಗೆ ಹಚ್ಚಿದರೆ ಕೂದಲು ಉದುರುವುದು ನಿಲ್ಲುತ್ತದೆ.
ಕೂದಲಿನ ಆರೈಕೆಗೆ ಈರುಳ್ಳಿ ಕೂಡಾ ನೈಸರ್ಗಿಕ ಪರಿಹಾರವಾಗಿದೆ. ತೆಂಗಿನ ಎಣ್ಣೆಯಲ್ಲಿ ಈರುಳ್ಳಿ ಕುದಿಸಿ ಫಿಲ್ಟರ್ ಮಾಡಿ ಸಾಮಾನ್ಯ ಕೂದಲಿನ ಎಣ್ಣೆಯಂತೆ ಹಚ್ಚಿದರೆ ಕೂದಲು ಉದುರುವುದು ಥಟ್ ಅಂತ ನಿಲ್ಲುವುದು.
ಮೇಲೆ ತಿಳಿಸಿದ ಎಲ್ಲಾ ಪರಿಹಾರ ಬಿಳಿ ಕೂದಲಿನಿಂದ ಶಾಶ್ವತ ಮುಕ್ತಿ ಪಡೆಯಲು ಸಹಾಯ ಮಾಡುತ್ತದೆ.
ಸೂಚನೆ : ಈ ಲೇಖನವನ್ನು ಸಾಮಾನ್ಯ ಮಾಹಿತಿ ಮತ್ತು ಮನೆ ಮದ್ದುಗಳನ್ನು ಆಧರಿಸಿ ಬರೆಯಲಾಗಿದೆ. ಈ ಮಾಹಿತಿಯನ್ನು ಜೀ ನ್ಯೂಸ್ ಕನ್ನಡ ಅನುಮೋದಿಸುವುದಿಲ್ಲ.