ಈ ಸಣ್ಣ ಬೀಜವನ್ನು ಊಟವಾದ ಮೇಲೆ ಬಾಯಿಯಲ್ಲಿ ಇಟ್ಟುಕೊಂಡರೆ ಹೈ ಬ್ಲಡ್ ಶುಗರ್ ಕೂಡಾ ನಾರ್ಮಲ್ ಆಗುವುದು ! ಪಥ್ಯದ ಚಿಂತೆಯೇ ಬೇಡ
ಡಯಾಬಿಟೀಸ್ ಇದ್ದಾಗ ಬ್ಲಡ್ ಶುಗರ್ ಮೇಲೆ ಹೆಚ್ಚು ಪರಿಣಾಮ ಬೀರುವುದೇ ನಾವು ಸೇವಿಸುವ ಆಹಾರ.
ಆಹಾರ ಸೇವಿಸಿದ ತಕ್ಷಣ ರಕ್ತದಲ್ಲಿನ ಸಕ್ಕರೆ ಮಟ್ಟ ಏರುವುದಕ್ಕೆ ಆರಂಭವಾಗುತ್ತದೆ. ಹಾಗಾಗಿ ಆಹಾರ ಸೇವನೆಗೆ ಮುನ್ನ, ಅಥವಾ ಆಹಾರ ಸೇವನೆ ನಂತರ ಏನು ಮಾಡಬೇಕು ಎನ್ನುವುದು ಬಹಳ ಮುಖ್ಯವಾಗಿ ತಿಳಿದಿರಬೇಕು.
ಆಹಾರ ಸೇವನೆ ಬಳಿಕವೂ ಬ್ಲಡ್ ಶುಗರ್ ಅನ್ನು ನಾರ್ಮಲ್ ಆಗಿ ಇಟ್ಟುಕೊಳ್ಳಲು ಓಮ ಕಾಳು ಬೆಸ್ಟ್ ಮನೆ ಮದ್ದು. ಇದು ಆಹಾರ ಸೇವನೆ ನಂತರವೂ ಶುಗರ್ ಹೆಚ್ಚಾಗಲು ಅನುವು ಮಾಡುವುದಿಲ್ಲ.
ಓಮ ಕಾಳಿನಲ್ಲಿ ಪ್ರೋಟೀನ್, ಕೊಬ್ಬು, ಫೈಬರ್, ಕಾರ್ಬೋಹೈಡ್ರೇಟ್ ಮುಂತಾದ ಪೋಷಕಾಂಶಗಳು ಹೇರಳವಾಗಿ ಇರುತ್ತದೆ. ಇದರಲ್ಲಿರುವ ಫೈಬರ್ ದೇಹದಲ್ಲಿನ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ಊಟದ ನಂತರ ಓಮ ಕಾಳಿನ ನಿಯಮಿತ ಸೇವನೆ ರಕ್ತದಲ್ಲಿನ ಸಕ್ಕರೆ ಶಾಶ್ವತವಾಗಿ ಕಂಟ್ರೋಲ್ ನಲ್ಲಿಯೇ ಇರುವುದು.
ಓಮ ಕಾಳನ್ನು ಎರಡು ರೀತಿಯಲ್ಲಿ ಸೇವಿಸಬಹುದು.ಮೊದಲನೆಯದ್ದು 3 ಗ್ರಾಂ ಓಮ ಕಾಳನ್ನು 10 ಮಿಲಿ ಎಳ್ಳಿನ ಎಣ್ಣೆಯ ಜೊತೆ ಬೆರೆಸಿ ದಿನಕ್ಕೆ ಮೂರು ಬಾರಿ ತಿನ್ನಿರಿ. ಅಂದರೆ ಮೂರೂ ಹೊತ್ತು ಊಟ ಮಾಡಿದ ನಂತರ ಇದನ್ನು ಸೇವಿಸಬೇಕು.
ಎರಡನೆಯದ್ದು ಓಮದ ನೀರನ್ನು ಆಹಾರ ಸೇವಿಸಿದ ಅರ್ಧ ಘಂಟೆಯ ನಂತರ ಕುಡಿಯಬೇಕು. ಅರ್ಧ ಚಮಚ ಓಮ ಕಾಳು,ಕಾಲು ಚಮಚ ದಾಲ್ಚಿನ್ನಿ ಪುಡಿ ಮತ್ತು ಅರ್ಧ ಚಮಚ ಸೊಂಪು ಹಾಕಿ ಚೆನ್ನಾಗಿ ಕುದಿಸಿ ಕುಡಿಯಬೇಕು.
ಸೂಚನೆ : ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. zee kannada news ಇದನ್ನು ಖಚಿತಪಡಿಸುವುದಿಲ್ಲ.