ಕೊಬ್ಬರಿ ಎಣ್ಣೆಯಲ್ಲಿ ಈ ಪುಡಿ ಬೆರೆಸಿ ಹಚ್ಚಿದ್ರೆ ತಕ್ಷಣ ಕಪ್ಪಾಗುತ್ತೆ ಬಿಳಿ ಕೂದಲು
ಕಳಪೆ ಜೀವನಶೈಲಿ, ಧೂಳು, ಮಾಲಿನ್ಯದ ಜೊತೆಗೆ ಪೋಷಕಾಂಶಗಳ ಕೊರತೆಯಿಂದಾಗಿ ಅತಿ ಚಿಕ್ಕ ವಯಸ್ಸಿನಲ್ಲೇ ಕೂದಲು ಬೆಳ್ಳಗಾಗುತ್ತದೆ.
ತುಂಬಾ ಚಿಕ್ಕ ವಯಸ್ಸಿನಲ್ಲಿ ಮಕ್ಕಳಿಗೆ ಹೇರ್ ಡೈ ಬಳಸುವುದರಿಂದ ಇದು ಅಡ್ಡಪರಿಣಾಮವನ್ನು ಉಂಟು ಮಾಡಬಹುದು.
ಮನೆಯಲ್ಲಿಯೇ ಇರುವ ಕೆಲವು ಪದಾರ್ಥಗಳನ್ನು ಬಳಸಿ ಬಿಳಿ ಕೂದಲಿನಿಂದ ಕೂಡಲೇ ಪರಿಹಾರ ಪಡೆಯಬಹುದು. ಇದಕ್ಕಾಗಿ ಐದರಿಂದ ಆರು ಬಾದಾಮಿ ಮತ್ತು ಕೊಬ್ಬರಿ ಎಣ್ಣೆ ಎರಡೇ ಸಾಕು.
ಬಿಳಿ ಕೂದಲನ್ನು ಕಪ್ಪಾಗಿಸಲು ಮೊದಲಿಗೆ ಐದರಿಂದ ಆರು ಬಾದಾಮಿಯನ್ನು ತೆಗೆದುಕೊಂಡು ಒಂದು ಜಾಲರಿಯ ಮೇಲಿಟ್ಟು ಅದು ಕಪ್ಪಗಾಗುವವರೆಗೂ ಚೆನ್ನಾಗಿ ಕಾಯಿಸಿ. ಬಳಿಕ ಅದನ್ನು ಚೆನ್ನಾಗಿ ಪುಡಿ ಮಾಡಿ ಇಡಿ.
ನೀವು ಹೇರ್ ಮಾಸ್ಕ್ ಬಳಸುವ ಹಿಂದಿನ ರಾತ್ರಿಯೇ ಒಂದು ಬಟ್ಟಲಿನಲ್ಲಿ ಸ್ವಲ್ಪ ಪುಡಿಮಾಡಿಟ್ಟ ಬಾದಾಮಿ ಪುಡಿಯನ್ನು ಹಾಕಿ ಇದರಲ್ಲಿ ತೆಂಗಿನೆಣ್ಣೆ ಬೆರೆಸಿ ಚೆನ್ನಾಗಿ ಮಿಕ್ಸ್ ಮಾಡಿ ಇಡಿ.
ರಾತ್ರಿ ತಯಾರಿಸಿಟ್ಟ ಬಾದಾಮಿ ಪುಡಿ, ತೆಂಗಿನೆಣ್ಣೆ ಹೇರ್ ಮಾಸ್ಕ್ ಅನ್ನು ಕೂದಲಿನ ಬುಡದಿಂದ ತುದಿಯವರೆಗೂ ಹಚ್ಚಿದರೆ ಬಿಳಿ ಕೂದಲು ಕೂಡಲೇ ಕಪ್ಪಾಗುತ್ತದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.