ಐದೇ ನಿಮಿಷದಲ್ಲಿ ತಯಾರಾಗುವ ಈ ಹೇರ್ ಡೈ ಬಳಸಿದರೆ ಬಿಳಿ ಕೂದಲು ಗಾಢ ಕಪ್ಪಾಗಿ, ಕಾಂತಿಯುತವೂ ಆಗುತ್ತೆ..!
ಇತ್ತೀಚಿನ ದಿನಗಳಲ್ಲಿ ಜನರು ಉತ್ತಮ ಆರೋಗ್ಯಕ್ಕಾಗಿ ಹೆಚ್ಚಾಗಿ ಆರ್ಗ್ಯಾನಿಕ್ ಪದಾರ್ಥಗಳನ್ನು ಬಳಸಲು ಇಚ್ಚಿಸುತ್ತಾರೆ. ಹಾಗಿರುವಾಗ ಬಿಳಿ ಕೂದಲಿಗೆ ಏಕೆ ಕೆಮಿಕಲ್ ಮಿಶ್ರಿತ ಹೇರ್ ಡೈ ಬಳಸಬೇಕು...
ನಿಮ್ಮ ಮನೆಯಲ್ಲಿರುವ ಕೆಲವೇ ಕೆಲವು ಪದಾರ್ಥಗಳನ್ನು ಬಳಸಿ ಬಿಳಿ ಕೂದಲನ್ನು ನೈಸರ್ಗಿಕವಾಗಿ ಕಡು ಕಪ್ಪು ಬಣ್ಣಕ್ಕೆ ತಿರುಗಿಸಬಹುದು. ಮಾತ್ರವಲ್ಲ, ಉದ್ದವಾದ ಕಾಂತಿಯುತ ಕೂದಲು ಸಹ ನಿಮ್ಮದಾಗುತ್ತದೆ.
ಬಿಳಿ ಕೂದಲಿಗೆ ಮನೆಯಲ್ಲೇ ಹೇರ್ ಪ್ಯಾಕ್ ತಯಾರಿಸಲು ಬೇಕಾಗಿರುವ ಪದಾರ್ಥಗಳೆಂದರೆ... * ಸಾಸಿವೆ ಎಣ್ಣೆ 1 ಸ್ಪೂನ್ * ಆಮ್ಲಾ ಪುಡಿ 1 ಸ್ಪೂನ್ * ಬೃಂಗರಾಜ ಪುಡಿ 1 ಸ್ಪೂನ್ * ಮೆಹಂದಿ ಪುಡಿ 1 ಸ್ಪೂನ್ * ಕಾಫಿಪುಡಿ 1 ಸ್ಪೂನ್
ನೈಸರ್ಗಿಕವಾಗಿ ಮನೆಯಲ್ಲೇ ಹೇರ್ ಪ್ಯಾಕ್ ತಯಾರಿಸಲು ಮೊದಲಿಗೆ ಒಂದು ಬಾಣಲೆಯಲ್ಲಿ ಸಾಸಿವೆ ಎಣ್ಣೆ ಹಾಕಿ ಅದು ಸ್ವಲ್ಪ ಬಿಸಿ ಆಗುತ್ತಿದ್ದಂತೆ ಇದರಲ್ಲಿ ಆಮ್ಲಾ, ಬೃಂಗರಾಜ, ಮೆಹಂದಿ ಹಾಗೂ ಕಾಫಿಪುಡಿಯನ್ನು ಹಾಕಿ ಎಲ್ಲವನ್ನೂ ಮಿಶ್ರಣ ಮಾಡಿ ಐದು ನಿಮಿಷ ಸಣ್ಣ ಉರಿಯಲ್ಲಿ ಕಾಯಿಸಿ.
ಹೀಗೆ ಮನೆಯಲ್ಲೇ ತಯಾರಿಸಿದ ಹೇರ್ ಪ್ಯಾಕ್ ಅನ್ನು ನೀವು ತಲೆಗೆ ಸ್ನಾನ ಮಾಡುವ ಅರ್ಧಗಂಟೆ ಮೊದಲು ಕೂದಲಿನ ಬುಡದಿಂದ ತುದಿಯವರೆಗೂ ಹಚ್ಚಿ ಸೌಮ್ಯ ಶಾಂಪೂವಿನಿಂದ ಹೇರ್ ವಾಶ್ ಮಾಡಿ.
ಮನೆಯಲ್ಲೇ ತಯಾರಿಸಿದ ಈ ಹೇರ್ ಡೈ ಅನ್ನು ನಿಯಮಿತವಾಗಿ ಬಳಸುವುದರಿಂದ ಬಿಳಿ ಕೂದಲು ಶಾಶ್ವತವಾಗಿ ಕಪ್ಪಾಗಿ, ದಟ್ಟವಾಗಿ ಉದ್ದವಾಗಿ ಕಾಂತಿಯುತವಾಗಿ ಬೆಳೆಯುತ್ತದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.