Idli Recipe: ದಕ್ಷಿಣ ಭಾರತದ ವಿಶೇಷ ಉಪಹಾರ ದಹಿ ಇಡ್ಲಿ ಮಾಡುವ ಸುಲಭ ವಿಧಾನ
ದಹಿ ಇಡ್ಲಿ ತಿಂದರೆ ಹೊಟ್ಟೆ ತಂಪಾಗುತ್ತದೆ. ಇದನ್ನು ತಿನ್ನುವುದರಿಂದ ಆರೋಗ್ಯಕ್ಕೆ ಲಾಭ ನೀಡುತ್ತೆ. ಮೇಲಾಗಿ ಮೊಸರನ್ನು ನೇರವಾಗಿ ತಿನ್ನಲು ಇಷ್ಟಪಡದವರು ಇದನ್ನು ತಯಾರಿಸಿ ತಿನ್ನುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು.
ದಹಿ ಇಡ್ಲಿ ಮಾಡಲು ಮೊದಲು ಸಾಮಾನ್ಯವಾಗಿ ಮನೆಯಲ್ಲಿ ಮಾಡುವ ಇಡ್ಲಿ ತಯಾರಿಸಿ. ಇಡ್ಲಿಗಳನ್ನು ಮಾಡಿದ ನಂತರ, ಅವುಗಳನ್ನು ಸಣ್ಣಗೆ ಕತ್ತರಿಸಿ ಪಕ್ಕಕ್ಕೆ ಇರಿಸಿ.
ಇದಕ್ಕೆ ಮೊಸರು ಮತ್ತು ಇಂಗು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣಕ್ಕೆ ಸಕ್ಕರೆ ಮತ್ತು ಉಪ್ಪನ್ನು ಸೇರಿಸಿ.
ಈಗ ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ. ಇದಕ್ಕೆ ಸಾಸಿವೆ, ಉದ್ದಿನಬೇಳೆ, ಕೆಂಪು ಮೆಣಸಿನಕಾಯಿ ಮತ್ತು ಕರಿಬೇವು ಸೇರಿಸಬೇಕು. ಚೆನ್ನಾಗಿ ಫ್ರೈ ಮಾಡಿ.
ಈಗ ಮೊದಲು ಬೆರೆಸಿದ ಮೊಸರು ಇಂಗು ಮಿಶ್ರಣ ಸೇರಿಸಿ ಚೆನ್ನಾಗಿ ಕಲಿಸಿ. ಹಸಿಮೆಣಸಿನಕಾಯಿ ಮತ್ತು ತುರಿದ ತೆಂಗಿನಕಾಯಿ ಸೇರಿಸಿ ಚೆನ್ನಾಗಿ ಕಲಿಸಿ.
ಈ ಮಿಶ್ರಣಕ್ಕೆ ಸಿದ್ಧಪಡಿಸಿದ ಇಡ್ಲಿಗಳನ್ನು ಸೇರಿಸಿ. 15 ನಿಮಿಷಗಳ ಕಾಲ ಅದನ್ನು ನೆನೆಯಲು ಬಿಡಿ. ದಹಿ ಇಡ್ಲಿ ಸವಿಯಲು ಸಿದ್ಧ.