ಚಳಿಗಾಲದಲ್ಲಿ ಕೂದಲಿನ ಸಮಸ್ಯೆಗಳಿಂದ ಪರಿಹಾರಕ್ಕಾಗಿ ಈ ಸುಲಭ ಟಿಪ್ಸ್ ಅನುಸರಿಸಿ!
ಚಳಿಗಾಲದಲ್ಲಿ ಕೂದಲು ಉದುರುವಿಕೆ, ತಲೆಹೊಟ್ಟು, ಕೂದಲು ಕಳೆಗುಂದುವಂತಹ ಸಮಸ್ಯೆಗಳು ಸರ್ವೇ ಸಾಮಾನ್ಯವಾಗಿ ಕಾಡುತ್ತದೆ. ಆದರೆ, ಸಣ್ಣ ಕಾಳಜಿ ವಹಿಸುವ ಮೂಲಕ ಚಳಿಗಾಲದಲ್ಲಿ ಕಾಡುವ ಕೂದಲಿನ ಸಮಸ್ಯೆಗಳಿಂದ ಪರಿಹಾರ ಪಡೆಯಬಹುದು.
ಚಳಿಗಾಲದಲ್ಲಿ ಕೂದಲು ಹಾನಿಗೊಳಗಾಗಳು ಬಿಸಿ ನೀರಿನಿಂದ ಸ್ನಾನ ಮಾಡುವುದು, ಹೇರ್ ಡ್ರೈಯರ್‌ಗಳು, ಉಣ್ಣೆ ಬಟ್ಟೆಗಳ ಬಳಕೆ, ಹವಾಮಾನ ವೈಪರಿತ್ಯ ಎಲ್ಲವೂ ಕಾರಣವಾಗಿರುತ್ತದೆ.
ಆದಾಗ್ಯೂ, ಚಳಿಗಾಲದಲ್ಲಿ ಕೂದಲಿನ ಆರೈಕೆ ಬಗ್ಗೆ ಸಣ್ಣ ಸಣ್ಣ ಕಾಳಜಿ ವಹಿಸುವ ಮೂಲಕ ಕೂದಲನ್ನು ಹಾನಿಗೊಳಗಾಗದಂತೆ ರಕ್ಷಿಸಬಹುದು.
ಚಳಿಗಾಲದಲ್ಲಿ ಉಣ್ಣೆಯ ಟೋಪಿ ಹಾಕುವುದರಿಂದ ಕೂದಲು ಒಡೆಯುತ್ತದೆ. ನೀವು ಟೋಪಿ ಧರಿಸುವ ಮೊದಲು ಸ್ಯಾಟಿನ್ ಬಟ್ಟೆಯ ಸ್ಕಾರ್ಫ್ ಧರಿಸಿದರೆ ಚಳಿಯಿಂದ ರಕ್ಷಣೆಯೂ ದೊರೆಯುತ್ತದೆ. ಕೂದಲು ಸಹ ಹಾನಿಯಾಗುವುದಿಲ್ಲ.
ಚಳಿಗಾಲದಲ್ಲಿ ಹೇರ್ ವಾಶ್ ಮಾಡುವುದೇ ದೊಡ್ಡ ಕೆಲಸ. ಹಾಗಾಗಿ, ಕೆಲವರು ಹೇರ್ ಕಂಡೀಷನರ್ ಅಪ್ಪ್ಲೈ ಮಾಡುವುದಿಲ್ಲ. ಆದರೆ, ಚಳಿಗಾಲದಲ್ಲಿ ತಪ್ಪದೇ ಹೇರ್ ಕಂಡೀಷನರ್ ಅನ್ವಯಿಸಿ. ಇದರಿಂದ ಕೂದಲಿಗೆ ಮರುಜೀವ ನೀಡಿದಂತಾಗುತ್ತದೆ.
ಚಳಿಗಾಲದಲ್ಲಿ ಕೂದಲು ಬೇಗ ಒಣಗಲೆಂದು ಹೇರ್ ಡ್ರೈಯರ್‌ಗಳನ್ನು ಬಳಸಲಾಗುತ್ತದೆ. ಆದರಿದು ನಿಮ್ಮ ಕೂದಲನ್ನು ಅತಿ ಹೆಚ್ಚು ಹಾನಿಗೊಳಿಸುತ್ತದೆ.
ಕೂದಲಿಗೆ ಎಣ್ಣೆಹಚ್ಚಿ ಹೊರಗೆ ಹೋಗುವುದರಿಂದ ತಲೆಹೊಟ್ಟಿನ ಸಮಸ್ಯೆ ಹೆಚ್ಚಾಗುತ್ತದೆ. ಇದನ್ನು ತಪ್ಪಿಸಲು ನೀವು ಮನೆಯಲ್ಲಿರುವಾಗ ಕೂದಲಿಗೆ ಆಯಿಲ್ ಮಸಾಜ್ ಮಾಡುವುದನ್ನು ಪರಿಗಣಿಸಿ.
ಚಳಿಗಾಲದಲ್ಲಿ ತಪ್ಪದೆ ಹೇರ್ ಸ್ಪಾ ತೆಗೆದುಕೊಳ್ಳಿ. ಹೇರ್ ಸ್ಪಾ ಆಯಿಲ್ ಮಸಾಜ್, ಸ್ಟೀಮಿಂಗ್, ಶಾಂಪೂ, ಕಂಡೀಷನರ್ ಎಲ್ಲದರ ಸಂಪೂರ್ಣ ಸಂಯೋಜನೆ ಆಗಿರುವುದರಿಂದ ಇದು ಕೂದಲಿನ ಆರೈಕೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.