ವಾರದಲ್ಲಿ ಕೇವಲ ಎರಡು ಕಪ್ ಈ ಬಿಳಿ ವಸ್ತು ಸೇವಿಸಿ ! Diabetes ನಿಯಂತ್ರಣಕ್ಕೆ ಬರುವುದು ಗ್ಯಾರಂಟಿ !
ಈ ಕಾಯಿಲೆಯಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು, ಜಾಗೃತರಾಗಿರುವುದು ಬಹಳ ಮುಖ್ಯ.ನಮ್ಮ ಆಹಾರದಲ್ಲಿ ಕೆಲವೊಂದು ಪದಾರ್ಥಗಳನ್ನು ಸೇರಿಸಿಕೊಳ್ಳುವ ಮೂಲಕ ಮಧುಮೇಹವನ್ನು ದೂರ ಇಡಬಹುದು.
ಇದಕ್ಕಾಗಿ ಮೊದಲು ಮೊಸರನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬೇಕು. ಹಾಗಿದ್ದರೆ ಮೊಸರು ಮಧುಮೇಹ ತಡೆಗೆ ಹೇಗೆ ಸಹಾಯ ಮಾಡುತ್ತದೆ ಎನ್ನುವುದು ನೋಡೋಣ.
ವಾರಕ್ಕೆ ಕನಿಷ್ಠ ಎರಡು ಕಪ್ ಮೊಸರು ತಿನ್ನುವ ಮೂಲಕ ಮಧುಮೇಹದ ಅಪಾಯವನ್ನು ಕಡಿಮೆ ಮಾಡಬಹುದು ಎನ್ನಲಾಗಿದೆ.
ಮೊಸರು ಕ್ಯಾಲ್ಸಿಯಂ, ಪ್ರೋಟೀನ್, ವಿಟಮಿನ್ ಬಿ ಮತ್ತು ಮೆಗ್ನೀಸಿಯಮ್, ರಂಜಕ ಮತ್ತು ಪೊಟ್ಯಾಸಿಯಮ್‌ನಂತಹ ಖನಿಜಗಳಲ್ಲಿ ಸಮೃದ್ಧವಾಗಿದೆ. ಇದು ಪ್ರೋಬಯಾಟಿಕ್‌ಗಳ ಸಮೃದ್ಧ ಮೂಲ. ಇದು ಉರಿಯೂತವನ್ನು ಕಡಿಮೆ ಮಾಡಲು ಮತ್ತು ಇನ್ಸುಲಿನ್ ಸೂಕ್ಷ್ಮತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ಡಯಾಬಿಟಿಸ್ ಆರ್ಗನೈಸೇಶನ್ ಪ್ರಕಾರ, ಮಧುಮೇಹ ರೋಗಿಗಳಿಗೆ, ದೃಷ್ಟಿಹೀನತೆ, ಕಾಲುಗಳು ಮರಗಟ್ವುಟುವಿಕೆ, ಹೃದಯಾಘಾತ, ಪಾರ್ಶ್ವವಾಯು, ಮೂತ್ರಪಿಂಡದ ಹಾನಿ, ನರ ಹಾನಿ, ಕ್ಯಾನ್ಸರ್, ಬಾಯಿ ಮತ್ತು ಲೈಂಗಿಕ ಆರೋಗ್ಯ ಸಮಸ್ಯೆಗಳ ಅಪಾಯವು ಹಲವಾರು ಪಟ್ಟು ಹೆಚ್ಚಾಗುತ್ತದೆ.
ಅನಾರೋಗ್ಯಕರ ಜೀವನಶೈಲಿಯನ್ನು ಅನುಸರಿಸುವ ಎಲ್ಲರೂ ಮಧುಮೇಹದ ಅಪಾಯವನ್ನು ಹೊಂದಿರುತ್ತಾರೆ. ಬೊಜ್ಜಿನ ಸಮಸ್ಯೆ ಇದ್ದು, ನಿಮ್ಮ ವಯಸ್ಸು 45 ಕ್ಕಿಂತ ಹೆಚ್ಚಾಗಿದ್ದಾಗ ಅಪಾಯವು ಇನ್ನಷ್ಟು ಹೆಚ್ಚಾಗುತ್ತದೆ.