ಉತ್ತಮ ಆರೋಗ್ಯಕ್ಕಾಗಿ ಮಾರ್ನಿಂಗ್ ಉಪಹಾರದಲ್ಲಿ ಈ ಒಂದು ಸೂಪರ್‌ಫುಡ್ ಸೇವಿಸಿ
ಮೊಳಕೆ ಕಟ್ಟಿದ ಹಸಿರುಕಾಳಿನಲ್ಲಿ ಫೈಬರ್ ಸಮೃದ್ಧವಾಗಿದೆ. ನಿತ್ಯ ಉಪಹಾರದಲಿ ಇದನ್ನು ಸೇವಿಸುವುದರಿಂದ ಇದು ಜೀರ್ನಕ್ರಿಯೇಯನು ಸುಧಾರಿಸುತ್ತದೆ.
ಮೊಳಕೆ ಕಟ್ಟಿದ ಹಸಿರುಕಾಳು ಉತ್ತಮ ಆಂಟಿ ಏಜಿಂಗ್ ಕೂಡ ಹೌದು. ಇದು ನಮ್ಮ ಚರ್ಮದಲ್ಲಿ ವಯಸ್ಸಾದಂತೆ ಕಾಣಿಸಿಕೊಳ್ಳುವ ಚರ್ಮದ ಸುಕ್ಕನ್ನು ನಿವಾರಿಸುತ್ತದೆ ಎಂದು ಹೇಳಲಾಗುತ್ತದೆ.
ತೂಕ ಇಳಿಕೆ ಪ್ರಕ್ರಿಯೆಯಲ್ಲಿರುವವರಿಗೆ ಮೊಳಕೆ ಕಟ್ಟಿದ ಹಸಿರುಕಾಳು ತುಂಬಾ ಪ್ರಯೋಜನಕಾರಿ ಆಗಿದೆ. ನೀವು ನಿಮ್ಮ ಬೆಳಗಿನ ಉಪಹಾರದಲ್ಲಿ ಮೊಳಕೆಕಟ್ಟಿದ ಹಸಿರುಕಾಳು ಸೇವಿಸುವುದರಿಂದ ನಿರೀಕ್ಷಿತ ಪಡೆಯಬಹುದು.
ನೀವು ಬೆಳಗಿನ ಉಪಾಹಾರದಲ್ಲಿ ಫೈಬರ್ ಮತ್ತು ಐರನ್ ರಿಚ್ ಸೂಪರ್‌ಫುಡ್ ಆಗಿರುವ ಮೊಳಕೆ ಕಟ್ಟಿದ ಕಾಳು ತಿನ್ನುವುದರಿಂದ ರಕ್ತಹೀನತೆಯಂತಹ ಸಮಸ್ಯೆಯನ್ನು ಕೂಡ ನಿವಾರಿಸಬಹುದು.
ಉತ್ತಮ ದೃಷ್ಟಿಗೆ ವಿಟಮಿನ್ ಎ ಬಹಳ ಮುಖ್ಯ. ಬೆಳಗಿನ ಉಪಹಾರದಲ್ಲಿ ಮೊಳಕೆಯೊಡೆದ ಕಾಳು ಸೇವಿಸುವುದರಿಂದ ಕಣ್ಣಿನ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು Zee ಮೀಡಿಯಾ ಖಚಿತಪಡಿಸುವುದಿಲ್ಲ.