ಪಥ್ಯ ಔಷಧಿ ಮರೆತು ಬಿಡಿ !ಊಟವಾದ ತಕ್ಷಣ ಈ ಕಾಳನ್ನು ಬಾಯಿಗೆ ಹಾಕಿಕೊಳ್ಳಿ !ಬ್ಲಡ್ ಶುಗರ್ ನಾರ್ಮಲ್ ಆಗುವುದು ಖಚಿತ
ಇನ್ನು ಶುಗರ್ ಇದ್ದವರು ಖಾಲಿ ಹೊಟ್ಟೆಗೆ ಏನು ತಿನ್ನುತ್ತಾರೆ.ಆಹಾರ ಸೇವನೆ ನಂತರ ಏನು ತಿನ್ನುತ್ತಾರೆ ಎನ್ನುವುದು ಕೂಡಾ ಬಹಳ ಮುಖ್ಯವಾಗಿರುತ್ತದೆ.
ಸಾಮಾನ್ಯವಾಗಿ ಆಹಾರ ಸೇವಿಸಿದ ತಕ್ಷಣ ಶುಗರ್ ಏರುವುದಕ್ಕೆ ಆರಂಭವಾಗುತ್ತದೆ. ಇದನ್ನು ತಡೆಯಬೇಕಾದರೆ ಊಟ ಮಾಡಿದ ತಕ್ಷಣ ಈ ಕಾಳನ್ನು ಬಾಯಿಗೆ ಹಾಕಿಕೊಳ್ಳಿ.
ಜೀರಿಗೆ ಶುಗರ್ ಮತ್ತು ಬಿಪಿ ಎರಡನ್ನೂ ನಾರ್ಮಲ್ ಮಾಡುವಲ್ಲಿ ಬಹಳ ಮುಖ್ಯ ಪಾತ್ರ ವಹಿಸುತ್ತದೆ.ಹಾಗಿದ್ದರೆ ಇದನ್ನು ಹೇಗೆ ಸೇವಿಸಬೇಕು ಎನ್ನುವುದು ಮುಖ್ಯವಾಗುತ್ತದೆ.
ಜೀರಿಗೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುವಲ್ಲಿ ಮಹತ್ತರ ಪಾತ್ರ ವಹಿಸುತ್ತದೆ. ಜೀರಿಗೆ ದೇಹದಲ್ಲಿ ಇನ್ಸುಲಿನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಹಾಗಾಗಿ ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ.
ಒಂದು ಚಮಚದಷ್ಟು ಹುರಿದ ಜೀರಿಗೆಯನ್ನು ತೆಗೆದುಕೊಂಡು ಊಟವಾದ ತಕ್ಷಣ ಹಾಗಯೇ ಬಾಯಿಯಲ್ಲಿ ಹಾಕಿಕೊಂಡು ಜಗಿದು ರಸ ಕುಡಿಯಿರಿ. ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಜೀರ್ಣಕ್ರಿಯೆ ಸರಿಯಾಗಿ ಆದಾಗ ಬ್ಲಡ್ ಶುಗರ್ ಏರುವುದಿಲ್ಲ.
ಗ್ಲಾಸ್ ನೀರಿಗೆ 1 ಚಮಚ ಜೀರಿಗೆ ಸೇರಿಸಿ 5 ನಿಮಿಷಗಳ ಕಾಲ ಕಡಿಮೆ ಉರಿಯಲ್ಲಿ ಕುದಿಸಿ.ನಂತರ ನೀರನ್ನು ಫಿಲ್ಟರ್ ಮಾಡಿ.ಬೇಕಾದರೆ ನಿಂಬೆರಸ ಸೇರಿಸಿ ಕುಡಿಯಬಹುದು.
ಜೀರಿಗೆ ನೀರನ್ನು ಊಟ ತಿಂಡಿ ಸೇವಿಸಿದ ನಂತರ ಕುಡಿದರೂ ಬೆಸ್ಟ್ ರಿಸಲ್ಟ್ ನೀಡುತ್ತದೆ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೂ ಶುಗರ್ ಕಂಟ್ರೋಲ್ ಮಾಡುತ್ತದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.