Vitamin A Rich Vegetables: ದೃಷ್ಟಿದೋಷಕ್ಕೆ ಕಾರಣವಾಗುವ Vitamin A ಕೊರತೆ ದೂರ ಮಾಡಲು ಈ 5 ತರಕಾರಿ ಸೇವಿಸಿ

Thu, 24 Nov 2022-9:50 am,

ಬ್ರೊಕೊಲಿಯು ತುಂಬಾ ಪೌಷ್ಟಿಕಾಂಶ ಹೊಂದಿರುವ ತರಕಾರಿ. ಇದನ್ನು ತಿನ್ನುವುದರಿಂದ ದೃಷ್ಟಿ ಸುಧಾರಿಸುತ್ತದೆ. ನೀವು ಈ ತರಕಾರಿಯನ್ನು ಅರ್ಧ ಕಪ್ ತಿಂದರೆ, ದೇಹವು ಸುಮಾರು 60 ಮೈಕ್ರೋಗ್ರಾಂಗಳಷ್ಟು ವಿಟಮಿನ್ ಎ ಅನ್ನು ಪಡೆಯುತ್ತದೆ.

ಕ್ಯಾರೆಟ್ ತಿನ್ನುವುದು ಕೂಡ ಉತ್ತಮ. ಚಳಿಗಾಲದ ಸಂದರ್ಭದಲ್ಲಿ ಈ ತರಕಾರಿಗಳನ್ನು ಸೇವಿಸಿದರೆ ದೇಹಕ್ಕೆ ಉತ್ತಮ ಆರೋಗ್ಯ ಲಭಿಸುತ್ತದೆ. ಕೆಂಪು, ಕಿತ್ತಳೆ ಮತ್ತು ಕಪ್ಪು ಬಣ್ಣವನ್ನು ಹೊಂದಿರುವ ಕ್ಯಾರೆಟ್ ನ್ನು ಅರ್ಧ ಕಪ್ ತಿಂದರೆ 459 ಮೈಕ್ರೋಗ್ರಾಂಗಳಷ್ಟು ವಿಟಮಿನ್ ಎ ಸಿಗುತ್ತದೆ.

ಕುಂಬಳಕಾಯಿಯೂ ಸಹ ಉತ್ತಮ ಆರೋಗ್ಯಕರ ಪೋಷಕಾಂಶಗಳನ್ನು ಹೊಂದಿರುವ ತರಕಾರಿ. 100 ಗ್ರಾಂ ಕುಂಬಳಕಾಯಿಯನ್ನು ಬೇಯಿಸಿ ಸೇವಿಸಿದರೆ, 170% ವಿಟಮಿನ್ ಎ ಅನ್ನು ದೇಹ ಪಡೆಯುತ್ತದೆ.

ಸ್ಪಿನಾಚ್ ಅಥವಾ ಪಾಲಕ್ ಸೊಪ್ಪಿನಲ್ಲಿ ಅನೇಕ ಜೀವಸತ್ವಗಳಿದ್ದು, ಇದು ದೇಹಕ್ಕೆ ಪೋಷಕಾಂಶವನ್ನು ನೀಡುತ್ತದೆ. ಅರ್ಧ ಕಪ್ ಬೇಯಿಸಿದ ಪಾಲಕ್ ಸೇವಿಸಿದರೆ, ದೇಹವು ಸುಮಾರು 573 ಮೈಕ್ರೋಗ್ರಾಂಗಳಷ್ಟು ವಿಟಮಿನ್ ಎ ಅನ್ನು ಪಡೆಯುತ್ತದೆ.

ಗೆಣಸು ಬೀಟಾ-ಕ್ಯಾರೋಟಿನ್ ರೂಪದಲ್ಲಿ ವಿಟಮಿನ್ ಎ ಅನ್ನು ಹೊಂದಿರುತ್ತದೆ. ಇದು ಎಎಮ್‌ಡಿ ವಿರುದ್ಧ ಹೋರಾಡಿ ದೇಹಕ್ಕೆ ರಕ್ಷಣೆ ನೀಡುತ್ತದೆ. ಇಡೀ ಸಿಹಿ ಗೆಣಸನ್ನು ಬೇಯಿಸಿ ತಿಂದರೆ ದೇಹಕ್ಕೆ 1403 ಮೈಕ್ರೋಗ್ರಾಂಗಳಷ್ಟು ವಿಟಮಿನ್ ಎ ಸಿಗುತ್ತದೆ.

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ZEENEWS TRENDING STORIES

By continuing to use the site, you agree to the use of cookies. You can find out more by Tapping this link