ಈ ಐದು ಆಹಾರವನ್ನು ಸೇವಿಸುತ್ತೀರಿಯಾದರೆ ನಿಮ್ಮ ಕೂದಲು ಉದುರಲು ಚಾನ್ಸೇ ಇಲ್ಲ
ಪ್ರೋಟೀನ್ ಮತ್ತು ಕ್ಯಾಲ್ಸಿಯಂನ ಅಗತ್ಯವನ್ನು ಪೂರೈಸಲು ಮೊಸರು ಅತ್ಯುತ್ತಮ ಮೂಲವೆಂದು ಪರಿಗಣಿಸಲಾಗಿದೆ. ಇನ್ನು ಮೊಸರು ಪ್ರೋಬಯಾಟಿಕ್‌ಗಳನ್ನು ಹೊಂದಿರುತ್ತದೆ. ಅದು ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಕೂದಲು ಬೋಳಾಗದಂತೆ ತಡೆಯುತ್ತದೆ.
ವಾಲ್ನಟ್ ಕೂದಲಿಗೆ ಪ್ರಯೋಜನಕಾರಿಯಾಗಿದೆ. ಏಕೆಂದರೆ ಅದು ವಿಟಮಿನ್ ಇ, ವಿಟಮಿನ್ ಬಿ, ಒಮೆಗಾ -3 ಕೊಬ್ಬಿನಾಮ್ಲಗಳು ಮತ್ತು ಪ್ರೋಟೀನ್ ಗಳನ್ನು ಹೊಂದಿರುತ್ತವೆ. ಈ ಎಲ್ಲಾ ಅಂಶಗಳು ಕೂದಲನ್ನು ಬಲವಾಗಿಡುವುದಲ್ಲದೆ, ಹೊಳೆಯುವಂತೆ ಮಾಡಲು ಸಹಾಯ ಮಾಡುತ್ತದೆ. ಇದರಿಂದಾಗಿ ಕೂದಲು ಉದುರುವುದನ್ನು ತಡೆಯಬಹುದು.
ಪಾಲಕ್ ಮತ್ತು ಮೆಂತ್ಯೆ ಸೊಪ್ಪುಗಳಂಥಹ ತರಕಾರಿಗಳು ಫೈಬರ್, ಫೋಲೇಟ್, ಕಬ್ಬಿಣ ಮತ್ತು ವಿಟಮಿನ್ ಸಿ ಅನ್ನು ಹೊಂದಿರುತ್ತವೆ. ಇದು ಕೂದಲಿನ ಆರೋಗ್ಯಕ್ಕೆ ಅವಶ್ಯಕವಾಗಿದೆ. ಇದು ಕೂದಲನ್ನು ಬಲಪಡಿಸಲು ಸಹಾಯ ಮಾಡುತ್ತದೆ.
ಆವಕಾಡೊ ಫೋಲಿಕ್ ಆಮ್ಲ, ವಿಟಮಿನ್ ಇ ಮತ್ತು ಕ್ಯಾಲ್ಸಿಯಂನ ಉತ್ತಮ ಮೂಲವಾಗಿದೆ. ಇದರ ಸೇವನೆಯಿಂದ ಕೂದಲು ಬಲಗೊಳ್ಳುತ್ತದೆ ಮತ್ತು ಉದುರುವುದನ್ನು ತಡೆಯುತ್ತದೆ.
ಮೊಟ್ಟೆಗಳು ಕೂದಲಿನ ಸಂಪೂರ್ಣ ಪೋಷಣೆಯ ಪ್ರಮುಖ ಮೂಲವಾಗಿದೆ. ಇವುಗಳಲ್ಲಿ ಪ್ರೋಟೀನ್, ವಿಟಮಿನ್ ಡಿ ಮತ್ತು ವಿಟಮಿನ್ ಬಿ 12 ಸೇರಿವೆ. ಇದು ಕೂದಲನ್ನು ಬಲಪಡಿಸಲು ಮತ್ತು ಕೂದಲು ಉದುರುವಿಕೆಯನ್ನು ತಡೆಯಲು ಸಹಾಯ ಮಾಡುತ್ತದೆ.