ಚಳಿಗಾಲದಲ್ಲಿ ಉತ್ತಮ ಆರೋಗ್ಯಕ್ಕಾಗಿ ಈ ಆಹಾರಗಳನ್ನು ತಪ್ಪದೇ ಸೇವಿಸಿ

Tue, 17 Jan 2023-4:48 pm,

ಖರ್ಜೂರ : ಚಳಿಗಾಲದಲ್ಲಿ ಒಣ ಖರ್ಜೂರವನ್ನು ಸೇವಿಸುವುದು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಏಕೆಂದರೆ ಖರ್ಜೂರದ ಸೇವನೆಯಿಂದ ದೇಹವು ಬೆಚ್ಚಗಿರುತ್ತದೆ. ಆಯುರ್ವೇದದಲ್ಲೂ ಖರ್ಜೂರವು ಪ್ರಯೋಜನಕಾರಿ ಎಂದು ಹೇಳಲಾಗಿದ್ದು, ಇದರಿಂದ ಹಲವು ಆರೋಗ್ಯಕರ ಪ್ರಯೋಜನಗಳನ್ನು ಪಡೆಯಬಹುದಾಗಿದೆ.

ಕ್ಯಾರೆಟ್:   ಚಳಿಗಾಲಕ್ಕೆ ಕ್ಯಾರೆಟ್ ಬೆಸ್ಟ್ ತರಕಾರಿ. ಕ್ಯಾರೆಟನ್ನು ಹೇಗೆ ತಿಂದರೂ ದೇಹಕ್ಕೆ ಉಪಯೋಗ. ಹಸಿಯಾಗಿ ತಿಂದರೆ ದೈಹಿಕ ಶಕ್ತಿ ಹೆಚ್ಚುತ್ತದೆ. ಬೇಯಿಸಿ ತಿಂದರೆ ವಿಟಮಿನ್ ಎ ದೊರೆಯುತ್ತದೆ. ಕ್ಯಾರೆಟ್ ಜ್ಯೂಸ್ ಕುಡಿದರೆ ಕೇವಲ ಆರೋಗ್ಯ ಮಾತ್ರವಲ್ಲ, ಸೌಂದರ್ಯವೂ ಹೆಚ್ಚುತ್ತದೆ. ಕ್ಯಾರೆಟ್ ಜ್ಯೂಸ್ ಸೇವಿಸಿದರೆ ತ್ವಚೆ ಒಳಗಿನಿಂದಲೇ ಶುದ್ಧಗೊಂಡು ಹೊಳೆಯುವಂತೆ ಮಾಡುತ್ತದೆ.

ಸಿಹಿ ಗೆಣಸು :  ಸಿಹಿ ಗೆಣಸನ್ನು ಶಾಸ್ತ್ರಕ್ಕಾಗಿ ಸಂಕ್ರಾತಿಯ ಹಬ್ಬದಂದು ಮಾತ್ರ ಸೇವಿಸದೇ ಬೇರೆ ಸಮಯದಲ್ಲಿಯೂ ಇದು ಸೇವನೆ ಮಾಡಲೇಬೇಕಾದ ಸೂಪರ್ ಫುಡ್ ಆಗಿದೆ. ಏಕೆಂದರೆ ಇದರಲ್ಲಿನ ಪೌಷ್ಟಿಕ ಸತ್ವವು ದೇಹ ಹಾಗೂ ಚರ್ಮಕ್ಕೆ ಬೇಕಾದ ತೇವಾಂಶವನ್ನು ನೀಡುತ್ತದೆ.

ಮೂಲಂಗಿ :  ಮೂಲಂಗಿ ಈ ಚಳಿಗಾಲದಲ್ಲಿ ಹೇರಳವಾಗಿರುವ ದೊರೆಯುವ ತರಕಾರಿಯಾಗಿದೆ. ಮೂಲಂಗಿಯಲ್ಲಿ ಪೊಟ್ಯಾಸಿಯಮ್‌ನಲ್ಲಿ ಸಮೃದ್ಧವಾಗಿದೆ, ಇದು ರಕ್ತದೊತ್ತಡದ ಮಟ್ಟವನ್ನು ನಿಯಂತ್ರಿಸುತ್ತದೆ ಮತ್ತು ಹೃದಯದ ಕಾರ್ಯವನ್ನು ಸೂಕ್ತವಾಗಿ ನಿರ್ವಹಿಸುವಂತೆ ನೋಡಿಕೊಳ್ಳುತ್ತದೆ.

ಪಾಲಕ್ ಸೊಪ್ಪು : ಚಳಿಗಾಲದಲ್ಲಿ ಪಾಲಕ್ ಸೊಪ್ಪನ್ನು ಬಳಸುವುದರಿಂದ ದೇಹದ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಇದರಲ್ಲಿ ಹೇರಳ ಪ್ರಮಾಣದಲ್ಲಿ ಕ್ಯಾಲ್ಸಿಯಂ, ಸೋಡಿಯಂ, ಕ್ಲೋರಿನ್, ರಂಜಕ, ಪ್ರೋಟೀನ್ ಮತ್ತು ಕಬ್ಬಿಣ ಇರುತ್ತದೆ. ಪಾಲಕ್ ರಸವು ಅನೇಕ ಗಂಭೀರ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.

ಸೂಚನೆ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆ ಪಡೆಯಿರಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link