ನಿಮ್ಮ ಎಲುಬುಗಳನ್ನು ಕಬ್ಬಿಣದಂತೆ ಬಲಿಷ್ಠಗೊಳಿಸಲು ನಿತ್ಯ ಈ ಆಹಾರಗಳನ್ನು ತಿನ್ನಲೇಬೇಕು
ಆರೋಗ್ಯಕರ ದೇಹಕ್ಕೆ ಮೂಳೆಗಳು ಆರೋಗ್ಯಕರವಾಗಿರುವುದು ಕೂಡ ತುಂಬಾ ಅಗತ್ಯ. ನೀವು ನಿಮ್ಮ ಎಲುಬುಗಳನ್ನು ಕಬ್ಬಿಣದಂತೆ ಬಲಿಷ್ಠಗೊಳಿಸಲು ನಿತ್ಯ ಈ ಐದು ಆಹಾರಗಳನ್ನು ತಪ್ಪದೆ ಸೇವಿಸಿ. ಅವುಗಳೆಂದರೆ...
ವಿಟಮಿನ್ ಡಿ ಯ ಉತ್ತಮ ಮೂಲವಾಗಿರುವ ಹಾಲಿನಲ್ಲಿ ಕ್ಯಾಲ್ಸಿಯಂ ಕೂಡ ಸಮೃದ್ಧವಾಗಿದ್ದು ನಿತ್ಯ ಹಾಲು ಕುಡಿಯುವುದರಿಂದ ಮೂಳೆಗಳು ಬಲಿಷ್ಠಗೊಳ್ಳುತ್ತದೆ.
ಪ್ರೋಟೀನ್‌ನ ಉತ್ತಮ ಮೂಲವಾಗಿರುವ ಮೊಟ್ಟೆಗಳಲ್ಲಿಯೂ ವಿಟಮಿನ್ ಡಿ ಹೇರಳವಾಗಿ ಕಂಡು ಬರುತ್ತದೆ. ಇದರ ಸೇವನೆಯು ಮೂಳೆಗಳ ಆರೋಗ್ಯಕ್ಕೆ ತುಂಬಾ ಒಳ್ಳೆಯದು.
ವಿಟಮಿನ್ ಕೆಯ ಅತ್ಯುತ್ತಮ ಮೂಲ ಎಂದು ಪರಿಗಣಿಸಲಾಗಿರುವ ಸೋಯಾಬೀನ್ ನಲ್ಲಿ ಕ್ಯಾಲ್ಸಿಯಂ ಮತ್ತು ಪ್ರೋಟೀನ್ ಎರಡೂ ಹೆರಳವಾಗಿದೆ. ಇದೂ ಸಹ ಮೂಳೆಗಳನ್ನು ಕಬ್ಬಿಣದಂತೆ ಬಲಿಷ್ಠಗೊಳಿಸುವಲ್ಲಿ ಪ್ರಯೋಜನಕಾರಿ ಆಗಿದೆ.
ಪಾಲಕ್ ಸೊಪ್ಪಿನಲ್ಲಿ ವಿಟಮಿನ್ ಸಿ ಜೊತೆಗೆ ಕ್ಯಾಲ್ಸಿಯಂ, ವಿಟಮಿನ್ ಕೆ ಮತ್ತು ಕಬ್ಬಿಣಾಂಶ ಸಮೃದ್ಧವಾಗಿದೆ. ಈ ಎಲ್ಲಾ ಪೋಷಕಾಂಶಗಳು ಮೂಳೆಗಳ ಆರೋಗ್ಯಕ್ಕೆ ತುಂಬಾ ಅವಶ್ಯಕ.
ಹೆಚ್ಚಿನ ಪ್ರಮಾಣದ ಕ್ಯಾಲ್ಸಿಯಂ, ಮೆಗ್ನೀಸಿಯಮ್ ಮತ್ತು ವಿಟಮಿನ್ ಇ ಹೊಂದಿರುವ ಬಾದಾಮಿ ಸೇವನೆಯು ಮೂಳೆಗಳ ರಚನೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಕೆಲವು ಸಂಶೋಧನೆ ಹಾಗೂ ಸಾಮಾನ್ಯ ಮಾಹಿತಿಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.