ನೀವು ತುಂಬಾ ಸಣ್ಣಗಿದ್ದೀರಾ! ತೂಕ ಹೆಚ್ಚಿಸಿಕೊಳ್ಳಲು ಈ ಆಹಾರಗಳನ್ನು ಸೇವಿಸಿ
ಬಾದಾಮಿ ಹಾಲು: ಬಾದಾಮಿ ಹಾಲಿನ ಜೊತೆ ಹಸಿ ಅಥವಾ ಒಣ ಕರ್ಜೂರ ಮತ್ತು ಒಣದ್ರಾಕ್ಷಿ ಹಾಕಿ ಕುಡಿಯುವುದರಿಂದ ದೇಹಕ್ಕೆ ಸಾಕಷ್ಟು ಪ್ರಮಾಣದಲ್ಲಿ ಪೌಷ್ಟಿಕಾಂಶಗಳು ಸಿಗುತ್ತವೆ. ಮಾತ್ರವಲ್ಲ ಇದು ತೂಕ ಹೆಚ್ಚಳಕ್ಕೂ ಸಹಕಾರಿ ಆಗಿದೆ.
ಸಕ್ಕರೆ ಮತ್ತು ಬೆಣ್ಣೆ: ನಿಮ್ಮ ದೇಹದ ತೂಕವನ್ನು ಹೆಚ್ಚಿಸಿಕೊಳ್ಳಲು ಇನ್ನೊಂದು ಸುಲಭವಾದ ಪರಿಹಾರ ಎಂದರೆ ಬೆಣ್ಣೆ ಜೊತೆ ಸಕ್ಕರೆಯನ್ನು ಮಿಶ್ರಣ ಮಾಡಿ ಸೇವನೆ ಮಾಡಬೇಕು.
ಆಲೂಗಡ್ಡೆ: ನಿಯಮಿತವಾಗಿ ಆಲೂಗಡ್ಡೆ ತಿನ್ನುವ ಅಭ್ಯಾಸ ಇರುವವರಿಗೆ ದೇಹದ ತೂಕ ಬಹಳ ಬೇಗನೆ ಹೆಚ್ಚಾಗುತ್ತದೆ. ಏಕೆಂದರೆ ಇದರಲ್ಲಿ ಕಾರ್ಬೋಹೈಡ್ರೇಟ್ ಹೆಚ್ಚಾಗಿದೆ.
ಪಿಸ್ತಾ : ಪಿಸ್ತಾ ಬೀಜಗಳಲ್ಲಿ ಕೊಬ್ಬಿನ ಅಂಶ ಮತ್ತು ಕ್ಯಾಲೊರಿ ಅಂಶವಾಗಿ ಹೇರಳವಾಗಿದೆ. ನಿತ್ಯ ಸೀಮಿತ ಪ್ರಮಾಣದಲ್ಲಿ ಪಿಸ್ತಾ ಸೇವಿಸುವುದರಿಂದಲೂ ತೂಕ ಹೆಚ್ಚಿಸಿಕೊಳ್ಳಬಹುದು.
ಒಣದ್ರಾಕ್ಷಿ: ಒಣದ್ರಾಕ್ಷಿಯಲ್ಲಿ ಮ್ಯಾಂಗನೀಸ್, ಮೆಗ್ನೀಷಿಯಂ, ವಿಟಮಿನ್ ಸಮೃದ್ಧವಾಗಿರುವ ಕಾರಣ ನಿಯಮಿತ ದ್ರಾಕ್ಷಿ ಸೇವನೆಯಿಂದ ತೂಕ ಹೆಚ್ಚಿಸಿಕೊಳ್ಳಬಹುದು
ಕಡಲೆ ಬೀಜಗಳು ( ಶೇಂಗ ) : ಕಡಲೆ ಬೀಜಗಳಲ್ಲಿ ಹೆಚ್ಚಿನ ಪ್ರಮಾಣದ ಕೊಬ್ಬಿನ ಅಂಶ ಮತ್ತು ಕ್ಯಾಲೋರಿ ಅಂಶ ಇರುವ ಕಾರಣ, ಬಹಳ ವೇಗವಾಗಿ ನಿಮ್ಮ ದೇಹದ ತೂಕವನ್ನು ಹೆಚ್ಚಿಸಿಕೊಳ್ಳಲು ಇದು ನೆರವಾಗುತ್ತದೆ.
ಸೂಚನೆ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆ ಪಡೆಯಿರಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.