ಕೂದಲನ್ನು ಕಪ್ಪಾಗಿಡಲು ತುಂಬಾ ಅಗತ್ಯ ಜೀವಸತ್ವಗಳಿವು! ಈ ಆಹಾರಗಳನ್ನು ತಿಂದ್ರೆ ಕೇಶ ಬೆಳ್ಳಗಾಗಲ್ಲ, ಹೇರ್ ಫಾಲ್ ಸಮಸ್ಯೆಯೂ ಇರಲ್ಲ!
ಜೀವಸತ್ವಗಳ ಕೊರತೆಯಿಂದಾಗಲೂ ಕೂಡ ಬಿಳಿ ಕೂದಲು, ಕೂದಲು ಉದುರುವಿಕೆಯಂತಹ ಸಮಸ್ಯೆಗಳು ಕಾಡುತ್ತವೆ. ಆದರೆ, ದೈನಂದಿನ ಆಹಾರದಲ್ಲಿ ಕೆಲವು ಆಹಾರಗಳನ್ನು ತಿನ್ನುವುದರಿಂದ ಇದನ್ನು ನೀಗಿಸಬಹುದು.
ಕೂದಲನ್ನು ಆರೋಗ್ಯಕರವಾಗಿ ಕಪ್ಪಾಗಿ ಬಲವಾಗಿಸಲು ವಿಟಮಿನ್ ಸಿ, ಕಬ್ಬಿಣ, ತಾಮ್ರ ಮತ್ತು ಸತುವಿನಂತಹ ಪೋಷಕಾಂಶಗಳ ಅಗತ್ಯವಿದೆ.
ಸಿಟ್ರಸ್ ಹಣ್ಣುಗಳಲ್ಲಿ, ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಹೇರಳವಾಗಿರುತ್ತದೆ. ಆಮ್ಲಾದಲ್ಲಿ ಕಂಡು ಬರುವ ಉತ್ಕರ್ಷಣ ನಿರೋಧಕಗಳು ಬಿಳಿ ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸಲು ಸಹಾಯಕವಾಗಿದೆ.
ಕರಿಬೇವಿನ ಎಲೆಗಳಲ್ಲಿ ವಿಟಮಿನ್ ಬಿ1, ಬಿ3, ಬಿ9 ಮತ್ತು ಸಿ, ಕಬ್ಬಿಣ, ಕ್ಯಾಲ್ಸಿಯಂ ಮತ್ತು ರಂಜಕ ಸಮೃದ್ಧವಾಗಿದೆ. ವಾರದಲ್ಲಿ ಒಮ್ಮೆ ಒಂದು ಹಿಡಿ ಕರಿಬೇವಿನ ಎಲೆಗಳನ್ನು ತೊಳೆದು ನೀರಿನಲ್ಲಿ ಕುದಿಸಿ ಫಿಲ್ಟರ್ ಮಾಡಿ ಆ ನೀರನ್ನು ಕುಡಿಯುವುದರಿಂದ ಕೂದಲು ಕಪ್ಪಾಗುತ್ತದೆ.
ಒಣದ್ರಾಕ್ಷಿ, ಬಾದಾಮಿ, ಅಂಜೂರದಂತಹ ಒಣ ಹಣ್ಣುಗಳಲ್ಲಿ ಕೂದಲನ್ನು ಬಲವಾಗಿಸಿ ಬಣ್ಣ ಮಾಸದಂತೆ ರಕ್ಷಿಸುವ ಅಂಶಗಳು ಹೇರಳವಾಗಿದೆ.
ತಾಜಾ ತೆಂಗಿನಕಾಯಿ ತಿನ್ನುವುದರಿಂದ ದೇಹದಲ್ಲಿ ವಿಟಮಿನ್ ಬಿ ಕಾಂಪ್ಲೆಕ್ಸ್, ಪ್ರೋಟೀನ್ ಮತ್ತು ಉತ್ಕರ್ಷಣ ನಿರೋಧಕಗಳ ಕೊರತೆ ನಿವಾರಿಸಿ ಬಿಳಿ ಕೂದಲನ್ನು ಕಪ್ಪಾಗಿಸಲು ಸಹಾಯಕವಾಗಿದೆ. ಇದು ಕೂದಲನ್ನು ಕಪ್ಪಾಗಿ, ದಟ್ಟವಾಗಿ, ಬಲವಾಗಿಸುತ್ತದೆ.
ಹಾಲು ಸೇರಿದಂತೆ ಇತರ ಡೈರಿ ಉತ್ಪನ್ನಗಳಲ್ಲಿ ವಿಟಮಿನ್ ಬಿ ಸಮೃದ್ಧವಾಗಿದೆ. ಇದು ಕೂದಲನ್ನು ಆರೋಗ್ಯಕರವಾಗಿರಿಸಿ ಹೇರ್ ಫಾಲ್ ಸಮಸ್ಯೆಯಿಂದ ರಕ್ಷಿಸುತ್ತದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.