ಮಧುಮೇಹಿಗಳು ಈ ಸಿಹಿ ಹಣ್ಣನ್ನು ಸಿಪ್ಪೆ ಸಮೇತ ಬೆಳಗಿನ ಹೊತ್ತು ತಿಂದರೆ ಬ್ಲಡ್ ಶುಗರ್ ದಿನಪೂರ್ತಿ ನಾರ್ಮಲ್ ಆಗಿರುತ್ತೆ !
ಸೇಬು ಹಣ್ಣು ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳನ್ನು ನೀಡುತ್ತದೆ. ಸೇಬು ಹಣ್ಣು ಫೈಬರ್, ವಿಟಮಿನ್‌ಗಳು ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ.
ಪ್ರತಿದಿನ ಒಂದು ಸೇಬು ತಿನ್ನುವುದು ಮಧುಮೇಹಿ ರೋಗಿಗಳ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಕಾರಿಯಾಗಿದೆ.
ಆಪಲ್ ಕಡಿಮೆ ಕ್ಯಾಲೋರಿಗಳನ್ನು ಹೊಂದಿದೆ ಮತ್ತು ಹೆಚ್ಚಿನ ಫೈಬರ್ ಅನ್ನು ಹೊಂದಿರುತ್ತದೆ. ಇದರಿಂದಾ ದೇಹದ ರಕ್ತದಲ್ಲಿನ ಸಕ್ಕರೆಯ ಮಟ್ಟ ಏರುಪೇರಾಗುವುದಿಲ್ಲ.
ಸೇಬು ಹಣ್ಣು ತೂಕ ನಷ್ಟಕ್ಕೆ ಅತ್ಯುತ್ತಮ ಆಯ್ಕೆಯಾಗಿದೆ. ಸೇಬು ಹಣ್ಣು ನೈಸರ್ಗಿಕ ಸಕ್ಕರೆಯಿಂದ ತುಂಬಿರುತ್ತದೆ. ಇದು ಸಿಹಿ ತಿನ್ನುವ ಬಯಕೆಯನ್ನು ಕಂಟ್ರೋಲ್ ಮಾಡುತ್ತದೆ.
ಮಧುಮೇಹಿಗಳು ಸೇಬು ಹಣ್ಣನ್ನು ಸಿಪ್ಪೆಯೊಂದಿಗೆ ಸೇವಿಸಬೇಕು. ಆ್ಯಂಟಿ ಆಕ್ಸಿಡೆಂಟ್ ಗುಣಗಳಿಂದ ಸಮೃದ್ಧವಾಗಿರುವ ಸೇಬಿನ ಸಿಪ್ಪೆಗಳು ದೇಹವನ್ನು ರೋಗಗಳಿಂದ ರಕ್ಷಿಸುತ್ತದೆ.
ಶುಗರ್ ರೋಗಿಗಳಾಗಿದ್ದರೆ ಸೇಬಿನ ಜ್ಯೂಸ್ ಸೇವಿಸಬೇಡಿ. ಸೇಬನ್ನು ಜ್ಯೂಸ್ ಮಾಡಿದಾಗ, ಅದರಿಂದ ಫೈಬರ್ ಅನ್ನು ಬೇರ್ಪಡಿಸಲಾಗುತ್ತದೆ. ಇದರಿಂದಾಗಿ ರಕ್ತದಲ್ಲಿನ ಸಕ್ಕರೆಯ ಮಟ್ಟವು ಹೆಚ್ಚಾಗಬಹುದು.
Disclaimer: ಈ ಲೇಖನವು ಸಾಮಾನ್ಯ ಮಾಹಿತಿಗಾಗಿ ಮಾತ್ರ. ಇದು ಯಾವುದೇ ಔಷಧಿ ಅಥವಾ ಚಿಕಿತ್ಸೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ವೈದ್ಯರನ್ನು ಸಂಪರ್ಕಿಸಿ.