Uric Acid: ಮೊಸರಿನಲ್ಲಿ ಈ ಹಣ್ಣು ಬೆರೆಸಿ ತಿನ್ನಿ.. ಗಂಟುಗಳಲ್ಲಿ ಅಂಟಿ ಕುಳಿತ ಯೂರಿಕ್ ಆಸಿಡ್ ಕರಗಿ ದೇಹದಿಂದ ಹೊರಹೋಗುವುದು! ಕೀಲು ನೋವು ಸಹ ತೊಲಗುವುದು
Natural Kidney Stone Remedies: ದೇಹದಲ್ಲಿ ಯೂರಿಕ್ ಆಸಿಡ್ ಹೆಚ್ಚಿನ ಪ್ರಮಾಣದಲ್ಲಿದ್ದಾಗ ಕೀಲುಗಳಲ್ಲಿನ ನೋವು ಮತ್ತು ಊತ ಹೆಚ್ಚಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಸರಿಯಾದ ಆಹಾರ ಮಾತ್ರ ಈ ಅಪಾಯದಿಂದ ನಿಮ್ಮನ್ನು ರಕ್ಷಿಸುತ್ತದೆ.
ಬಾಳೆಹಣ್ಣನ್ನು ಸೇವಿಸುವುದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಇದು ದೇಹಕ್ಕೆ ಶಕ್ತಿಯನ್ನು ನೀಡುವುದಲ್ಲದೇ, ಒತ್ತಡವನ್ನು ನಿವಾರಿಸುತ್ತದೆ. ಅಧಿಕ ಯೂರಿಕ್ ಆಸಿಡ್ ರೋಗಿಗಳು ಪ್ರತಿದಿನ ಬಾಳೆಹಣ್ಣನ್ನು ಸೇವಿಸಬೇಕು.
ಬಾಳೆಹಣ್ಣಿನಲ್ಲಿ ಪ್ಯೂರಿನ್ ಬಹಳ ಕಡಿಮೆ ಪ್ರಮಾಣದಲ್ಲಿ ಕಂಡುಬರುತ್ತದೆ. ಇದರಲ್ಲಿರುವ ಪೊಟ್ಯಾಸಿಯಮ್ ಮತ್ತು ಇತರ ಪೋಷಕಾಂಶಗಳು ಯೂರಿಕ್ ಆಮ್ಲವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ಬಾಳೆಹಣ್ಣಿನಲ್ಲಿ ಫೈಬರ್ ಹೇರಳವಾಗಿ ಕಂಡುಬರುತ್ತದೆ. ಜೊತೆಗೆ ಬಾಳೆಹಣ್ಣಿನಲ್ಲಿರುವ ಪೊಟ್ಯಾಸಿಯಮ್ ಯೂರಿಕ್ ಆಸಿಡ್ ಸ್ಫಟಿಕಗಳ ರಚನೆಯನ್ನು ತಡೆಯುತ್ತದೆ. ಇದು ಮೂತ್ರದ ಮೂಲಕ ವಿಷವನ್ನು ತೆಗೆದುಹಾಕುತ್ತದೆ. ಸಂಧಿವಾತದ ನೋವು ಮತ್ತು ಊತವನ್ನು ನಿಯಂತ್ರಿಸುತ್ತದೆ.
ಮೊಸರಿನೊಂದಿಗೆ ಬಾಳೆಹಣ್ಣನ್ನು ಸೇವಿಸುವುದು ತುಂಬಾ ಪ್ರಯೋಜನಕಾರಿ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದು. ಅಲ್ಲದೇ ಯೂರಿಕ್ ಆಸಿಡ್ ಕರಗಲು ಸಹಾಯ ಮಾಡುವುದು.
ಮೊಸರಿನೊಂದಿಗೆ ಬಾಳೆಹಣ್ಣು ತಿನ್ನುವುದರಿಂದ ಪ್ಯೂರಿನ್ ಉತ್ಪತ್ತಿಯಾಗುವುದಿಲ್ಲ. ಇದು ಯೂರಿಕ್ ಆಸಿಡ್ ನಿಂದ ಕಾಡುವ ನೋವನ್ನು ಕಡಿಮೆ ಮಾಡುತ್ತದೆ.
ಸೂಚನೆ: ಪ್ರಿಯ ಓದುಗರೇ, ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.