ಮಾರಕ ಕ್ಯಾನ್ಸರ್ ರೋಗ ಬರದಂತೆ ತಡೆಗಟ್ಟಲು ಈ ಹಣ್ಣು ಸೇವಿಸಿ ಸಾಕು..!
bore fruit: ಕ್ಯಾನ್ಸರ್... ಈ ಹೆಸರು ಕೇಳುತ್ತಿದ್ದಂತೆಯೇ ಎದೆ ಗಢ ಗಢ ನಡುಗಲು ಆರಂಭಿಸುತ್ತದೆ. ಯಾರಪ್ಪಾ ಆ ರೋಗಕ್ಕೆ ತುತ್ತಾಗಿ ಪ್ರಾಣ ಕಳೆದುಕೊಳ್ಳೋದು ಅನಿಸುತ್ತೆ. ಭಯಾನಕ ವಿಚಾರವೇನೆಂದರೆ, ಕ್ಯಾನ್ಸರ್ ಯಾರಿಗೆ, ಯಾವಾಗ, ಯಾವ ರೂಪದಲ್ಲಿ ವಕ್ಕರಿಸುತ್ತೆ ಎಂಬುದು ಗೊತ್ತಾಗಲ್ಲ. ಇದರ ಸಣ್ಣ ಸುಳಿವು ಸಿಗಲ್ಲ.
ಕ್ಯಾನ್ಸರ್ ರೋಗಕ್ಕೆ ಯಾವುದೇ ಔಷಧಿ ಇಲ್ಲ. ಈ ರೋಗದಿಂದ ಆಗುವ ಪರಿಣಾಮವನ್ನು ಕಡಿಮೆ ಮಾಡಬಹುದಾರೂ ಈ ರೋಗವನ್ನು ಸಂಪೂರ್ಣವಾಗಿ ಗುಣ ಪಡಿಸಲು ಸಾಧ್ಯವಿಲ್ಲ.
ಕ್ಯಾನ್ಸರ್ ರೋಗ ಮಾರಕ, ಈ ರೋಗಕ್ಕೆ ನೀವು ಎಷ್ಟೇ ಕೋಟಿ ಕೋಟಿ ಖರ್ಚು ಮಾಡಿದರೂ ಕೂಡ ಇದನ್ನು ವಾಸಿ ಮಾಡಲು ಸಾಧ್ಯವಾಗುವುದಿಲ್ಲ.
ಇದನ್ನು ವಾಸಿ ಮಾಡುವ ಯಾವ ವಿಧಾನವೂ ಕೂಡ ಇಲ್ಲ. ಆದರೆ, ಕ್ಯಾನ್ಸರ್ ಬರದಂತೆ ತಡಗಟ್ಟುವ ಹಲವರು ಆಹಾರಗಳು, ಹಲವಾರು ವಿಧಾನಗಳು ಇವೆ.
ಕ್ಯಾನ್ಸರ್ ಅನ್ನು ಬರದಂತೆ ತಡೆಗಟ್ಟುವುದು ಅಷ್ಟೊಂದು ಕಷ್ಟದ ಕೆಲಸ ಅಲ್ಲ, ಇದಕ್ಕೆ ನೀವು ಯಾವುದೇ ಜಿಮ್, ಡಯಟ್ ಅಥವಾ ಯೋಗ, ವ್ಯಾಯಾಮ ಏನು ಮಾಡಬೇಕಿಲ್ಲ. ಆದರೆ, ಕೇವಲ ಒಂದೆ ಒಂದು ಹಾಣ್ಣಿನ ಸೇವನೆಯಿಂದ ನೀವು ಕ್ಯಾನ್ಸರ್ ರೋಗವನ್ನು ತಡೆ ಗಟ್ಟಬಹುದು.
ಹೌದು, ಬೋರೆ, ಬಾರೆ, ಬುಗುರಿ ಹಣ್ಣು ಎಂದು ಕರೆಯಲ್ಪಡುವ ಹಣ್ಣನ್ನು ಸೇವಿಸುವುದರಿಂದ ನೀವು ಕ್ಯಾನ್ಸರ್ ರೋಗವನ್ನು ತಡೆಗಟ್ಟ ಬಹುದು.
ಈ ಹಣ್ಣು ಎಲ್ಲಾ ಕಡೆಗಳಲ್ಲಿಯೂ ಲಭ್ಯವಿರುತ್ತದೆ. ಇದರಲ್ಲಿರುವ ವಿಟಮಿನ್ ಎ, ಸಿ ಮತ್ತು ಖನಿಜ ಪೋಷಕಾಂಶಗಳು ನಿಮ್ಮ ಆರೋಗ್ಯವನ್ನು ಸುಧಾರಿಸುವಲ್ಲಿ ಸಹಾಯ ಮಾಡುತ್ತದೆ.
ಬೋರೆ ಹಣ್ಣಿನ ಸೇವನೆಯಿಂದ ನಿಮ್ಮ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ, ಇದರೊಂದಿಗೆ ಈ ಹಣ್ಣಿನಲ್ಲಿ ಉತ್ಕರ್ಷಣ ನಿರೋಧಕಗಳು ಕೂಡ ಹೆಚ್ಚಾಗಿರುವುದರಿಂದ ಇದು ಕ್ಯಾನ್ಸರ್ ರೋಗ ಬರದಂತೆ ತಡೆಗಟ್ಟುತ್ತದೆ.