ತೂಕ ಇಳಿಸಿಕೊಳ್ಳೋಕೆ ಚಪಾತಿ ತಿನ್ನುತ್ತಿದ್ದೀರಾ..? ಎಚ್ಚರಿಕೆ ಈ ಮಾರಣಾಂತಿಕ ಕಾಯಿಲೆಗಳಿಗೆ ತುತ್ತಾಗಬಹುದು..!
Chapathi for weightloss: ಇತ್ತೀಚಿನ ಜೀವನಶೈಲಿಯ ಕಾರಣದಿಂದಾಗಿ ಜನರು ತೂಕ ಹೆಚ್ಚಳ ಹಾಗೂ ವಿವಿಧ ರೀತಿಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಹೆಚ್ಚಿದ ತೂಕ ಹಾಗೂ ದಪ್ಪವಾಗಿ ಕಾಣಿಸುವುದು ಯಾರಿಗೂ ಕೂಡ ಇಷ್ಟ ಇರುವುದಿಲ್ಲ ಬಿಡಿ.
ತೂಕ ಇಳಿಸಿಕೊಳ್ಳಲು ಅನೇಕರು ಚಪಾತಿ ತಿನ್ನುತ್ತಾರೆ. ಗೋಧಿ ಹಿಟ್ಟಿನಿಂದ ಚಪಾತಿ ತಯಾರಿಸಿ ಜನರು ಅದನ್ನು ಪ್ರತಿನಿತ್ಯ ಸೇವಿಸುತ್ತಾರೆ. ಇದನ್ನು ನೀವು ಆರೋಗ್ಯ ಎಂದುಕೊಂಡು ಇರಬಹುದು ಆದರೆ ಇದು ನಿಮಗೆ ಮಾರಣಾಂತಿಕ ಕಾಯಿಲೆಗೆ ದಾರಿ ಮಾಡಿ ಕೊಡುತ್ತದೆ ಎಂಬುದು ನಿಮಗೆ ಗೊತ್ತಾ..?
ಸಾಮಾನ್ಯವಾಗಿ ಕಾರ್ಬೋಹೈಡ್ರೇಟ್ ಅಂಶವಿರುವ ಗೋಧಿ ಹಿಟ್ಟನ್ನು ತಿನ್ನುವುದರಿಂದ ತೂಕ ಇಳಿಕೆಯಾಗುತ್ತದೆ ಎಂಬುದು ಜನರ ನಂಬಿಕೆ. ಆದರೆ, ಇದರಲ್ಲಿ ಯಾವುದೇ ಸತ್ಯಾಂಶವಿಲ್ಲ.ಸರಿಯಾದ ರೀತಿಯಲ್ಲಿ ಚಪಾತಿ ತಿಂದರೆ ತೂಕ ಕಡಿಮೆಯಾಗುವುದು ನಿಜ. ಆದರೆ, ಚಪಾತಿ ಸೇವನೆಯಿಂದ ಮಾತ್ರ ತೂಕ ಇಳಿಕೆಯಾಗುವುದಿಲ್ಲ.
ಮಾರುಕಟ್ಟೆಯಲ್ಲಿ ಸಿಗುವ ಗೋಧಿ ಹಿಟ್ಟಿನಲ್ಲಿ ಕಲಬೆರಿಕೆ ಇರುತ್ತದೆ. ಈ ಹಿಟ್ಟಿನಿಂದ ಚಪಾತಿ ಮಾಡಿ ಸೇವಿಸುವ ಅಭ್ಯಾಸ ಹಲವರಿಗೆ ಇರುತ್ತದೆ. ಆದರೆ, ಇದರಲ್ಲಿರುವ ಕಲೆಬೆರಿಕೆ ಅಂಶಗಳು ಮಾರಣಾಂತಿಕ ಕಾಯಿಲೆಗಳಿಗೆ ದಾರಿ ಮಾಡಿಕೊಡಬಹುದು.
ಚಪಾತಿಗಳನ್ನು ಮಾಡುವಾಗ ಎಣ್ಣೆ ಬಳಕೆಯನ್ನು ತಪ್ಪಿಸಿ,ಈ ರೀತಿ ತೂಕ ಇಳಿಕೆಗೆಂದು ಚಪಾತಿಗಳನ್ನು ಎಣ್ಣೆ ಬಳಸಿ ಮಾಡುವುದರಿಂದ ಇದರಲ್ಲಿ ಎಣ್ಣೆಯಿಂದ ಕ್ಯಾಲೊರಿಗಳು ಹೆಚ್ಚಾಗುತ್ತವೆಯೇ ಹೊರೆತು ಕಡಿಮೆಯಾಗುವುದಿಲ್ಲ.
ಯಾವುದೇ ಆಹಾರವಾಗಲೀ ಅದೆಷ್ಟೇ ಆರೋಗ್ಯಕರವಾಗಿರಲಿ, ಅದನ್ನು ನೀವು ಮಿತಿಯಾಗಿ ತಿನ್ನುವುದು ಮುಖ್ಯ. ಅತಿಯಾದರೆ ಅಮೃತ ಕೂಡ ವಿಷವಾಗುತ್ತೆ ಎಂದು ಹೇಳಲಾಗುತ್ತದೆ. ಆದ್ದರಿಂದ, ಚಪಾತಿ ಕೂಡ ಮಿತಿಯಾಗಿ ಸೇವಿಸಬೇಕು.
ಚಪಾತಿ ಸೇವನೆಯನ್ನು ಸರಿಯಾಗಿ ಮಾಡುವುದರಿಂದ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಅದುವೇ ನೀವು ಇದನ್ನು ಸರಿಯಾದ ರೀತಿಯಲ್ಲಿ ಇತಿ ಮಿತಿ ಇಲ್ಲದೆ ಸೇವಿಸಿದಲ್ಲಿ ಆರೋಗ್ಯ ಸಮಸ್ಯೆಗಲು ಹೆಚ್ಚಾಗುತ್ತದೆ, ಜೊತೆಗೆ ನಿಮ್ಮ ತೂಕ ಕೂಡ ಇಳಿಕೆಯಾಗುವುದಿಲ್ಲ.
ತೂಕ ಇಳಿಸಿಕೊಳ್ಳಲು ಆದಷ್ಟು ನೀವು ಮನೆಯಲ್ಲಿ ಶುದ್ಧ ಗೋದಿಯಿಂದ ತಯಾರಿಸಿದ ಚಪಾತಿಯನ್ನು ಸೇವಿಸಿ, ಮಾರುಕಟ್ಟೆಯಲ್ಲಿ ಸಿಗುವ ಹಿಟ್ಟು ಕಲೆಬೆರೆಕೆಯಾಗಿರುವುದರಿಂದ ಇದನ್ನು ಪ್ರತಿನಿತ್ಯ ಸೇವಿಸಿದರೆ, ಆರೋಗ್ಯದ ಮೇಲೆ ಅಡ್ಡ ಪರಿಣಾಮ ಉಂಟಾಗಬಹುದು.