ಬೀಜಸಹಿತ ಸೌತೆಕಾಯಿ ತಿಂದರೆ ಸಿಗುತ್ತೆ ಈ ಎಲ್ಲಾ ಪ್ರಯೋಜನ
ಸೌತೆಕಾಯಿಯಷ್ಟೇ ಅಲ್ಲ, ಅದರ ಬೀಜವೂ ಆರೋಗ್ಯಕ್ಕೆ ತುಂಬಾ ಲಾಭದಾಯಕವಾಗಿದೆ. ಸೌತೆಕಾಯಿಯನ್ನು ಬೀಜ ಸಹಿತ ತಿನ್ನುವುದು ಹಾಗೂ ಸೌತೆಕಾಯಿ ತಿರುಳನ್ನು ಆಹಾರದೊಂದಿಗೆ ಸೇವಿಸುವುದರಿಂದ ಆರೋಗ್ಯಕ್ಕೆ ಸಿಗುವ ಪ್ರಯೋಜನಗಳೆಂದರೆ...
ಸೌತೆಕಾಯಿಯನ್ನು ಬೀಜ ಸಹಿತ ತಿನ್ನುವುದರಿಂದ ಇದು ದೇಹದಲ್ಲಿ ನೀರಿನ ಅಂಶ ಕಡಿಮೆಯಾಗದಂತೆ ನಿಗಾವಹಿಸಲು ಸಹಕಾರಿ ಆಗಿದೆ.
ಇದರಲ್ಲಿ ಕಂಡುಬರುವ ಉತ್ಕರ್ಷಣ ನಿರೋಧಕಗಳು ಆಕ್ಸಿಡೇಟಿವ್ ಒತ್ತಡದ ವಿರುದ್ದ ಹೋರಾಡಲು ಪರಿಣಾಮಕಾರಿ ಮದ್ದು ಎನ್ನಲಾಗುತ್ತದೆ.
ಸೌತೆಕಾಯಿಯನ್ನು ಬೀಜ ಸಹಿತ ತಿನ್ನುವುದರಿಂದ ಆರೋಗ್ಯಕರ ಕೊಬ್ಬು ದೇಹಕ್ಕೆ ಲಭ್ಯವಾಗುತ್ತದೆ. ಇದು ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಿ ಹೃದಯದ ಆರೋಗ್ಯವನ್ನು ಬೆಂಬಲಿಸುತ್ತದೆ.
ಸೌತೆಕಾಯಿ ಬೀಜಗಳು ವಿಟಮಿನ್ ಕೆ, ಮೆಗ್ನೀಸಿಯಮ್, ಪೊಟ್ಯಾಸಿಯಂ ಸೇರಿದಂತೆ ದೇಹಕ್ಕೆ ಅಗತ್ಯವಾದ ಹಲವು ಪೋಷಕಾಂಶಗಳನ್ನು ಒಳಗೊಂಡಿದ್ದು, ಇದು ಒಟ್ಟಾರೆ ಆರೋಗ್ಯವನ್ನು ಬೆಂಬಲಿಸುತ್ತದೆ.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.