ಪ್ರತಿದಿನ ಎದ್ದ ಕೂಡಲೇ ಇದನ್ನು ತಿನ್ನಿ.. ದಿನವಿಡೀ ಬ್ಲಡ್ ಶುಗರ್ ನಿಯಂತ್ರಣದಲ್ಲಿರುತ್ತದೆ!
ಮಧುಮೇಹವನ್ನು ಸಂಪೂರ್ಣ ಗುಣವಾಗಿಸುವ ಮದ್ದು ಇಲ್ಲ. ಇದನ್ನು ಆಹಾರ ಮತ್ತು ಜೀವನಶೈಲಿಯಲ್ಲಿನ ಬದಲಾವಣೆಗಳ ಮೂಲಕ ನಿಯಂತ್ರಿಸಬಹುದು ಅಷ್ಟೇ. ಹೀಗಾಗಿ ಮಧುಮೇಹಿಗಳು ತಿನ್ನುವ ಆಹಾರದ ಬಗ್ಗೆ ಹೆಚ್ಚು ಗಮನಹರಿಸಬೇಕಾಗುತ್ತದೆ.
ಮಧುಮೇಹಿಗಳಿಗೆ ಬೆಳಿಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೂ ಕಟ್ಟುನಿಟ್ಟಾದ ದಿನಚರಿ ಪಾಲಿಸುವುದು ಬಹಳ ಮುಖ್ಯ. ಮಧುಮೇಹಿಗಳು ಕೆಲವು ಆಹಾರವನ್ನು ಸೇವಿಸಿದರೆ ಬ್ಲಡ್ ಶುಗರ್ ಅನ್ನು ನೈಸರ್ಗಿಕವಾಗಿಯೇ ನಿಯಂತ್ರಿಸಬಹುದು.
ಬೆಳಿಗ್ಗೆ ಪ್ರೋಟೀನ್, ಉತ್ತಮ ಕೊಬ್ಬು, ಫೈಬರ್ ಒಳಗೊಂಡಿರುವ ಆರೋಗ್ಯಕರ ಆಹಾರವನ್ನು ಸೇವಿಸಬೇಕು. ಇದರಿಂದ ದಿನವಿಡೀ ಬ್ಲಡ್ ಶುಗರ್ ಹೆಚ್ಚಾಗುವುದಿಲ್ಲ.
ಬೆಳಗಿನ ಜಾವ ಲಿವರ್ ನಲ್ಲಿ ಗ್ಲೂಕೋಸ್ ಉತ್ಪತ್ತಿಯಾಗುವುದರಿಂದ ಇಡೀ ದಿನ ದೇಹಕ್ಕೆ ಶಕ್ತಿ ಸಿಗುತ್ತದೆ. ಅತಿಯಾದ ಬಾಯಾರಿಕೆ, ಪದೇ ಪದೇ ಮೂತ್ರ ವಿಸರ್ಜನೆ, ತಲೆಸುತ್ತು ಬಂದಂತಾಗುವುದು ರಕ್ತದಲ್ಲಿ ಸಕ್ಕರೆ ಅಂಶ ಹೆಚ್ಚಾಗಿರುವುದರ ಮುನ್ಸೂಚನೆಗಳಾಗಿವೆ.
ಮಧುಮೇಹಿಗಳು ಅಥವಾ ಪ್ರಿಡಯಾಬಿಟಿಕ್ ಆಗಿರುವವರು ಪ್ರತಿದಿನ ಬೆಳಿಗ್ಗೆ ಒಂದು ಚಮಚ ತುಪ್ಪವನ್ನು ಅರಿಶಿನ ಪುಡಿಯ ಜೊತೆಗೆ ಬೆರೆಸಿ ತಿನ್ನಬಹುದು. ಇದರಿಂದ ಇಡೀ ದಿನ ಶುಗರ್ ಕಂಟ್ರೋಲ್‌ನಲ್ಲಿರುತ್ತದೆ.
ತುಪ್ಪ ದೇಹದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸುತ್ತದೆ. ( ಸೂಚನೆ: ಈ ಲೇಖನ ಮನೆಮದ್ದು ಮತ್ತು ಸಾಮಾನ್ಯ ಮಾಹಿತಿ ಆಧರಿಸಿದೆ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆ ತೆಗೆದುಕೊಳ್ಳಿ. Zee ಮೀಡಿಯಾ ಇದಕ್ಕೆ ಹೊಣೆಯಲ್ಲ.)