ಬಿಳಿಕೂದಲನ್ನು ಶಾಶ್ವತವಾಗಿ ಬುಡದಿಂದಲೇ ಕಪ್ಪಾಗಿಸುತ್ತೆ ಈ ಹಣ್ಣು: ವಾರದಲ್ಲಿ 2 ಬಾರಿ ತಿಂದರೆ ಸಾಕು!
ಕೂದಲಿನ ಸಮಸ್ಯೆಗಳ ಬಗ್ಗೆ ಮಾತನಾಡುವುದಾದರೆ, ವಯಸ್ಸಿಗೆ ಮುಂಚೆಯೇ ಬಿಳಿಕೂದಲು ಕಾಣಿಸಿಕೊಂಡು ಸಮಸ್ಯೆಯನ್ನು ತಂದೊಡ್ಡುತ್ತವೆ. ಇವುಗಳು ಸೌಂದರ್ಯವನ್ನು ಹಾಳು ಮಾಡುತ್ತದೆ. ಆರಂಭದಲ್ಲಿ ಎಣಿಕೆ ಒಂದೋ ಎರಡೋ ಎಂದು ಕಂಡರೂ ಅನಾರೋಗ್ಯಕರ ಅಭ್ಯಾಸಗಳಿಂದಾಗಿ ಅದು ಹೆಚ್ಚುತ್ತಲೇ ಹೋಗುತ್ತದೆ.
ಬಿಳೊ ಕೂದಲಿನ ಸಮಸ್ಯೆಯ ಹಿಂದೆ ಹಲವು ಕಾರಣಗಳಿವೆ. ಪ್ರಮುಖ ಕಾರಣಗಳಲ್ಲಿ ಒಂದು ಜೀವಸತ್ವಗಳು ಮತ್ತು ಆರೋಗ್ಯಕರ ಆಹಾರವನ್ನು ಅನುಸರಿಸದಿರುವುದು. ಆಹಾರದಲ್ಲಿ ಪೋಷಕಾಂಶಗಳ ಕೊರತೆಯಿಂದಾಗಿ, ಹಲವಾರು ರೀತಿಯ ಕೂದಲಿನ ಸಮಸ್ಯೆಗಳು ಪ್ರಾರಂಭವಾಗುತ್ತವೆ.
ಹೀಗಾಗಿ ನಾವಿಂದು ಕೆಲವೊಂದು ಆಹಾರ ಕ್ರಮಗಳ ಬಗ್ಗೆ ನಿಮಗೆ ತಿಳಿಸಿಕೊಡಲಿದ್ದೇವೆ. ಇದನ್ನು ಅಳವಡಿಸುವ ಮೂಲಕ ಬಿಳಿಕೂದಲಿಗೆ ಶೀಘ್ರದಲ್ಲೇ ಗುಡ್ ಬೈ ಹೇಳಬಹುದು.
ನೆಲ್ಲಿಕಾಯಿಯನ್ನು ಬಿಳಿ ಕೂದಲನ್ನು ತೊಡೆದು ಹಾಕಲು ಬಳಕೆ ಮಾಡಬಹುದು. ಪ್ರತಿದಿನ ಅಥವಾ 2 ದಿನಕ್ಕೊಮ್ಮೆ ಈ ಕಾಯಿಯನ್ನು ತಿನ್ನುವುದರಿಂದ ನಿಮ್ಮ ಕೂದಲು ಆರೋಗ್ಯಕರವಾಗಿರುವುದು ಮಾತ್ರವಲ್ಲದೆ ಇದು ಬಿಳಿಕೂದಲಿನ ಸಮಸ್ಯೆಯನ್ನು ತಡೆಯುತ್ತದೆ. ನೆಲ್ಲಿಕಾಯಿಯನ್ನು ಜ್ಯೂಸ್, ಕ್ಯಾಂಡಿ ಅಥವಾ ಚಟ್ನಿ ಮುಂತಾದ ಹಲವು ವಿಧಗಳಲ್ಲಿ ಸೇವಿಸಬಹುದು. ಬೇಕಿದ್ದರೆ ಇದರ ಪೌಡರ್ ಕೂಡ ತಿನ್ನಬಹುದು.
ಹಸಿರು ಎಲೆಗಳ ತರಕಾರಿಗಳನ್ನು ಆಹಾರದಲ್ಲಿ ಸೇರಿಸಿಕೊಳ್ಳಿ. ಇದು ಕೂದಲಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಇದರಲ್ಲಿರುವ ಫೋಲಿಕ್ ಆಮ್ಲವು ನಮ್ಮ ಕೂದಲನ್ನು ಆರೋಗ್ಯಕರವಾಗಿರಿಸುತ್ತದೆ ಮತ್ತು ನೆತ್ತಿಯ ಚರ್ಮವನ್ನು ಪೋಷಿಸುತ್ತದೆ. ಈ ತರಕಾರಿಗಳಲ್ಲಿ ಪ್ರೋಟೀನ್ ಸಮೃದ್ಧವಾಗಿದೆ,
ಎಳ್ಳು ಮತ್ತು ಸೂರ್ಯಕಾಂತಿ ಬೀಜಗಳನ್ನು ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳಿ. ಏಕೆಂದರೆ ಈ ಬೀಜಗಳನ್ನು ಕೂದಲಿಗೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಇದರಲ್ಲಿರುವ ಕಬ್ಬಿಣ, ಸತು, ವಿಟಮಿನ್ ಬಿ6 ಮತ್ತು ವಿಟಮಿನ್ ಇ ಗುಣಗಳು ನಿಮ್ಮ ಕೂದಲಿಗೆ ಹಲವಾರು ರೀತಿಯಲ್ಲಿ ಪ್ರಯೋಜನವನ್ನು ನೀಡುತ್ತದೆ. ಎಳ್ಳಿನಲ್ಲಿ ಉತ್ಕರ್ಷಣ ನಿರೋಧಕ ಗುಣಗಳಿವೆ, ಇದು ಕೂದಲು ಬಿಳಿಬಣ್ಣಕ್ಕೆ ತಿರುಗುವುದನ್ನು ತಡೆಯುತ್ತದೆ. ಇದಲ್ಲದೆ, ನೀವು ಬಾದಾಮಿ, ಕಡಲೆಕಾಯಿ ಮತ್ತು ಚಿಯಾ ಸೀಡ್’ಗಳನ್ನು ಸಹ ಸೇವಿಸಬಹುದು
ನೀವು ಮಾಂಸಾಹಾರಿಗಳಾಗಿದ್ದರೆ, ಬಿಳಿಕೂದಲನ್ನು ಕಪ್ಪಾಗಿಸಲು ಸಾಲ್ಮನ್ ಅಥವಾ ಟ್ಯೂನ ಮೀನುಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬಹುದು. ವಿಶೇಷವೆಂದರೆ ಇದು ಒಮೆಗಾ -3 ನ ಮುಖ್ಯ ಮೂಲವೆಂದು ಪರಿಗಣಿಸಲ್ಪಟ್ಟಿದೆ, ಇದು ಕೂದಲನ್ನು ಅನೇಕ ರೀತಿಯಲ್ಲಿ ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ.
ಮೊಟ್ಟೆಯು ಪ್ರೋಟೀನ್’ನಲ್ಲಿ ಸಮೃದ್ಧವಾಗಿದ್ದು, ಇದು ಬಯೋಟಿನ್ ಎಂಬ ವಿಟಮಿನ್ ಬಿ ಗುಣಗಳನ್ನು ಸಹ ಹೊಂದಿದೆ. ಕೂದಲು ಆರೋಗ್ಯಕರವಾಗಿ ಮತ್ತು ಕಪ್ಪಾಗಿರಲು ಬಯೋಟಿನ್ ಎಂಬ ಅಂಶ ಬಹಳ ಮುಖ್ಯ. ಇದು ಕೂದಲಿನ ನೈಸರ್ಗಿಕ ಬಣ್ಣವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee ಮಾಧ್ಯಮವು ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.ಸಲಹೆಯನ್ನು ತೆಗೆದುಕೊಳ್ಳಬೇಕು. Zee ಮಾಧ್ಯಮವು ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.)