White Pumpkin: ಎಂದಾದರೂ ಬಿಳಿ ಸಿಹಿಕುಂಬಳಕಾಯಿ ತಿಂದಿದ್ದೀರಾ? ಇದರಲ್ಲಿದೆ ನೀವು ಊಹಿಸಿರದಷ್ಟು ಆರೋಗ್ಯ ಪ್ರಯೋಜನ
ಸಿಹಿಗುಂಬಳಕಾಯಿ ಬಿಳಿ ಮತ್ತು ಹಳದಿ ಬಣ್ಣಗಳಲ್ಲಿರುತ್ತದೆ. ಇಂದು ನಾವು ಬಿಳಿ ಸಿಹಿಕುಂಬಳಕಾಯಿಯ ಬಗ್ಗೆ ಮಾತನಾಡಲಿದ್ದು, ಇದರಲ್ಲಿನ ಪೋಷಕಾಂಶಗಳ ಸಮೃದ್ಧತೆಯ ಬಗ್ಗೆ ತಿಳಿದುಕೊಳ್ಳೋಣ. ಈ ಬಿಳಿ ಸಿಹಿಗುಂಬಳಕಾಯಿಯಲ್ಲಿ ಕಬ್ಬಿಣ, ರಂಜಕ, ಮೆಗ್ನೀಸಿಯಮ್, ನಿಯಾಸಿನ್, ಥಯಾಮಿನ್ ಮತ್ತು ಫೋಲೇಟ್ ಮುಂತಾದ ಖನಿಜಗಳು ಕಂಡುಬರುತ್ತವೆ.
ದಕ್ಷಿಣ ಭಾರತದ ಜನಪ್ರಿಯ ಖಾದ್ಯವಾದ ಸಾಂಬಾರ್ ಸಿಹಿಗುಂಬಳಕಾಯಿಯಿಂದ ತಯಾರಿಸಲಾಗುತ್ತದೆ. ಆದರೆ ಕೆಲವೇ ಜನರಿಗೆ ಬಿಳಿ ಬಣ್ಣದ ಕುಂಬಳಕಾಯಿಯ ಬಗ್ಗೆ ತಿಳಿದಿದೆ. ನೀವೂ ತಿನ್ನದೇ ಇದ್ದರೆ ಖಂಡಿತ ಒಮ್ಮೆ ಟ್ರೈ ಮಾಡಿ ನೋಡಿ. ಇದರಲ್ಲಿ ಹಲವಾರು ಆರೋಗ್ಯ ಪ್ರಯೋಜನಗಳಿವೆ.
ಅಸ್ತಮಾದಿಂದ ಬಳಲುತ್ತಿರುವವರು ತಮ್ಮ ದೈನಂದಿನ ಆಹಾರದಲ್ಲಿ ಬಿಳಿ ಕುಂಬಳಕಾಯಿಯನ್ನು ಸೇರಿಸಿಕೊಳ್ಳಬೇಕು. ಉತ್ಕರ್ಷಣ ನಿರೋಧಕಗಳು ಈ ತರಕಾರಿಯಲ್ಲಿ ಕಂಡುಬರುತ್ತವೆ. ಇದು ಉಸಿರಾಟದ ವ್ಯವಸ್ಥೆಯಲ್ಲಿ ಸೋಂಕನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ವಿಟಮಿನ್ ಎ ಬಿಳಿ ಕುಂಬಳಕಾಯಿಯಲ್ಲಿ ಹೇರಳವಾಗಿ ಕಂಡುಬರುತ್ತದೆ. ಇದು ದೃಷ್ಟಿ ಹೆಚ್ಚಿಸಲು ಸಹಾಯ ಮಾಡುತ್ತದೆ. ರಾತ್ರಿ ಕುರುಡುತನ ಹೊಂದಿರುವವರಿಗೆ ಇದು ಪರಿಹಾರದ ಮೂಲವಾಗಿದೆ.
ಕೀಲು ನೋವಿನಿಂದ ಬಳಲುತ್ತಿರುವವರಿಗೆ ಬಿಳಿ ಕುಂಬಳಕಾಯಿಯು ಪರಿಹಾರದ ಮೂಲವಾಗಿದೆ. ಈ ಸಮಸ್ಯೆಯನ್ನು ಹೋಗಲಾಡಿಸಲು ಪ್ರತಿದಿನ ಬೆಳಗ್ಗೆ ಎದ್ದು ಈ ಕುಂಬಳಕಾಯಿಯ ರಸವನ್ನು ಕುಡಿಯಿರಿ. ಕೆಲವೇ ದಿನಗಳಲ್ಲಿ ನೀವು ಕೀಲು ನೋವಿನಿಂದ ಪರಿಹಾರವನ್ನು ಪಡೆಯುತ್ತೀರಿ