ಚಳಿಗಾಲದಲ್ಲಿ ಅಧಿಕ ಮೊಟ್ಟೆ ಸೇವನೆಯಿಂದ ಆರೋಗ್ಯಕ್ಕೆ ಆಪತ್ತು
ಬೇಧಿ: ಮೊಟ್ಟೆಯ ಹಳದಿ ಭಾಗವು ಅಧಿಕ ಕೊಲೆಸ್ಟ್ರಾಲ್ ಅನ್ನು ಹೊಂದಿರುತ್ತದೆ. ಹಾಗಾಗಿ, ಹೆಚ್ಚು ಮೊಟ್ಟೆ ಸೇವನೆಯಿಂದ ಹೊಟ್ಟೆ ನೋವು, ಲೂಸ್ ಮೋಷನ್ ಸಮಸ್ಯೆಯನ್ನು ಎದುರಿಸಬೇಕಾಗಬಹುದು.
ಮಧುಮೇಹಿಗಳಿಗೆ ಅಪಾಯಕಾರಿ: ಸೂಪರ್‌ಫುಡ್ ಎಂದು ಪರಿಗಣಿಸಲಾಗಿರುವ ಮೊಟ್ಟೆ ಸೇವನೆಯಿಂದ ಬ್ಲಡ್ ಶುಗರ್ ಲೆವೆಲ್ ಹೆಚ್ಚಾಗುತ್ತದೆ. ಹಾಗಾಗಿ, ಮಧುಮೇಹಿಗಳು ಮಿತವಾಗಿ ಮೊಟ್ಟೆ ಸೇವಿಸುವುದು ಉತ್ತಮ.
ಗ್ಯಾಸ್ಟ್ರಿಕ್: ಕೆಲವರು ನಿತ್ಯ ಮೂರ್ನಾಲ್ಕು ಮೊಟ್ಟೆ ಜೊತೆಗೆ ಆಮ್ಲೆಟ್ ಅನ್ನು ತಿನ್ನುತ್ತಾರೆ. ಆದರೆ, ಇದು ಗ್ಯಾಸ್ಟ್ರಿಕ್ ಸಮಸ್ಯೆಗೆ ಕಾರಣವಾಗಬಹುದು. ಮಾತ್ರವಲ್ಲ, ಇದು ಉದರ ಸಂಬಂಧಿತ ಇತರ ಸಮಸ್ಯೆಗಳನ್ನೂ ತಂದೊಡ್ಡಬಹುದು.
ಹೃದಯಾಘಾತ: ಹೆಚ್ಚು ಮೊಟ್ಟೆಗಳನ್ನು ತಿನ್ನುವುದರಿಂದ ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ. ಈ ಕಾರಣದಿಂದಾಗಿ, ಹೃದಯಾಘಾತದ ಅಪಾಯವೂ ಹೆಚ್ಚು.
ಅಮೇರಿಕನ್ ಹಾರ್ಟ್ ಅಸೋಸಿಯೇಷನ್ ಪ್ರಕಾರ, ಆರೋಗ್ಯವಂತ ಜನರು ದಿನಕ್ಕೆ ಎರಡು ಮೊಟ್ಟೆಗಳನ್ನು ಸೇವಿಸಬಹುದು. ಆದರೆ. ಅಧಿಕ ರಕ್ತದ ಕೊಲೆಸ್ಟ್ರಾಲ್ ಹೊಂದಿರುವವರು ನಿತ್ಯ ಒಂದಕ್ಕಿಂತ ಕಡಿಮೆ ಮೊಟ್ಟೆಯನ್ನು ತಿನ್ನಬೇಕು ಎಂದು ಹೇಳಲಾಗಿದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.