Walnut Benefits: ನಿತ್ಯ ಬೆಳಿಗ್ಗೆ ವಾಲ್‌ನಟ್ಸ್ ತಿನ್ನುವುದರಿಂದ ಸಿಗುತ್ತೆ ಈ 5 ಅದ್ಭುತ ಪ್ರಯೋಜನ
ವಾಲ್‌ನಟ್ಸ್ ನಲ್ಲಿ ಹಲವು ಪೋಷಕಾಂಶಗಳು ಕಂಡು ಬರುತ್ತದೆ. ಆರೋಗ್ಯ ತಜ್ಞರ ಪ್ರಕಾರ, ವಾಲ್‌ನಟ್ಸ್ ನಲ್ಲಿ ದೇಹಕ್ಕೆ ಅಗತ್ಯವಾದ ಜೀವಸತ್ವಗಳು, ಖನಿಜಗಳು, ಫೈಬರ್ ಮತ್ತು ಆರೋಗ್ಯಕರ ಕೊಬ್ಬನ್ನು ಹೊಂದಿರುತ್ತದೆ. ಹಾಗಾಗಿ ಪ್ರತಿದಿನ ಬೆಳಿಗ್ಗೆ ವಾಲ್‌ನಟ್ಸ್ ತಿನ್ನುವುದರಿಂದ ಇದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ಅವುಗಳೆಂದರೆ...
ತೂಕ ಇಳಿಕೆ: ಆರೋಗ್ಯ ತಜ್ಞರ ಪ್ರಕಾರ, ದಿನ ಬೆಳಿಗ್ಗೆ ವಾಲ್ನಟ್ ಸೇವಿಸುವುದರಿಂದ ಇದು ಆರೋಗ್ಯಕ್ರ ತೂಕ ಇಳಿಕೆಗೆ ಪ್ರಯೋಜನಕಾರಿ ಎನ್ನಲಾಗುತ್ತದೆ.
ಬಲಿಷ್ಠ ಮೂಳೆಗಳು: ವಾಲ್‌ನಟ್ಸ್ ನಲ್ಲಿ ಕಂಡು ಬರುವ ಆಲ್ಫಾ-ಲಿನೋಲೆನಿಕ್ ಆಮ್ಲವು ದೇಹವನ್ನು ಸದೃಢವಾಗಿರಿಸಲು ಪ್ರಯೋಜನಕಾರಿ ಆಗಿದೆ. ಪ್ರತಿದಿನ ಬೆಳಗ್ಗೆ ವಾಲ್ ನಟ್ಸ್ ತಿನ್ನುವುದರಿಂದ ಮೂಳೆಗಳು ಬಲಗೊಳ್ಳುತ್ತವೆ.
ಕ್ಯಾನ್ಸರ್ ಅಪಾಯ: ತಜ್ಞರ ಪ್ರಕಾರ, ನಿತ್ಯ ವಾಳ್ನಟ್ಸ್ ಸೇವಿಸುವುದರಿಂದ ಇದು ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಲು ಸಹ ಪ್ರಯೋಜನಕಾರಿಯಾಗಿದೆ. ಇದು ಪ್ರಾಸ್ಟೇಟ್ ಕ್ಯಾನ್ಸರ್, ಕೊಲೊರೆಕ್ಟಲ್ ಕ್ಯಾನ್ಸರ್, ಸ್ತನ ಕ್ಯಾನ್ಸರ್ನಂತಹ ಅಪಾಯಗಳನ್ನು ಕಡಿಮೆ ಮಾಡುತ್ತದೆ.
ಮೆದುಳು: ವಾಲ್‌ನಟ್ಸ್ ನಲ್ಲಿ ಪಾಲಿಫಿನಾಲ್ ಎಲಾಜಿಟಾನಿನ್‌ಗಳು ಕಂಡುಬರುತ್ತವೆ. ಮೆದುಳನ್ನು ಚುರುಕುಗೊಳಿಸುವಲ್ಲಿ ಇದು ತುಂಬಾ ಸಹಾಯಕವಾಗಿದೆ ಎಂದು ಸಾಬೀತುಪಡಿಸುತ್ತದೆ. ಹಾಗಾಗಿ, ಪ್ರತಿದಿನ ವಾಲ್‌ನಟ್ಸ್ ತಿನ್ನುವುದರಿಂದ ನಿಮ್ಮ ಮೆದುಳು ಚುರುಕಾಗುತ್ತದೆ.
ಮಲಬದ್ಧತೆ: ನೀವು ಮಲಬದ್ಧತೆಯಂತಹ ಸಮಸ್ಯೆಗಳಿಂದ ಬಳಲುತ್ತಿದ್ದರೆ ಖಂಡಿತವಾಗಿಯೂ ವಾಲ್‌ನಟ್ಸ್ ಅನ್ನು ಸೇವಿಸಬೇಕು. ಇದು ಜೀರ್ಣಕಾರಿ ಅಸ್ವಸ್ಥತೆಗಳಿಂದ ಪರಿಹಾರವನ್ನು ನೀಡುವ ಮೂಲಕ ನಿಮ್ಮ ಹೊಟ್ಟೆಯನ್ನು ಸ್ವಚ್ಛಗೊಳಿಸಲು ತುಂಬಾ ಸಹಾಯಕವಾಗಿದೆ ಎಂದು ಸಾಬೀತುಪಡಿಸುತ್ತದೆ.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.