ಮನೆಯಲ್ಲಿ ನೊಣಗಳ ಕಾಟ ಹೆಚ್ಚಾಗಿದೆಯಾ..? ಈ ಸಿಂಪಲ್ ಟ್ರಿಕ್ಸ್ ಬಳಸಿ ಕ್ಷಣಾರ್ದದಲ್ಲಿ ಅವು ಮಾಯವಾಗುತ್ತವೆ
ಮನೆಯೊಳಗೆ ನೊಣಗಳ ಸಮಸ್ಯೆಯು ಪ್ರತಿ ಋತುವಿನಲ್ಲಿ ಕಂಡುಬರುತ್ತದೆ, ಆದರೆ ಮಳೆಗಾಲದಲ್ಲಿ ಅಂತೂ ಈ ನೊಣಗಳು ಜೇನು ಉಳಗಳಂತೆ ಮನೆಯನ್ನು ಆವರಿಸಿಕೊಳ್ಳುತ್ತವೆ. ಅಡುಗೆಮನೆಯಲ್ಲಿ ನೊಣಗಳು ಕಂಡುಬಂದರೆ ಅಂತೂ, ಆರೋಗ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ. ನೊಣಗಳು ಅನೇಕ ರೀತಿಯ ರೋಗಗಳನ್ನು ಹರಡುತ್ತವೆ. ಹೀಗೆ ಕಿರಿಕಿರಿ ಉಂಟುಮಾಡುವ ಈ ನೊಣಗಳಿಂದ ತಪ್ಪಿಸಿಕೊಳ್ಳಲು ಜನ ಹಲವಾರು ತಂತ್ರಗಳನ್ನು ಬಳಸುತ್ತಾರೆ ಆದರೆ ವಿಫಲರಾಗುತ್ತಾರೆ. ಈ ಟ್ರಿಕ್ಸ್ ಬಳಸಿ ನೀವು ನೊಣಗಳಿಂದ ಮಕ್ತಿ ಪಡೆಯ ಬಹುದು..!ಯಾವುದು ಆ ಟ್ರಿಕ್ಸ್ ತಿಳಿಯಲು ಮುಂದ ಓದಿ...
ಮನೆಯಲ್ಲಿ ನೊಣಗಳಿದ್ದರೆ, ಅವುಗಳನ್ನು ಓಡಿಸಲು ನೀವು ಕರ್ಪೂರವನ್ನು ಬಳಸಬಹುದು. ಒಂದು ಸಣ್ಣ ಕರ್ಪೂರವನ್ನು ತೆಗೆದುಕೊಂಡು ಅದನ್ನು ಚಮಚದ ಮೇಲೆ ಇರಿಸಿ ಮತ್ತು ಬೆಂಕಿಕಡ್ಡಿಯಿಂದ ಬೆಳಗಿಸಿ. ಈ ಕರ್ಪೂರದ ಹೊಗೆಯನ್ನು ಮನೆಯಲ್ಲೆಲ್ಲ ಹರಡಿ. ಕರ್ಪೂರದ ಹೊಗೆಯಿಂದ ಮನೆಯಿಂದ ನೊಣಗಳು ತಕ್ಷಣವೇ ಓಡಿಹೋಗುತ್ತವೆ. ಮನೆಯಲ್ಲಿ ಕರ್ಪೂರದ ವಾಸನೆ ಇರುವವರೆಗೆ ಒಂದೇ ಒಂದು ನೊಣವೂ ಮನೆಯೊಳಗೆ ಬರುವುದಿಲ್ಲ.
ಮನೆಯಲ್ಲಿ ನೊಣಗಳನ್ನು ಓಡಿಸಲು ನೀವೇ ಅದ್ಭುತ ಪರಿಹಾರವನ್ನು ನಿಮ್ಮ ಕೈಯ್ಯಾರೆ ತಯಾರಿಸಬಹುದು. ಇದಕ್ಕಾಗಿ ಒಂದು ನಿಂಬೆಹಣ್ಣು, 2 ಟೀ ಚಮಚ ಉಪ್ಪು ಮತ್ತು ಒಂದು ಲೋಟ ನೀರು ಬೇಕಾಗುತ್ತದೆ. ನಿಂಬೆಹಣ್ಣನ್ನು ಕತ್ತರಿಸಿ, ಒಂದು ಲೋಟ ನೀರಿನಲ್ಲಿ ಹಿಂಡಿ ಮತ್ತು ಅದಕ್ಕೆ ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ, ಈ ನೀರನ್ನು ಸ್ಪ್ರೇ ಬಾಟಲಿಯಲ್ಲಿ ತುಂಬಿಸಿ ನೊಣಗಳನ್ನು ಕಂಡಲ್ಲೆಲ್ಲಾ ಸಿಂಪಡಿಸಿ. ಇದು ನೊಣಗಳನ್ನು ಓಡಿಸುತ್ತದೆ.
ಆಪಲ್ ಸೈಡರ್ ವಿನೆಗರ್ ಮನೆಯಿಂದ ನೊಣಗಳನ್ನು ತೊಡೆದುಹಾಕಲು ತುಂಬಾ ಪರಿಣಾಮಕಾರಿಯಾಗಿದೆ. ಆಪಲ್ ಸೈಡರ್ ವಿನೆಗರ್ ಮತ್ತು ನೀರನ್ನು ಚೆನ್ನಾಗಿ ಮಿಶ್ರಣ ಮಾಡಿ. ನಂತರ ಈ ಮಿಶ್ರಣವನ್ನು ಸ್ಪ್ರೇ ಬಾಟಲಿಯಲ್ಲಿ ತುಂಬಿಸಿ ಮತ್ತು ಅದನ್ನು ಮನೆಯಾದ್ಯಂತ ಸಿಂಪಡಿಸಿ. ಇದರಿಂದ ಮನೆಯಲ್ಲಿರುವ ನೊಣಗಳು ಬೇಗ ಮಾಯವಾಗಿ ನೊಣಗಳಿಂದ ಮುಕ್ತಿ ಸಿಗುತ್ತದೆ. ನೀವು ಅಗತ್ಯಕ್ಕೆ ಅನುಗುಣವಾಗಿ ವಿನೆಗರ್ ಮತ್ತು ನೀರನ್ನು ಬಳಸಬಹುದು.
ಬಿರಿಯಾನಿ ಎಲೆಗಳನ್ನು ಹೆಚ್ಚಾಗಿ ಆಹಾರ ಮತ್ತು ಪಾನೀಯಗಳಲ್ಲಿ ಬಳಸಲಾಗುತ್ತದೆ, ಆದರೆ ಈ ಎಲೆಯು ನೊಣಗಳಿಂದ ಪರಿಹಾರವನ್ನು ಒದಗಿಸಲು ಬಹಳ ಪರಿಣಾಮಕಾರಿ ಎಂದು ಸಾಬೀತುಪಡಿಸುತ್ತದೆ. ಬಿರಿಯಾನಿ ಎಲೆಗಳನ್ನು ಸುಟ್ಟು ಅದರ ಹೊಗೆಯನ್ನು ನೊಣಗಳಿರುವ ಸ್ಥಳದಲ್ಲಿ ಬರುವಂತೆ ಇಡಿ. ಇದರಿಂದ ನೊಣಗಳು ಮಾಯವಾಗುತ್ತದೆ.
ಮನೆಯನ್ನು ಸ್ವಚ್ಛಗೊಳಿಸುವಾಗ ಕೆಲವು ವಿಷಯಗಳನ್ನು ನೆನಪಿನಲ್ಲಿಟ್ಟುಕೊಂಡರೆ, ನೀವು ನೊಣಗಳಿಂದ ಸಾಕಷ್ಟು ಪರಿಹಾರವನ್ನು ಪಡೆಯಬಹುದು. ಮನೆಯ ನೆಲವನ್ನು ಒರೆಸುವಾಗ ಸ್ವಲ್ಪ ಫಿನೈಲ್ ಅನ್ನು ನೀರಿನಲ್ಲಿ ಬೆರೆಸಿ ನಂತರ ಒರೆಸಿದರೆ ನೊಣಗಳನ್ನು ಸುಲಭವಾಗಿ ಮನೆಯೊಳಗೆ ಪ್ರವೇಶಿಸದಂತೆ ತಡೆಯಬಹುದು.