ಮಾನ್ಸೂನ್‌ನಲ್ಲಿ ಎಣ್ಣೆಯುಕ್ತ ಚರ್ಮದಿಂದ ಪರಿಹಾರಕ್ಕಾಗಿ ಈ ಮನೆಮದ್ದುಗಳನ್ನೊಮ್ಮೆ ಟ್ರೈ ಮಾಡಿ!
ನೀವು ಎಣ್ಣೆಯುಕ್ತ ಚರ್ಮ ಎಂದರೆ ಆಯ್ಲಿ ಸ್ಕಿನ್ ಸಮಸ್ಯೆಯಿಂದ ತೊಂದರೆಗೀಡಾಗಿದ್ದರೆ, ಅದರಲ್ಲೂ ಮಳೆಗಾಲದಲ್ಲಿ ಈ ಸಮಸ್ಯೆ ಹೆಚ್ಚಾಗಿದ್ದರೆ ಕೆಲವು ಸಿಂಪಲ್ ಮನೆಮದ್ದುಗಳಿಂದ ಸುಲಭ ಪರಿಹಾರವನ್ನು ಪಡೆಯಬಹುದು.
ನೈಸರ್ಗಿಕ ಸಂಕೋಚಕ ಗುಣಗಳಿಂದ ಸಮೃದ್ಧವಾಗಿರುವ ಅಲೋವೆರಾ ಚರ್ಮದಲ್ಲಿ ಹೆಚ್ಚುವರಿ ಎಣ್ಣೆಯನ್ನು ನಿಯಂತ್ರಿಸಬಲ್ಲ ಪರಿಣಾಮಕಾರಿ ಮದ್ದು.
ಒಂದು ಚಮಚ ನಿಂಬೆ ರಸದಲ್ಲಿ ಸಮ ಪ್ರಮಾಣದ ಜೇನುತುಪ್ಪ ಬೆರೆಸಿ ಮುಖಕ್ಕೆ ಹಚ್ಚಿ 15 ನಿಮಿಷಗಳ ಬಳಿಕ ವಾಶ್ ಮಾಡಿ. ಇದರಿಂದ ಆಯ್ಲಿ ಸ್ಕಿನ್ ಸಮಸ್ಯೆ ಕ್ರಮೇಣ ಕಡಿಮೆ ಆಗುತ್ತದೆ.
ಮುಲ್ತಾನಿ ಮಿಟ್ಟಿಯನ್ನು ರೋಸ್ ವಾಟರ್‌ನೊಂದಿಗೆ ಬೆರೆಸಿ ಫೇಸ್ ಪ್ಯಾಕ್ ತಯಾರಿಸಿ ಹಚ್ಚಿ. 10-15 ನಿಮಿಷಗಳ ಬಳಿಕ ಫೇಸ್ ವಾಶ್ ಮಾಡಿ. ಇದು ಚರ್ಮದಲ್ಲಿ ಹೆಚ್ಚುವರಿ ಎಣ್ಣೆಯನ್ನು ಹೀರಿಕೊಳ್ಳಲು ಸಹಾಯಕವಾಗಿದೆ.
ಟೊಮಾಟೊ ಕೂಡ ನೈಸರ್ಗಿಕ ಸಂಕೋಚಕ ಗುಣಗಳಲ್ಲಿ ಸಮೃದ್ಧವಾಗಿದೆ. ಟೊಮಾಟೊವನ್ನು ಎರಡು ಒಳಾಗಿ ಕತ್ತರಿಸಿ ಮುಖಕ್ಕೆ ಹಚ್ಚಿ ನಯವಾಗಿ ಮಸಾಜ್ ಮಾಡಿ. 15 ನಿಮಿಷಗಳ ಬಳಿಕ ತಣ್ಣೀರಿನಿಂದ ಫೇಸ್ ವಾಶ್ ಮಾಡಿ.
ಸೌತೆಕಾಯಿಯ ಒಂದು ತುಂಡನ್ನು ತೆಗೆದುಕೊಂಡು ಮುಖಕ್ಕೆ ನಯವಾಗಿ ಮಸಾಜ್ ಮಾಡಿ, 10-15 ನಿಮಿಷಗಳ ಬಳಿಕ ಮುಖ ತೊಳೆಯಿರಿ. ಇದು ಚರ್ಮದಲ್ಲಿ ತೈಲ ಉತ್ಪಾದನೆಯನ್ನು ನಿಯಂತ್ರಿಸುತ್ತದೆ.
ಆಪಲ್ ಸೈಡರ್ ವಿನೆಗರ್ ಅನ್ನು ನೀರಿನೊಂದಿಗೆ ಬೆರೆಸಿ ಹತ್ತಿ ಉಂಡೆ ಸಹಾಯದಿಂದ ಇದನ್ನು ಮುಖಕ್ಕೆ ಹಚ್ಚಿ, 15-20 ನಿಮಿಷಗಳ ಬಳಿಕ ಫೇಸ್ ವಾಶ್ ಮಾಡುವುದರಿಂದ ಎಣ್ಣೆಯುಕ್ತತೆಯನ್ನು ನಿವಾರಿಸಿ, ಚರ್ಮದ pH ಅನ್ನು ಸಮತೋಲನಗೊಳಿಸಾಲು ಪರಿಣಾಮಕಾರಿ ಆಗಿದೆ.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.