ಯೂರಿಕ್ ಆಸಿಡ್ ಸಮಸ್ಯೆಯನ್ನು ನಿವಾರಿಸಲು ಈ ಮನೆಮದ್ದುಗಳನ್ನು ಒಮ್ಮೆ ಟ್ರೈ ಮಾಡಿ
ದೇಹದಲ್ಲಿ ಯೂರಿಕ್ ಆಸಿಡ್ ಹೆಚ್ಚಾದಾಗ ಕೀಲುಗಳಲ್ಲಿ ಅಸಹನೀಯ ನೋವುಂಟಾಗುತ್ತದೆ. ಯೂರಿಕ್ ಆಸಿಡ್ ಸಮಸ್ಯೆ ನಿವಾರಣೆಗೆ ಹೆಚ್ಚು ನೀರು ಕುಡಿಯುವುದು ಅತ್ಯುತ್ತಮ ಪರಿಹಾರ.
ಗ್ರೀನ್ ತೀಯಲ್ಲಿ ಕ್ಯಾಟೆಚಿನ್ ಹೆಚ್ಚಾಗಿದ್ದು ಇದು ಶಕ್ತಿಯುತವಾದ ಉತ್ಕರ್ಷಣ ನಿರೋಧಕವಾಗಿದೆ. ನಿತ್ಯ ಒಂದೆರಡು ಕಪ್ ಗ್ರೀನ್ ಟೀ ಸೇವನೆ ಯೂರಿಕ್ ಆಸಿಡ್ ಅನ್ನು ಕಡಿಮೆ ಮಾಡಲು ಪ್ರಯೋಜನಕಾರಿ ಆಗಿದೆ.
ನಿಮ್ಮ ಡಯಟ್ನಲ್ಲಿ ಫೈಬರ್ ಸಮೃದ್ಧ ಆಹಾರಗಳಾದ ಓಟ್ಸ್, ಧಾನ್ಯಗಳು, ಬ್ರೊಕೋಲಿ, ಕುಂಬಳಕಾಯಿಯಂತಹ ಆಹಾರಗಳ ಬಲ್ಕೆಯಿಂದ ಯೂರಿಕ್ ಆಸಿಡ್ ಹೆಚ್ಚಾಗದಂತೆ ತಡೆಯಬಹುದು.
ನಿತ್ಯ ವಿಟಮಿನ್ ಸಿ ಸಮೃದ್ಧ ಹಣ್ಣುಗಳಾದ ಕಿತ್ತಳೆ, ನಿಂಬೆ ಹಣ್ಣುಗಳನ್ನು ಸೇವಿಸುವುದರಿಂದ ಯೂರಿಕ್ ಆಸಿಡ್ ಅನ್ನು ಸುಲಭವಾಗಿ ಕಡಿಮೆ ಮಾಡಬಹುದು.
ಎಳನೀರಿನಂತಹ ನೈಸರ್ಗಿಕ ಶುದ್ಧೀಕರಣ ಪಾನೀಯಗಳನ್ನು ನಿತ್ಯ ಸೇವಿಸುವುದರಿಂದ ದೇಹದಲ್ಲಿ ಯೂರಿಕ್ ಆಮ್ಲ ಹೆಚ್ಚಾಗುವುದನ್ನು ತಪ್ಪಿಸಬಹುದು.
ಯೂರಿಕ್ ಆಮ್ಲ ಸಮಸ್ಯೆ ಇರುವ್ವವರು ಫಿಬರ್ ಸಮೃದ್ಧವಾದ ಸೌತೆಕಾಯಿಯನ್ನು ನಿತ್ಯ ತಿನ್ನುವುದರಿಂದ ಹೆಚ್ಚಿನ ಪರಿಹಾರ ದೊರೆಯಲಿದೆ.
ಡಾರ್ಕ್ ಚಾಕೊಲೇಟ್‌ಗಳಲ್ಲಿರುವ ಥಿಯೋಬ್ರೊಮಿನ್ ಆಲ್ಕಲಾಯ್ಡ್ ಯೂರಿಕ್ ಆಮ್ಲದ ಮಟ್ಟವನ್ನು ಕಡಿಮೆ ಮಾಡಲು ಪ್ರಯೋಜನಕಾರಿ ಆಗಿದೆ. ಹಾಗಾಗಿ ನಿಯಮಿತ ಡಾರ್ಕ್ ಚಾಕೋಲೇಟ್ ತಿನ್ನುವುದರಿಂದ ಯೂರಿಕ್ ಆಮ್ಲ ಹೆಚ್ಚಾಗುವುದನ್ನು ತಪ್ಪಿಸಬಹುದು.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.