ಗಂಟಲು ನೋವಿನ ಸಮಸ್ಯೆಯೇ? ಈ ಆಹಾರಗಳನ್ನು ತಿಂದು ನೋಡಿ, ಕ್ಷಣದಲ್ಲೇ ಸಿಗುತ್ತೆ ಪರಿಹಾರ
ಈಗಷ್ಟೇ ದೀಪಾವಳಿ ಹಬ್ಬ ಮುಗಿದಿದೆ. ದೀಪಾವಳಿ ಸಂದರ್ಭದಲ್ಲಿ ಉಂಟಾಗುವ ವಾಯುಮಾಲಿನ್ಯ, ಸೋಂಕಿನಿಂದಾಗಿ ಕೆಮ್ಮು, ನೆಗಡಿ, ಗಂಟಲು ನೋವಿನಂತಹ ಸಮಸ್ಯೆಗಳು ಕಾಡುವುದು ಸಾಮಾನ್ಯ ಸಂಗತಿ. ಆದರೆ, ಕೆಲವು ಮನೆಮದ್ದುಗಳಿಂದ ಇದಕ್ಕೆ ಸುಲಭ ಪರಿಹಾರ ಪಡೆಯಬಹುದು.
ಬೆಚ್ಚಗಿನ ನೀರಿನಲ್ಲಿ ಅರ್ಧ ಟೀಸ್ಪೂನ್ ಉಪ್ಪು ಬೆರೆಸಿ ರಾತ್ರಿ ಮಲಗುವ ಮೊದಲು, ಬೆಳಿಗ್ಗೆ ಎದ್ದ ಕೂಡಲೇ ಗಾರ್ಗಲ್ ಮಾಡಿದರೆ ಗಂಟಲಿನ ಕಿರಿಕಿರಿ ಕಡಿಮೆಯಾಗುತ್ತದೆ.
ಅರಿಶಿನದಲ್ಲಿ ಉರಿಯೂತ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳು ಕಂಡು ಬರುತ್ತದೆ. ರಾತ್ರಿ ಮಲಗುವ ಮೊದಲು ಅರಿಶಿನದ ಹಾಲು ಕುಡಿಯುವುದರಿಂದ ಬೆಳಿಗ್ಗೆ ಏಳುವಷ್ಟರಲ್ಲಿ ಗಂಟಲು ನೋವು ಉಪಶಮನವಾಗುತ್ತದೆ.
ಒಂದು ಲೋಟ ಬಿಸಿ ನೀರಿನಲ್ಲಿ 1 ಸ್ಪೂನ್ ಜೇನುತುಪ್ಪ ಬೆರೆಸಿ ಕುಡಿದರೆ ಗಂಟಲು ನೋವಿನಿಂದ ಪರಿಹಾರ ದೊರೆಯುತ್ತದೆ.
ತಾಜಾ ಶುಂಠಿಯಿಂದ ತಯಾರಿಸಿದ ಟೀ ಕುಡಿಯುವುದರಿಂದ ಗಂಟಲು ನೋವಿನಿಂದ ಕೂಡಲೇ ಪರಿಹಾರ ಪಡೆಯಬಹುದು.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.