ದಾಸವಾಳ ಹೂವನ್ನು ಹೀಗೆ ಬಳಸಿದರೆ ಕೂದಲು ಸದೃಢ, ಕಡುಕಪ್ಪಾಗಿ ಮೊನಕಾಲುದ್ದ ಬೆಳೆಯುತ್ತೆ! ಒಂದೇ ವಾರದಲ್ಲಿ ಫಲಿತಾಂಶ!
ಕೂದಲು ಉದುರುವುದು ಈ ಸಮಸ್ಯೆ ಹೆಚ್ಚಿನವರಿಗೆ ಒಮ್ಮೊಮ್ಮೆ ಮಾತ್ರ ಬರುತ್ತದೆ ಮತ್ತು ಕೆಲವರಿಗೆ ಬೇಸಿಗೆಯಲ್ಲಿ ಹೆಚ್ಚು. ಬಿಸಿಲು, ಮಾಲಿನ್ಯ, ಧೂಳು ಮತ್ತು ಹಾನಿಕಾರಕ ಸೂರ್ಯನ ಕಿರಣಗಳು ಕೂದಲಿನ ಮೇಲೆ ಬಿದ್ದು ಕೂದಲಿನ ಬುಡಕ್ಕೆ ಹಾನಿ ಮಾಡುತ್ತದೆ. ಇದು ಹೆಚ್ಚು ಕೂದಲು ಉದುರುವಿಕೆಗೆ ಕಾರಣವಾಗುತ್ತದೆ.
ಆರೋಗ್ಯಕರ ಕೂದಲನ್ನು ಹೊಂದಲು.. ಅದನ್ನು ಮೊದಲು ಬೇರುಗಳಿಂದ ಬಲವಾಗಿ ಮಾಡಬೇಕು. ಅದಕ್ಕಾಗಿ ನಾವು ಕೆಲವು ನೈಸರ್ಗಿಕ ಸಲಹೆಗಳನ್ನು ಅನುಸರಿಸಬಹುದು. ಒಂದೇ ಒಂದು ದಾಸವಾಳದ ಹೂವನ್ನು ಹೇಗೆ ಬಳಸಿ ಈ ಸಮಸ್ಯೆಗೆ ಹೇಗೆ ಮುಕ್ತಿ ಪಡೆಯಬಹುದೆಂದು ಇಲ್ಲಿ ತಿಳಿಯೋಣ..
ಕೂದಲಿಗೆ ದಾಸವಾಳವನ್ನು ಬಳಸುವುದು ಹಳೆಯ ಪರಿಹಾರವಾಗಿದೆ. ದಾಸವಾಳದ ಹೂವು ಕೂದಲಿನ ಬೆಳವಣಿಗೆಗೆ ಉಪಯುಕ್ತವಾಗಿದೆ. ದಾಸವಾಳದಲ್ಲಿರುವ ಕೆಲವು ಅಂಶಗಳು ಬೇಸಿಗೆಯಲ್ಲಿ ಕೂದಲನ್ನು ತಂಪಾಗಿಸುತ್ತದೆ ಮತ್ತು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.
ದಾಸವಾಳ ಹೂವು ಕ್ಯಾಲ್ಸಿಯಂ, ರಂಜಕ ಮತ್ತು ಕಬ್ಬಿಣದಂತಹ ಪೋಷಕಾಂಶಗಳನ್ನು ಹೊಂದಿರುತ್ತದೆ. ಇದು ಕೂದಲಿಗೆ ಪೋಷಣೆ ನೀಡುತ್ತದೆ. ಇದರಲ್ಲಿ ವಿಟಮಿನ್ ಸಿ ಕೂಡ ಸಮೃದ್ಧವಾಗಿದೆ. ಇದು ಕೂದಲನ್ನು ದಟ್ಟವಾಗಿ ಬೆಳೆಯುವಂತೆ ಮಾಡುತ್ತದೆ..
ಕೂದಲಿಗೆ ದಾಸವಾಳವನ್ನು ಸಾಂಪ್ರದಾಯಿಕವಾಗಿ ಬಿಳಿ ಕೂದಲನ್ನು ಕಪ್ಪಾಗಿಸಲು ನೈಸರ್ಗಿಕ ಬಣ್ಣವಾಗಿ ಬಳಸಬಹುದು. ದಾಸವಾಳದ ಹೂಗಳನ್ನು ಸರಿಯಾಗಿ ಬಳಸಿದರೆ ಬಿಳಿ ಕೂದಲು ಕಪ್ಪಾಗುತ್ತದೆ.
ಬಳಸುವ ವಿಧಾನ: 2 ಕಪ್ ನೀರು ಅದಕ್ಕೆ ಒಂದು ಕೆಂಪು ದಾಸವಾಳ ಹೂವಿನ ದಳಗಳನ್ನು ಹಾಕಿ ಕುದಿಸಿ. ಬಳಿಕ ನೀರನ್ನು ತಣ್ಣಗಾಗಿಸಿ. ಸ್ಪ್ರೇ ಬಾಟಲಿಗೆ ಹಾಕಿ ಕೂದಲಿಗೆ ಸಿಂಪಡಿಸಿ.. ಇದರಿಂದ ಕೂದಲು ಕಪ್ಪಾಗುತ್ತದೆ..
ಬಳಸುವ ವಿಧಾನ 2: ಮೊಸರಿನಲ್ಲಿ ದಾಸವಾಗಳದ ಹೂವಿನ ಪೇಸ್ಟ್‌ನ್ನು ಮಿಶ್ರಣಮಾಡಿ ಹಚ್ಚಿಕೊಂಡು, ಒಂದು ಗಂಟೆ ಬಿಟ್ಟು ತೊಳೆಯಿರಿ.. ಇದರಿಂದ ಕೂದಲಿನ ಹಲವಾರು ಸಮಸ್ಯೆಗಳು ವಾಸಿಯಾಗಿ ಕೂದಲು ದಪ್ಪ ಹಾಗೂ ಉದ್ದವಾಗಿ ಬೆಳೆಯುತ್ತೆ..
(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee News Kannada ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.)