ಮೊಟ್ಟೆಗೆ ಈ ಎರಡು ಪದಾರ್ಥ ಬೆರೆಸಿ ತಲೆಗೆ ಹಚ್ಚಿ.. 2 ನಿಮಿಷದಲ್ಲಿ ಬಿಳಿ ಕೂದಲು ಕಪ್ಪಾಗುವುದು! ತಲೆಹೊಟ್ಟು ತೊಲಗಿ ಬೇರಿನಿಂದಲೇ ಗಟ್ಟಿಯಾಗಿ ಉದ್ದ ಬೆಳೆಯುವುದು!
Egg Hair Mask: ಮೊಟ್ಟೆಯಲ್ಲಿ ಈ ಎರಡು ಪದಾರ್ಥ ಬೆರೆಸಿ ತಲೆಗೆ ಹಚ್ಚಿದರೆ ಬಿಳಿ ಕೂದಲು ಕಪ್ಪಾಗುವುದು. ಜೊತೆಗೆ ತಲೆಹೊಟ್ಟು ತೊಲಗಿ ಬೇರಿನಿಂದಲೇ ಗಟ್ಟಿಯಾಗಿ ಉದ್ದ ಬೆಳೆಯುವುದು.
ಇತ್ತೀಚಿನ ದಿನಗಳಲ್ಲಿ ಕೂದಲು ಉದುರುವಿಕೆಯ ಸಮಸ್ಯೆಯು ಎಲ್ಲಾ ವಯಸ್ಸಿನ ಜನರನ್ನು ಕಾಡುತ್ತಿದೆ, ಚಿಕ್ಕ ವಯಸ್ಸಿನಲ್ಲೇ ಕೂದಲು ಬಿಳಿಯಾಗುತ್ತಿದೆ.
ಇದನ್ನು ತಪ್ಪಿಸಲು ಅನೇಕ ಜನರು ಮಾರುಕಟ್ಟೆಯಲ್ಲಿ ಲಭ್ಯವಿರುವ ರಾಸಾಯನಿಕಯುಕ್ತ ಕೂದಲು ಉತ್ಪನ್ನಗಳನ್ನು ಬಳಸುತ್ತಾರೆ.
ಬಿಳಿ ಕೂದಲು ಮತ್ತು ಕೂದಲು ಉದುರುವ ಸಮಸ್ಯೆ ಇರುವವರು ಮೊಟ್ಟೆಯಿಂದ ಮಾಡಿದ ಹೇರ್ ಮಾಸ್ಕ್ ಅನ್ನು ಬಳಸಬಹುದಾಗಿದೆ. ಮೊಟ್ಟೆಯಲ್ಲಿ ಎರಡು ಪಾರ್ಥಗಳನ್ನು ಬೆರೆಸಿ ತಲೆಗೆ ಹಚ್ಚುವುದರಿಂದ ಬಿಳಿ ಕೂದಲು ಕಪ್ಪಾಗುವುದು.
ಮೆಂತ್ಯ ವಿಟಮಿನ್ ಸಿ, ಪ್ರೋಟೀನ್ ಮತ್ತು ಕಬ್ಬಿಣವನ್ನು ಹೊಂದಿರುತ್ತದೆ. ಇದು ಕೂದಲಿನ ಬೇರುಗಳನ್ನು ಬಲಪಡಿಸುತ್ತದೆ. ವಾರದಲ್ಲಿ 2 ದಿನ ಈ ಹೇರ್ ಮಾಸ್ಕ್ ಹಾಕಿಕೊಂಡರೆ ಬಿಳಿ ಕೂದಲು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.
ಈ ಹೇರ್ ಮಾಸ್ಕ್ ತಯಾರಿಸಲು 2 ಚಮಚ ಮೆಂತ್ಯ ಬೀಜ, 2 ಚಮಚ ಕಾಫಿ ಪುಡಿ ಮತ್ತು 2 ಮೊಟ್ಟೆಗಳು ಬೇಕಾಗುತ್ತವೆ. ಮೆಂತ್ಯ ರಾತ್ರಿಯಿಡೀ ನೆನೆಸಿಡಿ ಮತ್ತು ಬೆಳಿಗ್ಗೆ ಅದನ್ನು ರುಬ್ಬಿ ಪೇಸ್ಟ್ ತಯಾರಿಸಿ. ಈಗ ಅದರೊಂದಿಗೆ 2 ಮೊಟ್ಟೆ, 2 ಚಮಚ ಕಾಫಿ ಪುಡಿ ಮಿಶ್ರಣ ಮಾಡಿ.
ಕೂದಲಿನ ತುದಿಯಿಂದ ಬೇರಿನವರೆಗೆ ಈ ಹೇರ್ ಮಾಸ್ಕ್ ಹಾಕಿಕೊಳ್ಳಿ. ಸುಮಾರು 30 ನಿಮಿಷಗಳ ಕಾಲ ಬಿಡಿ. ಅಂತಿಮವಾಗಿ ಕೂದಲನ್ನು ಶುದ್ಧ ನೀರಿನಿಂದ ತೊಳೆಯಿರಿ. ವಾರದಲ್ಲಿ 2 ಬಾರಿ ಈ ಹೇರ್ ಮಾಸ್ಕ್ ಹಾಕಿಕೊಳ್ಳಿ ಕೂದಲು ಬಲಗೊಳ್ಳುತ್ತದೆ. ಬಿಳಿ ಕೂದಲು ಸಹ ಕಪ್ಪಾಗುವುದು.
ಸೂಚನೆ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.