ಮೊಟ್ಟೆಯಲ್ಲಿ ಇವುಗಳನ್ನು ಬೆರೆಸಿ ತಲೆಗೆ ಹಚ್ಚಿದರೆ ಸಾಕು.. ಬಿಳಿ ಕೂದಲು ಕಪ್ಪಾಗಿ ದಷ್ಟಪುಷ್ಟವಾಗಿ ಬೇರಿನಿಂದಲೇ ಗಟ್ಟಿಯಾಗಿ ಉದ್ದ ಬೆಳೆಯುವುದು!
white hair home remedy: ಇಂದಿನ ಕಾಲಘಟ್ಟದಲ್ಲಿ ಅನೇಕರು ಕೂದಲಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ಸಮಸ್ಯೆಯನ್ನು ಕಡಿಮೆ ಮಾಡಲು ಕೆಲವು ಪೋಷಕಾಂಶಗಳು ಕೂದಲಿಗೆ ತಲುಪಬೇಕು. ಎಗ್ ಮಾಸ್ಕ್ ಇದಕ್ಕೆ ಸಹಾಯ ಮಾಡುತ್ತದೆ.
ಮೊಟ್ಟೆಯಲ್ಲಿ ಪ್ರೋಟೀನ್, ಬಯೋಟಿನ್, ಫೋಲೇಟ್, ವಿಟಮಿನ್ ಎ, ಡಿ ಮತ್ತು ಇ ಮುಂತಾದ ಪೋಷಕಾಂಶಗಳಿವೆ. ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಕೂದಲು ಉದುರುವುದನ್ನು ಕಡಿಮೆ ಮಾಡುತ್ತದೆ.
ಮೊಟ್ಟೆಯ ಹಳದಿ ಲೋಳೆಯಲ್ಲಿ ಪ್ರೋಟೀನ್, ಕೊಬ್ಬಿನಾಮ್ಲಗಳು, ವಿಟಮಿನ್ ಎ, ಡಿ ಮತ್ತು ಇ ಸಮೃದ್ಧವಾಗಿದೆ. ಆಲಿವ್ ಎಣ್ಣೆಯು ಕೂದಲನ್ನು ಮೃದುವಾಗಿಸುವುದು ಮಾತ್ರವಲ್ಲದೆ ಸ್ಟ್ರಾಂಗ್ ಕೂಡ ಮಾಡುತ್ತದೆ.
ಮೊಟ್ಟೆಯ ಹಳದಿ ಭಾಗ, ಆಲಿವ್ ಎಣ್ಣೆ ಮತ್ತು ಸ್ವಲ್ಪ ಬೀಟ್‌ರೂಟ್ ರಸ ಎಲ್ಲಾ ಪದಾರ್ಥಗಳನ್ನು ಒಂದು ಪಾತ್ರೆಯಲ್ಲಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಈ ಹೇರ್ ಪ್ಯಾಕ್ ಅನ್ನು ಕೂದಲಿಗೆ ಬುಡದಿಂದ ತುದಿಯವರೆಗೆ ಹಚ್ಚಿಕೊಂಡು ಒಂದು ಗಂಟೆಯ ನಂತರ ತೊಳೆಯಿರಿ. ವಾರದಲ್ಲಿ ಎರಡು ಅಥವಾ ಮೂರು ಬಾರಿ ಈ ಪ್ಯಾಕ್ ಹಾಕಿ.
ಒಂದು ಮೊಟ್ಟೆ, ಬಾಳೆಹಣ್ಣಿನ ತಿರುಳು, 3 ಟೇಬಲ್ ಸ್ಪೂನ್ ಹಾಲು, ಜೇನುತುಪ್ಪದ 3 ಟೇಬಲ್ ಸ್ಪೂನ್, ಐದು ಚಮಚ ಆಲಿವ್ ಎಣ್ಣೆ, ನಿಂಬೆ ರಸದೊಂದಿಗೆ ಒಂದು ಬಟ್ಟಲಿನಲ್ಲಿ ಹಾಕಿ ಕಲಿಸಿ. ಇದನ್ನು ನೆತ್ತಿಯ ಮೇಲೆ ಹಚ್ಚಿ ಮತ್ತು ಒಣಗಿದ ನಂತರ ಸೌಮ್ಯ ಶಾಂಪೂ ಬಳಸಿ ತೊಳೆಯಿರಿ.
ಸೂಚನೆ: ಪ್ರಿಯ ಓದುಗರೇ, ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.