Eid Special: ಇಲ್ಲಿವೆ ನೋಡಿ ವಿಶ್ವದ 6 ಅತ್ಯಂತ ಸುಂದರ ಮಸೀದಿಗಳು

Mon, 02 May 2022-9:15 pm,

ಇರಾನ್‌ನ ಶೇಖ್ ಲೊಟ್‌ಫುಲ್ಲಾ ಮಸೀದಿಯು ಇರಾನಿನ ವಾಸ್ತುಶಿಲ್ಪಕ್ಕೆ ಒಂದು ಅದ್ಭುತ ಉದಾಹರಣೆಯಾಗಿದೆ. ಈ ಮಸೀದಿಯು ಇಸ್ಫಹಾನ್‌ನಲ್ಲಿದೆ. ಶೇಖ್ ಅಬ್ಬಾಸ್ Iರ ಆಳ್ವಿಕೆಯಲ್ಲಿ 1602-1619ರ ನಡುವೆ ನಿರ್ಮಿಸಲಾದ ಈ ಮಸೀದಿಯು ಆಸ್ಪತ್ರೆ, ರಾಯಲ್ ಮಿಂಟ್ ಮತ್ತು ರಾಯಲ್ ಕಾರವಾನ್ಸೆರೈಗಳನ್ನು ಸಹ ಹೊಂದಿದೆ.

ಇಸ್ರೇಲಿ ನಗರವಾದ ಜೆರುಸಲೇಂನಲ್ಲಿರುವ ಅಲ್-ಅಕ್ಸಾ ಮಸೀದಿಯನ್ನು ಇಸ್ಲಾಂ ಧರ್ಮದಲ್ಲಿ 3ನೇ ಪವಿತ್ರ ಸ್ಥಳವೆಂದು ಪರಿಗಣಿಸಲಾಗಿದೆ. ಯುನೆಸ್ಕೋದಿಂದ ಗುರುತಿಸಲ್ಪಟ್ಟ ಅಲ್-ಅಕ್ಸಾ ಮಸೀದಿಯು ಮುಸ್ಲಿಮರು ಮತ್ತು ಯಹೂದಿಗಳಿಗೆ ಪವಿತ್ರ ಸ್ಥಳವಾಗಿದೆ. ಪ್ರವಾದಿ ಮುಹಮ್ಮದ್ ಅವರನ್ನು ಸ್ವರ್ಗಕ್ಕೆ ಏರುವ ಮೊದಲು ಮೆಕ್ಕಾದ ಅಲ್-ಹರಾಮ್ ಮಸೀದಿಯಿಂದ ಇಲ್ಲಿಗೆ ಕರೆದೊಯ್ಯಲಾಯಿತು ಎಂದು ನಂಬಲಾಗಿದೆ.

ಯುನೈಟೆಡ್ ಅರಬ್ ಎಮಿರೇಟ್ಸ್‌ನ ಶೇಖ್ ಜಾಯೆದ್ ಗ್ರ್ಯಾಂಡ್ ಮಸೀದಿ ಕೂಡ ವಿಶ್ವದ ಅತ್ಯಂತ ಸುಂದರವಾದ ಮಸೀದಿಗಳಲ್ಲಿ ಒಂದಾಗಿದೆ. 1996ರಲ್ಲಿ ನಿರ್ಮಿಸಲಾದ ಶೇಖ್ ಜಾಯೆದ್ ಗ್ರ್ಯಾಂಡ್ ಮಸೀದಿಯು ಇಸ್ಲಾಮಿಕ್ ವಾಸ್ತುಶಿಲ್ಪದ ವಿವಿಧ ಶೈಲಿಗಳನ್ನು ಒಳಗೊಂಡಿದೆ. 100 ಮೀಟರ್ ಎತ್ತರವಿರುವ ಈ ಮಸೀದಿಯು 82 ಗುಮ್ಮಟಗಳು, ಸಾವಿರಕ್ಕೂ ಹೆಚ್ಚು ಕಂಬಗಳು, 24 ಕ್ವಾರ್ಟ್ಸ್ ಗಿಲ್ಡೆಡ್ ಗೊಂಚಲುಗಳು ಮತ್ತು ವಿಶ್ವದ ಅತಿದೊಡ್ಡ ಕೈಯಿಂದ ಹೆಣೆದ ಕಾರ್ಪೆಟ್ ಅನ್ನು ಹೊಂದಿದೆ.

ಈಜಿಪ್ಟ್‌ನ ರಾಜಧಾನಿ ಕೈರೋದಲ್ಲಿರುವ ಅಕ್ಸಾಂಕೂರ್ ಮಸೀದಿಯನ್ನು 14ನೇ ಶತಮಾನದಲ್ಲಿ ಒಟ್ಟೋಮನ್ ಶೈಲಿಯಲ್ಲಿ ನಿರ್ಮಿಸಲಾಗಿದೆ. ಅಕ್ಸುಂಕೂರ್ ಮಸೀದಿಯು ಅದರ ಸಂಸ್ಥಾಪಕ ಶಮ್ಸ್ ಅಲ್-ದಿನ್ ಅಕ್ಸುಂಕೂರ್ ಮತ್ತು ಅವರ ಪುತ್ರರ ಸಮಾಧಿಗಳನ್ನು ಹೊಂದಿದೆ. ಈ ಸುಂದರವಾದ ಕಟ್ಟಡವು ಸೈಪ್ರೆಸ್ ಮರಗಳ ಆಕಾರದಲ್ಲಿ ವಿಶಿಷ್ಟವಾದ ಇಜ್ನಿಕ್ ಅಂಚುಗಳನ್ನು ಹೊಂದಿದೆ.

ಟರ್ಕಿಯ ಸುಲ್ತಾನ್ ಅಹ್ಮದ್ ಮಸೀದಿಯನ್ನು ಸಾಮಾನ್ಯವಾಗಿ ನೀಲಿ ಮಸೀದಿ ಎಂದು ಕರೆಯಲಾಗುತ್ತದೆ. ಏಕೆಂದರೆ ಇದರ ಸೀಲಿಂಗ್ 20,000 ಕೈಯಿಂದ ಚಿತ್ರಿಸಿದ ನೀಲಿ ಇಜ್ನಿಕ್ ಟೈಲ್ಸ್‌ಗಳನ್ನು ಹೊಂದಿದೆ. 1609 ಮತ್ತು 1616ರ ನಡುವೆ ಒಟ್ಟೋಮನ್ ಸಾಮ್ರಾಜ್ಯದ ಅವಧಿಯಲ್ಲಿ ನಿರ್ಮಿಸಲಾದ ಈ ಮಸೀದಿಯನ್ನು ಸಾಂಪ್ರದಾಯಿಕ ಇಸ್ಲಾಮಿಕ್ ಮತ್ತು ಬೈಜಾಂಟೈನ್ ಕ್ರಿಶ್ಚಿಯನ್ ವಾಸ್ತುಶೈಲಿಯ ಮಿಶ್ರಣದಲ್ಲಿ ನಿರ್ಮಿಸಲಾಗಿದೆ. ಇದು 6 ಮಿನಾರ್‌ಗಳಿಂದ ಆವೃತವಾಗಿದೆ.

ದೆಹಲಿಯ ಜಮಾ ಮಸೀದಿಯು ಷಹಜಹಾನ್‌ನ ಕೊನೆಯ ವಾಸ್ತುಶಿಲ್ಪದ ಮಾದರಿಯಾಗಿದೆ. ಜಮಾ ಮಸೀದಿ ದೇಶದ 2ನೇ ಅತಿದೊಡ್ಡ ಮಸೀದಿಯಾಗಿದ್ದು, ಹಳೆಯ ದೆಹಲಿಯ ಹೃದಯಭಾಗದಲ್ಲಿದೆ. 3 ಮುಖ್ಯ ದ್ವಾರಗಳು, 4 ಮಿನಾರುಗಳು ಮತ್ತು ಎರಡು 40 ಮೀಟರ್ ಎತ್ತರದ ಮಿನಾರ್‌ಗಳನ್ನು ಹೊಂದಿದೆ. ಇದನ್ನು ಸಾಂಪ್ರದಾಯಿಕ ಮೊಘಲ್ ವಾಸ್ತುಶಿಲ್ಪ ಶೈಲಿಯಲ್ಲಿ ನಿರ್ಮಿಸಲಾಗಿದೆ ಮತ್ತು ಇದು ಮೆಕ್ಕಾ ದಿಕ್ಕಿನಲ್ಲಿದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link