ಆಲ್ಟೊಗಿಂತ ಕಡಿಮೆ ಬೆಲೆಗೆ ಖರೀದಿಸಿ ಈ ಮಿನಿ ಎಲೆಕ್ಟ್ರಿಕ್ ಕಾರು : ಸಿಂಗಲ್ ಚಾರ್ಜ್‌ನಲ್ಲಿ ಕ್ರಮಿಸುತ್ತದೆ 170 ಕಿಮೀ

Wed, 06 Jul 2022-4:01 pm,

ಈ ಮಿನಿ ಕಾರನ್ನು ವಿಶೇಷವಾಗಿ ಮಹಿಳೆಯರಿಗಾಗಿ ವಿನ್ಯಾಸಗೊಳಿಸಲಾಗಿದೆ. ಇದಕ್ಕೆ ನಾಲ್ಕು ಆಸನಗಳು, ಮೂರು ಬಾಗಿಲುಗಳನ್ನು ನೀಡಲಾಗಿದೆ.  ಇದಕ್ಕೆ ಚೌಕಾಕಾರದ ಬಾಡಿ ಶೇಪ್ , ಆಯತಾಕಾರದ ಹೆಡ್‌ಲೈಟ್‌ಗಳು ಮತ್ತು ಕ್ಲೋಸ್ಡ್ ಫ್ರಂಟ್ ಗ್ರಿಲ್ ಶೈಲಿಯನ್ನು ನೀಡಲಾಗಿದೆ.  

ಯುವಾನ್ಬಾವೊ ಸರೌಂಡ್ ಕ್ಯಾಮೆರಾ ವ್ಯವಸ್ಥೆಯನ್ನು ಹೊಂದಿದ್ದು ಅದು 360 ಡಿಗ್ರಿ  ವಿಶುಯಲ್ ಶೋ ಒದಗಿಸುತ್ತದೆ. ಕಾರಿನ ಮುಂಭಾಗ ಮತ್ತು ಹಿಂಭಾಗದಲ್ಲಿ ರಾಡಾರ್‌ಗಳು, ಎಲೆಕ್ಟ್ರಾನಿಕ್ ಬ್ರೇಕಿಂಗ್ ಸಿಸ್ಟಮ್, ಮುಂಭಾಗದಲ್ಲಿ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ ಡ್ರಮ್ ಬ್ರೇಕ್‌ಗಳಿವೆ.

BAW ಯುವಾನ್‌ಬಾವೊ 200kW  ರಿಯರ್ ವ್ಹೀಲ್  ಡ್ರೈವ್ ಮೋಟಾರ್‌ನಿಂದ ಚಾಲಿತವಾಗಿದೆ. ಈ ಮಿನಿ ಎಲೆಕ್ಟ್ರಿಕ್ ಕಾರು ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ ಬರುತ್ತದೆ 9.6kWh ಮತ್ತು 13.6kWh.

ಈ ಮಿನಿ ಎಲೆಕ್ಟ್ರಿಕ್ ಕಾರನ್ನು 4 ರೂಪಾಂತರಗಳಲ್ಲಿ ಖರೀದಿಸಬಹುದು. ಈ ನಾಲ್ಕು ರೂಪಾಂತರಗಳ ವ್ಯಾಪ್ತಿಯು 120 ರಿಂದ 170 ಕಿ.ಮೀ. ಇದು ಗಂಟೆಗೆ 100 ಕಿಮೀ ವೇಗವನ್ನು ಹೊಂದಿದೆ.

ಯುವಾನ್ಬಾವೊ ಬೆಲೆ  ಅಂದಾಜು 4 ಲಕ್ಷದಿಂದ ಪ್ರಾರಂಭವಾಗುತ್ತದೆ.  ಉನ್ನತ ಮಾದರಿಯ ಕಾರಿನ ಬೆಲೆ   5.87 ಲಕ್ಷದವರೆಗೆ ಇರುತ್ತದೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link