ಮತ್ತೆ ಛಿದ್ರವಾದ ಎಲೋನ್ ಮಸ್ಕ್ ಕನಸು; ಉಡಾವಣೆ ಬಳಿಕ ನಾಶವಾದ SpaceXನ ಶಕ್ತಿಶಾಲಿ ರಾಕೆಟ್!

Thu, 23 Nov 2023-5:52 pm,

ಜಗತ್ತಿನ ಯಶಸ್ವಿ ಉದ್ಯಮಿ ಎಲೋನ್ ಮಸ್ಕ್ ತನ್ನ ರಾಕೆಟ್‍ಗಳ ಜನರನ್ನು ಚಂದ್ರ ಮತ್ತು ಮಂಗಳ ಗ್ರಹಕ್ಕೆ ಕರೆದೊಯ್ಯುವ ಉದ್ದೇಶ ಹೊಂದಿದ್ದಾನೆ.  

ಎಲೋನ್ ಮಸ್ಕ್ ಅವರ ಕಂಪನಿ 'ಸ್ಪೇಸ್‌ಎಕ್ಸ್' ತನ್ನ ಬೃಹತ್ ರಾಕೆಟ್ 'ಸ್ಟಾರ್‌ಶಿಪ್' ಅನ್ನು ಶನಿವಾರ ಉಡಾವಣೆ ಮಾಡಿತು. ಆದರೆ ಬೂಸ್ಟರ್ ಮತ್ತು ನಂತರ ವಾಹನದಲ್ಲಿ ಸ್ಫೋಟದಿಂದಾಗಿ ಅದರ 2ನೇ ಪರೀಕ್ಷಾರ್ಥ ಹಾರಾಟ ವಿಫಲವಾಗಿದೆ.

ಬೂಸ್ಟರ್ ರಾಕೆಟ್ ಅನ್ನು ಬಾಹ್ಯಾಕಾಶಕ್ಕೆ ಕಳುಹಿಸಲಾಯಿತು, ಆದರೆ ದಕ್ಷಿಣ ಟೆಕ್ಸಾಸ್‌ನಿಂದ ಟೇಕ್ ಆಫ್ ಆದ 8 ನಿಮಿಷಗಳ ನಂತರ ಅದರ ಕಮ್ಯುನಿಕೇಷನ್ ಕಳೆದುಹೋಯಿತು. ಬಳಿಕ ಪರೀಕ್ಷೆಯು ವಿಫಲವಾಗಿದೆ ಎಂದು SpaceX ಘೋಷಿಸಿತು.

ಬಾಹ್ಯಾಕಾಶ ನೌಕೆಯ ಇಂಜಿನ್‌ಗಳನ್ನು ಭೂಮಿಯ ಕಕ್ಷೆಗೆ ಹಾರಿಸಲು ಮುಂದಾದಾಗ ಸಮಸ್ಯೆ ಸಂಭವಿಸಿದೆ. ಆದರೆ ಅದಕ್ಕೆ ಕೆಲವು ನಿಮಿಷಗಳ ಮೊದಲು ಬೂಸ್ಟರ್ ಸ್ಫೋಟಿಸಿತು. ವಾಹನವನ್ನು ಅದರ ಬೂಸ್ಟರ್‌ನಿಂದ ಪ್ರತ್ಯೇಕಿಸಿ ಬಾಹ್ಯಾಕಾಶಕ್ಕೆ ಕಳುಹಿಸುವುದು ಕಂಪನಿಯ ಗುರಿಯಾಗಿತ್ತು.

ಏಪ್ರಿಲ್‌ನಲ್ಲಿ ತನ್ನ ಮೊದಲ ಪರೀಕ್ಷಾರ್ಥ ಹಾರಾಟದ ಸ್ವಲ್ಪ ಸಮಯದ ನಂತರ 'ಸ್ಟಾರ್‌ಶಿಪ್' ರಾಕೆಟ್ ಸ್ಫೋಟದಲ್ಲಿ ನಾಶವಾಯಿತು. ಸ್ಪೇಸ್‌ಎಕ್ಸ್ ಕಳೆದ ಹಲವಾರು ತಿಂಗಳುಗಳಿಂದ ರಾಕೆಟ್ ಮತ್ತು ಉಡಾವಣಾ ಪ್ಯಾಡ್ ಎರಡನ್ನೂ ಸುಧಾರಿಸಿದೆ. ಇದು ಮೆಕ್ಸಿಕೋ ಗಡಿಯ ಬಳಿ ಟೆಕ್ಸಾಸ್‌ನ ದಕ್ಷಿಣ ತುದಿಯಲ್ಲಿದೆ.

ಫೆಡರಲ್ ಏವಿಯೇಷನ್ ​​​​ಅಡ್ಮಿನಿಸ್ಟ್ರೇಷನ್ ಈ ವಾರದ ಆರಂಭದಲ್ಲಿ ಹಾರಾಟಕ್ಕೆ ಸಂಬಂಧಿಸಿದಂತೆ ಎಲ್ಲಾ ಅಗತ್ಯ ಅನುಮೋದನೆಗಳನ್ನು ನೀಡಿತ್ತು. ಸರಿಸುಮಾರು 400 ಅಡಿ ಎತ್ತರದ 'ಸ್ಟಾರ್‌ಶಿಪ್' ವಿಶ್ವದ ಅತಿದೊಡ್ಡ ಮತ್ತು ಶಕ್ತಿಶಾಲಿ ರಾಕೆಟ್ ಆಗಿದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link