Emergency Fund: ಕೊರೊನಾದಂತಹ ಸಂಕಷ್ಟ ಎದುರಿಸಲು ಇಂದಿನಿಂದಲೇ ಸಿದ್ಧಗೊಳಿಸಿ `ತುರ್ತು ನಿಧಿ`

Mon, 17 May 2021-2:04 pm,

1. ಓವರ್ ನೈಟ್ ಫಂಡ್ (Over Night Fund) - ಇದೊಂದು ಡೆಟ್ ಫಂಡ್ ಆಗಿದೆ. ಒಂದೇ ದಿನದಲ್ಲಿ ಮ್ಯಾಚ್ಯುರ್ ಆಗುವ ಬಂದ್ ಗಳಲ್ಲಿ ಹೂಡಿಕೆ ಮಾಡುತ್ತದೆ. ಪ್ರತಿಯೊಂದು ವಹಿವಾಟಿನ ದಿನದ ಆರಂಭದಲ್ಲಿ ಬಂದ್ ಗಳನ್ನು ಖರೀದಿಸಲಾಗುತ್ತದೆ ಮತ್ತು ಇದು ಎರಡನೇ ವಹಿವಾಟಿನ ದಿನ ಮ್ಯಾಚ್ಯೂರ್ ಆಗುತ್ತದೆ. ಸುರಕ್ಷಿತ ಹಾಗೂ ಸುನಿಶ್ಚಿತ ಆದಾಯ ಪಡೆಯಬೇಕೆನ್ನುವವರಿಗೆ  ಓವರ್ ನೈಟ್ ಫಂಡ್ ಒಂದು ಉತ್ತಮ ಆಯ್ಕೆಯಾಗಿದೆ. ಇದು ಒಂದೇ ದಿನದಲ್ಲಿ ಮ್ಯಾಚೂರ್ ಆಗುತ್ತದೆ. ಒಂದೇ ದಿನದಲ್ಲಿ ಮ್ಯಾಚೂರ್ ಆಗುವುದರಿಂದ ಶೇ.100ರಷ್ಟು ಹಣ ಕೋಲ್ಯಾಟರಲೈಸ್ದ್ ಬಾರೋಯಿಂಗ್ ಹಾಗೂ ಲೆಂಡಿಂಗ್ ಆಬ್ಲಿಗೆಶನ್  ಮಾರುಕಟ್ಟೆಯಲ್ಲಿ ಹೂಡಿಕೆಯಾವುದರ ಹಿನ್ನೆಲೆ ರಿಸ್ಕ್ ಕೂಡ ಕಡಿಮೆ ಇರುತ್ತದೆ. ಒಂದೇ ದಿನದ ಮ್ಯಾಚುರಿಟಿ ಇರುವ ಕಾರಣ ಇದರಲ್ಲಿ ಆದಾಯ ಕೂಡ ಸ್ವಲ್ಪ ಕಮ್ಮಿ ಬರುತ್ತದೆ.

2. ಅಲ್ಟ್ರಾ ಶಾರ್ಟ್ ಟರ್ಮ್ ಫಂಡ್ (Ultra Short Term Fund) -  ಈ ಫಂಡ್ ಗಳು ಡೆಟ್ ಹಾಗೂ ಮನಿ ಮಾರ್ಕೆಟ್ ಇನ್ಸ್ಟ್ರುಮೆಂಟ್ ಗಳಲ್ಲಿ 3 ತಿಂಗಳ ಅವಧಿಗೆ ಹೂಡಿಕೆ ಮಾಡುತ್ತವೆ. ಇವುವಳಲ್ಲಿ ವಿವಿಧ ಫಂಡ್ ಗಳ ಆದಾಯವನ್ನು ಪರಿಶೀಲಿಸಿದರೆ 1 ವರ್ಷದಲ್ಲಿ ಹೂಡಿಕೆದಾರರಿಗೆ ಶೇ.9 ರಷ್ಟು ರಿಟರ್ನ್ ಸಿಗುವ ಸಾಧ್ಯತೆ ಇದೆ.  

3. ಶಾರ್ಟ್ ಡ್ಯೂರೆಶನ್ ಫಂಡ್ ಗಳು (Short Duration Fund) - ಇವುಗಳಲ್ಲಿ ಸಾಮಾನ್ಯವಾಗಿ 6 ತಿಂಗಳಿಂದ 1 ವರ್ಷದ ಅವಧಿಗೆ ಹಣ ಹೂಡಿಕೆ ಮಾಡಲಾಗುತ್ತದೆ. ಇವುಗಳಲ್ಲಿನ ವಿವಿಧ ಫಂಡ್ ಗಳ ರಿಟರ್ನ್ ಅನ್ನು ಪರಿಶೀಲಿಸಿದರೆ, ಇವುಗಳಲ್ಲಿ ಶೇ.10 ರಿಂದ ಶೇ.12 ರಷ್ಟು ಆದಾಯ ಸಿಗುತ್ತದೆ.  

4. ಲಿಕ್ವಿಡ್ ಫಂಡ್ (Liquid Fund) - ಲಿಕ್ವಿಡ್ ಫಂಡ್ ಉಳಿತಾಯ ಖಾತೆಯ ರೀತಿ ಕಾರ್ಯನಿರ್ವಹಿಸುತ್ತವೆ. ತುರ್ತು ಸಂದರ್ಭಗಳಲ್ಲಿ ನೀವು ಇವುಗಳಿಂದ ಹಣ ಕೂಡ ವಾಪಸ್ ಪಡೆಯಬಹುದು. ಈ ಫಂಡ್ ಗಳು ಓಪನ್ ಎಂಡೆಡ್ ಫಂಡ್ ಗಳಾಗಿರುತ್ತವೆ. ಇವು ಡೆಟ್ ಹಾಗೂ ಮನಿ ಮಾರ್ಕೆಟ್ ಇನ್ಸ್ಟ್ರುಮೆಂಟ್ ನಲ್ಲಿ 30 ದಿನಗಳ ಅವಧಿಯಿಂದ 91 ದಿನಗಳ ಅವಧಿಗೆ ಹೂಡಿಕೆ ಮಾಡುತ್ತವೆ.

5. ಒಂದು ವರ್ಷದ ಅವಧಿಯ FD - 1 ವರ್ಷದ ಅವಧಿಗಾಗಿ ಸ್ಥಿರ ಠೇವಣಿ ಆಯ್ಕೆ ಕೂಡ ಒಂದು ಉತ್ತಮ ವಿಕಲ್ಪವಾಗಿದೆ. ಹೆಚ್ಚುವರಿ ಬ್ಯಾಂಕ್ ಗಳಲ್ಲಿ ಕನಿಷ್ಠ FD ಮೊತ್ತ ರೂ.1000 ಇದ್ದರೆ, ಗರಿಷ್ಟ ಠೇವಣಿಗೆ ಯಾವುದೇ ಮಿತಿ ಇಲ್ಲ.

6. ರೆಕರಿಂಗ್ ಡಿಪಾಸಿಟ್ - ಪೋಸ್ಟ್ ಆಫಿಸ್ RD ಮೇಲೆ ಶೇ.5.8 ರಷ್ಟು ಬಡ್ಡಿ ಸಿಗುತ್ತದ್ದರೆ, ವಿವಿಧ ಬ್ಯಾಂಕ್ ಗಳಲ್ಲಿ  ಶೇ.5 ರಿಂದ ಶೇ.6 ರಷ್ಟು ಬಡ್ಡಿ ಲಭಿಸುತ್ತದೆ. ಒಂದು ವರ್ಷದ ಅವಧಿಯ RD ಅನ್ನು ನೀವು 10 ವರ್ಷಗಳವರೆಗೆ ಮುಂದುವರೆಸಬಹುದು.

ZEENEWS TRENDING STORIES

By continuing to use the site, you agree to the use of cookies. You can find out more by Tapping this link