ಮಾರ್ಚ್ ನಲ್ಲಿ ಶನಿ ಸಾಡೇಸಾತಿಯಿಂದ ಸಂಪೂರ್ಣ ಮುಕ್ತಿ ಪಡೆಯುತ್ತಾರೆ ಈ ರಾಶಿಯವರು! ಏಳೂವರೆ ವರ್ಷದ ಕಷ್ಟ,ನೋವುಗಳಿಗೆ ಕೊನೆಗೂ ಬೀಳುವುದು ವಿರಾಮ !
ಎರಡೂವರೆ ವರ್ಷಗಳಿಗೊಮ್ಮೆ ರಾಶಿಯನ್ನು ಬದಲಿಸುವವನು ಶನಿದೇವ. ಈ ರೀತಿ ಶನಿದೇವ ರಾಶಿ ಬದಲಾಯಿಸಿದಾಗ ಕೆಲವು ರಾಶಿಯವರಿಗೆ ಎರಡೂವರೆ ವರ್ಷದ ಶನಿ ದೆಸೆ ಆರಂಭವಾದರೆ ಇನ್ನು ಕೆಲವರಿಗೆ ಅಂತ್ಯವಾಗಲಿದೆ. ಇನ್ನು ಕೆಲವು ರಾಶಿಯವರಿಗೆ ಶನಿ ಸಾಡೇ ಸಾತಿ ಅಥವಾ ಏಳೂವರೆ ವರ್ಷದ ಶನಿ ದೆಸೆಯಿಂದಲೂ ಮುಕ್ತಿ ಸಿಗುತ್ತದೆ.
ಯಾರ ಜೀವನದಲ್ಲಿ ಶನಿ ದೆಸೆ ಆರಂಭವಾಗುತ್ತದೆಯೋ ಅಲ್ಲಿಂದ ಜೀವನದಲ್ಲಿ ನೋವು ಕಷ್ಟಗಳ ಸರಮಾಲೆಯೇ ಆರಂಭ. ಈ ಬಾರಿ ಶನಿ ಸಂಕ್ರಮಣದ ನಂತರ ಕೆಲವು ರಾಶಿಗಳು ಶನಿ ಮಹಾ ದೆಸೆಯಿಂದ ಸಂಪೂರ್ಣ ಮುಕ್ತಿ ಪಡೆಯಲಿದೆ.
ಸದ್ಯ ಕುಂಭ ರಾಶಿಯಲ್ಲಿರುವ ಶನಿ ದೇವ 2025ರ ಮಾರ್ಚ್ 29ರಂದು ಮೀನ ರಾಶಿಗೆ ಪ್ರವೇಶ ಪಡೆಯುತ್ತಾನೆ. ಈ ಮೂಲಕ ಎರಡು ರಾಶಿಯವರ ಜಾತಕದಲ್ಲಿ ಶನಿಯ ದೈಯ್ಯಾ ಹಾಗೂ ಒಂದು ರಾಶಿಯವರ ಜಾತಕದಲ್ಲಿ ಸಾಡೇಸಾತಿ ಮುಕ್ತವಾಗಲಿದೆ.
ಮಕರ ರಾಶಿ : ಶನಿದೇವನು ಮೀನ ರಾಶಿಗೆ ಕಾಲಿಡುತ್ತಿದ್ದಂತೆ ಮಕರ ರಾಶಿಯವರಿಗೆ ಶನಿ ದೆಸೆಯಿಂದ ಸಂಪೂರ್ಣ ಮುಕ್ತಿ ಸಿಗಲಿದೆ. ಈ ಮೂಲಕ ಏಳೂವರೆ ವರ್ಷದಿಂದ ಅನುಭವಿಸುತ್ತಿದ್ದ ನೋವು ಕಷ್ಟಗಳಿಗೆ ವಿರಾಮ ಸಿಗುವುದು. ಇದರ ಜೊತೆಗೆ ಕುಂಭ ರಾಶಿಯವರ ಜಾತಕದಲ್ಲಿ ಸಾಡೇಸಾತಿಯ ಅಂತಿಮ ಚರಣ ಆರಂಭವಾಗಲಿದೆ.
ವೃಶ್ಚಿಕ ರಾಶಿ :ಹಾಗೆಯೇ ವೃಶ್ಚಿಕ ರಾಶಿಯವರ ಜಾತಕದಲ್ಲಿ ನಡೆಯುತ್ತಿದ್ದ ಶನಿ ಧೈಯ್ಯಾ ಅಥವಾ ಎರಡೂವರೆ ವರ್ಷದ ಶನಿ ದೆಸೆ ಕೂಡಾ ಅಂತ್ಯವಾಗಲಿದೆ. ಹೀಗಾಗಿ ಇವರನ್ನು ಕಾಡುತ್ತಿದ್ದ ಆರೋಗ್ಯ ಸಮಸ್ಯೆಗೆ ಪರಿಹಾರ ಸಿಗುವುದು.
ಮೀನ ರಾಶಿ :ಹಾಗೆಯೇ ಮೀನ ರಾಶಿಯ ಜಾತಕದವರ ಮೇಲೆ ಮೊದಲನೇ ಹಂತ ಪ್ರಾರಂಭವಾಗಲಿದೆ. ಅಂದರೆ 2025 ರಲ್ಲಿ ಕುಂಭ, ಮೀನ ಹಾಗೂ ಮೇಷ ರಾಶಿಯವರ ಜೀವನದಲ್ಲಿ ಶನಿಮಹಾತ್ಮನ ವಕ್ರ ದೃಷ್ಟಿ ಬೀಳಲಿದೆ.
ಮೇಷ ರಾಶಿ : ಇನ್ನು ಶನಿದೇವನ ರಾಶಿ ಪರಿವರ್ತನೆಯಿಂದ ಮೇಷ ಮತ್ತು ಮೀನ ರಾಶಿಯವರಿಗೆ ಏಳೂವರೆ ಶನಿ ದೆಸೆ ಆರಂಭವಾದರೆ, ಸಿಂಹ ಮಾತು ಧನು ರಾಶಿಯವರಿಗೆ ಶನಿ ಧೈಯ್ಯಾ ಅಥವಾ ಎರಡೂವರೆ ವರ್ಷದ ಶನಿದೆಸೆ ಆರಂಭವಾಗಲಿದೆ.
ಸೂಚನೆ : ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ.