ಪಿಎಫ್ ಚಂದಾದಾರರಿಗೆ ದೊಡ್ಡ ರಿಲೀಫ್ ! ಎಟಿಎಂ ಬಳಿಕ ಇದೀಗ ಇ ವಾಲೆಟ್ ಮೂಲಕವೂ ಪಿಎಫ್ ಹಣವನ್ನು ಪಡೆಯಬಹುದು!

Fri, 20 Dec 2024-9:34 am,

PF ಸದಸ್ಯರಿಗೆ ಇದೊಂದು ಮಹತ್ವದ ಸುದ್ದಿ. ಇದೀಗ ಇ-ವ್ಯಾಲೆಟ್ ಮೂಲಕ ಕ್ಲೈಮ್ ಸೆಟಲ್ಮೆಂಟ್ ಮಾಡಿಕೊಳ್ಳಬಹುದು. ಇಪಿಎಫ್‌ಒ ಮತ್ತು ಇಎಸ್‌ಐಸಿ ಸದಸ್ಯರು ಕೆಲವೇ ದಿನಗಳಲ್ಲಿ ಇ-ವ್ಯಾಲೆಟ್ ಮೂಲಕ ತಮ್ಮ ಕ್ಲೈಮ್‌ಗಳನ್ನು ಇತ್ಯರ್ಥಪಡಿಸಲು ಸಾಧ್ಯವಾಗುತ್ತದೆ. 

ಇಪಿಎಫ್ ಚಂದಾದಾರರು ತಮ್ಮ ಪಿಂಚಣಿ ಹಣವನ್ನು ಸುಲಭವಾಗಿ ಹಿಂಪಡೆಯಲು ಸಹಾಯ ಮಾಡುವ ಗುರಿಯನ್ನು  ಹೊಂದಿದ್ದು, ಹೊಸ ಹೊಸ ವ್ಯವಸ್ಥೆಗಳನ್ನು ಜಾರಿಗೆ ತರುತ್ತಿದೆ. 

ಈ ಹೊಸ ಪದ್ದತಿಯ ಕಾರಣದಿಂದಾಗಿ ಜನರು ಪಿಎಫ್ ಸೆಟಲ್ ಮೆಂಟ್ ಗೆ ತಿಂಗಳುಗಟ್ಟಲೆ ಕಾಯಬೇಕಿಲ್ಲ. ಎಲ್ಲ ಕೆಲಸಗಳು ಸರಾಗವಾಗಿ ಮುಗಿದು ಹೋಗುತ್ತವೆ.   

ಇದಕ್ಕೂ ಮೊದಲು ಕಾರ್ಮಿಕ ಸಚಿವಾಲಯವು ಇಪಿಎಫ್‌ಒ ಸದಸ್ಯರಿಗೆ ಎಟಿಎಂಗಳಿಂದ ಪಿಎಫ್ ಮೊತ್ತವನ್ನು ಹಿಂಪಡೆಯುವ ಸೌಲಭ್ಯವನ್ನು ಒದಗಿಸಲು ಡೆಬಿಟ್ ಕಾರ್ಡ್‌ನಂತಹ ಸೌಲಭ್ಯವನ್ನು ಕಲ್ಪಿಸಿದೆ. 

ಇದರ ಪ್ರಕಾರ ಸೆಲ್ಫ್ ಮೋಡ್‌ನಲ್ಲಿ ಇತ್ಯರ್ಥವಾದ ಕ್ಲೈಮ್‌ಗಳನ್ನು ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದು. ಜನರು ಈ ಹಣವನ್ನು ಎಟಿಎಂಗಳಿಂದ ಹಿಂಪಡೆಯಬಹುದು.

ಇಪಿಎಫ್ ಕ್ಲೈಮ್ ಮೊತ್ತವನ್ನು ನೇರವಾಗಿ ವ್ಯಾಲೆಟ್ ಗೆ ವರ್ಗಾಯಿಸುವ ಬಗ್ಗೆ ಮಾತುಕತೆ ನಡೆಯುತ್ತಿದೆ.ಇದಕ್ಕಾಗಿ ಬ್ಯಾಂಕ್‌ಗಳೊಂದಿಗೆ ಈಗಾಗಕೆ ಮಾತುಕತೆ ನಡೆದಿದೆ ಎನ್ನಲಾಗಿದೆ. 

ಉದ್ಯೋಗಿಗಳಿಗೆ ಉತ್ತಮ ಸೇವೆಯನ್ನು ಒದಗಿಸುವ ನಿಟ್ಟಿನಲ್ಲಿ ಇದೀಗ ಕ್ಲೈಮ್ ಇತ್ಯರ್ಥ ಪ್ರಕ್ರಿಯೆಯಿಂದ ಅನಗತ್ಯ ಪ್ರಕ್ರಿಯೆಗಳನ್ನು ತೆಗೆದುಹಾಕಲಾಗಿದೆ. ಕಾರ್ಮಿಕ ಸಚಿವಾಲಯವು ಭಾರತೀಯ ತನ್ನ ತಂತ್ರಜ್ಞಾನವನ್ನು ನವೀಕರಿಸುತ್ತಿದ್ದು, ಎಲ್ಲಾ ಕಾರ್ಯಗಳು ಥಟ್ ಎಂದು ನಡೆದು ಹೋಗುತ್ತವೆ. 

ಇಪಿಎಫ್‌ಒ ಐಟಿ ವ್ಯವಸ್ಥೆಯನ್ನು ಬ್ಯಾಂಕ್‌ಗಳಂತೆ ಉತ್ತಮಗೊಳಿಸಿ, ಕ್ಲೈಮ್‌ಗಳ ಪರಿಹಾರವನ್ನು ಜನವರಿ 2025 ರಿಂದ ವೇಗವಾಗಿ ಮಾಡಲಾಗುವುದು ಎಂದು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಕಾರ್ಯದರ್ಶಿ ಸುಮಿತಾ ದೌರಾ ಹೇಳಿದರು. 

ಇದಾದ ನಂತರ ಹಕ್ಕುದಾರರು ತಮ್ಮ ಕ್ಲೈಮ್ ಮೊತ್ತವನ್ನು ನೇರವಾಗಿ ಎಟಿಎಂಗಳಿಂದ ಹಿಂಪಡೆಯಲು ನಾವು ಪ್ರಕ್ರಿಯೆಯನ್ನು ಸರಳಗೊಳಿಸುತ್ತೇವೆ ಎಂದು ಅವರು ಮಾಹಿತಿ ನೀಡಿದರು.

ZEENEWS TRENDING STORIES

By continuing to use the site, you agree to the use of cookies. You can find out more by Tapping this link