ESIC: ಕೊರೊನಾದಿಂದ ಪ್ರಭಾವಿತಗೊಂಡ ಕುಟುಂಬಗಳಿಗೆ ಸಿಗಲಿದೆ ಈ ಪೆನ್ಶನ್ ಯೋಜನೆ ಲಾಭ

Sun, 30 May 2021-6:02 pm,

1.EPFO Pension Scheme - ಕೊರೊನಾ ಮಹಾಮಾರಿಯ ವಿರುದ್ದ ಇಡೀ ದೇಶವೇ ಹೋರಾಡುತ್ತಿದೆ. ಹಲವಾರು ಕುಟುಂಬಗಳು ತಮ್ಮ ಕುಟುಂಬದ ಏಕೈಕ ಗಳಿಕೆ ಮಾಡುವ ವ್ಯಕ್ತಿಯನ್ನು ಕಳೆದುಕೊಂಡಿವೆ. ಇದರಿಂದ ಅಂತಹ ಕುಟುಂಬಗಳು ನಾಲ್ಕೂ ಕಡೆಗಳಿಂದ ಸಂಕಷ್ಟ ಅನುಭವಿಸುತ್ತಿವೆ. ಇಂತಹ ವ್ಯಕ್ತಿಗಳ ಕುಟುಂಬ ಸದಸ್ಯರಿಗೆ ಇದೀಗ ಸರ್ಕಾರ ಕೂಡ ಸಹಾಯಹಸ್ತ ಚಾಚಿದೆ. ಇನ್ನೊಂದೆಡೆ EPFO ಕೂಡ ತನ್ನ ನಿಯಮದಲ್ಲಿ ವಿಶೇಷ ಪ್ರಸ್ತಾವನೆಯನ್ನು ಜಾರಿಗೆ ತಂದಿದ್ದು, ಕೊಂಚವಾದರೂ ಸರಿ ಇಂತಹ ಕುಟುಂಬ ಸದಸ್ಯರಿಗೆ ಪರಿಹಾರ ಸಿಗಲಿ ಎಂಬುದು ಇದರ ಹಿಂದಿನ ಉದ್ದೇಶವಾಗಿದೆ.

2. EPFO Taken Steps - ಈ ನಿಟ್ಟಿನಲ್ಲಿ EPFO ತನ್ನ ಪೆನ್ಷನ್ ಯೋಜನೆಯಲ್ಲಿ ಬದಲಾವಣೆ ಮಾಡಿದೆ. ಇದರಿಂದ ಎಂಪ್ಲಾಯಿಸ್ ಸ್ಟೇಟ್ ಇನ್ಸೂರೆನ್ಸ್ ಕಾರ್ಪೋರೇಶನ್ ನ ಎಲ್ಲ ನೊಂದಾಯಿತ ಇಲಾಖೆಗಳಿಗೆ ಪೆನ್ಷನ್ ಸ್ಕೀಮ್ ಲಾಭ ಸಿಗಲಿದೆ. ಇದಲ್ಲದೆ  EDLI (Employees’ Deposit-Linked Insurance)  ಹಾಗೂ EPFO (Employees’ Provident Fund Organisation)ಲಾಭವೂ ಕೂಡ ಇವರಿಗೆ ಸಿಗಲಿದೆ.

3. ಏನಿದು ಯೋಜನೆ? - ESIC ನಿಯಮಗಳ ಪ್ರಕಾರ ಪೆನ್ಷನ್ ನಲ್ಲಿ ಡೆಲಿ ವೆಜ್ ನ ಶೇ.90 ರಷ್ಟು ಹಣವನ್ನು ಅವಲಂಭಿತರಿಗೆ ಸಿಗಲಿದೆ. ಒಂದು ವೇಳೆ ಕುಟುಂಬದಲ್ಲಿ ಗಳಿಸುವ ವ್ಯಕ್ತಿ ಕೊರೊನಾದಿಂದ ಮೃತಪಟ್ಟಿದ್ದರೆ, ಈ ನಿಯಮ ಮಾರ್ಚ್ 24, 2020 ರಿಂದ 24 ಮಾರ್ಚ್ 2022 ರವರೆಗಿನ ಸಾವು ಪ್ರಕರಣಗಳಿಗೆ ಅನ್ವಯಿಸಲಿದೆ. ಈ ಪ್ರಸ್ತಾವನೆಯ ಮೇಲೆ ಕಾರ್ಮಿಕ ಸಚಿವಾಲಯ  ಸತತವಾಗಿ ಕಾರ್ಯನಿರ್ವಹಿಸುತ್ತಿದ್ದು, ಸೋಮವಾರ ಈ ಕುರಿತು ಘೋಷಣೆ ಮಾಡಲಾಗಿದೆ.

4. ಯಾರು ಅರ್ಹರು - ಕರೋನಾ ಪಾಸಿಟಿವ್ ಆಗುವ ಮೂರು ತಿಂಗಳ ಮೊದಲು ಆನ್‌ಲೈನ್‌ನಲ್ಲಿ ನೋಂದಾಯಿಸಲ್ಪಟ್ಟ ಇಎಸ್‌ಐಸಿಗೆ ಸಂಬಂಧಿಸಿದ ನೌಕರರ ಕುಟುಂಬ ಸದಸ್ಯರು. ಕನಿಷ್ಠ 78 ದಿನಗಳವರೆಗೆ ಕೆಲಸ ಮಾಡಿದ ಜನರಿಗೆ ಇದರ ಲಾಭ ಸಿಗಲಿದೆ.

5. EPFO-EDLI Scheme - EPFO-EDLI ಯೋಜನೆಯ ಅಡಿ ಇದುವರೆಗೆ ಮೃತಪಟ್ಟವರ ಕುಟುಂಬ ಸದಸ್ಯರಿಗೆ 6 ಲಕ್ಷ ರೂ. ನೀಡಲಾಗುತ್ತಿತ್ತು. ಇದೀಗ ಈ ಹಣವನ್ನು 7 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗಿದೆ. ಕಳೆದ ವರ್ಷದ ಫೆಬ್ರುವರಿಯಿಂದ ಮುಂದಿನ ಮೂರು ವರ್ಷಗಳವರೆಗೆ ಈ ನಿಯಮ ಜಾರಿಯಲ್ಲಿರಲಿದೆ. ಇದರ ಅಡಿ ಕನಿಷ್ಠ ಅಂದರೆ ರೂ.2.5 ಲಖ ರೂ.ಗಳು ಸಿಗಲಿವೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link