ಸ್ಮಾರ್ಟ್‌ಫೋನ್‌ನ ಬ್ಯಾಟರಿಗೆ ಮಾರಕ ನಿಮ್ಮ ಈ ಸಣ್ಣ ತಪ್ಪುಗಳು
ಮ್ಯೂಸಿಕ್ ಕೇಳುವಾಗ ಹೆಡ್‌ಫೋನ್ ಇಲ್ಲವೇ, ಬ್ಲೂಟೂತ್ ಬಳಸುವುದರಿಂದ ಅದರ ಆನಂದವೇ ದುಪ್ಪಟ್ಟಾಗುತ್ತದೆ. ಆದರೆ, ಇವುಗಳನ್ನು ಹೆಚ್ಚಾಗಿ ಬಳಸಿದಷ್ಟೂ ನಿಮ್ಮ ಸ್ಮಾರ್ಟ್‌ಫೋನ್ ಬ್ಯಾಟರಿ ಬೇಗ ಖಾಲಿಯಾಗುತ್ತದೆ.
ಸ್ಮಾರ್ಟ್‌ಫೋನ್‌ನಲ್ಲಿ ಗೇಮ್ ಆಡುವುದರಿಂದ ಬ್ಯಾಟರಿ ಬೇಗ ಖಾಲಿಯಾಗುತ್ತದೆ ಎಂದು ನಿಮಗೆ ತಿಳಿದೇ ಇದೆ. ಆದರೆ, ನೀವು ಚಾರ್ಜಿಂಗ್ ಸಮಯದಲ್ಲಿ ಗೇಮಿಂಗ್ ಮಾಡುತ್ತಿದ್ದರೆ ಫೋನ್ ಬ್ಯಾಟರಿ ಹೆಚ್ಚು ಹೀಟ್ ಆಗುತ್ತದೆ. ಇದು ಬ್ಯಾಟರಿಯ ಕಾರ್ಯಕ್ಷಮತೆ ಮೇಲೆ ಪರಿಣಾಮ ಬೀರುತ್ತದೆ.
ಕೆಲವರು ಫೋನ್ ರಿಂಗಿಂಗ್ ಜೊತೆಗೆ ಫೋನ್ ಅನ್ನು ವೈಬ್ರೆಟ್ ಮೂಡ್ ನಲ್ಲಿಯೂ ಇಟ್ಟಿರುತ್ತಾರೆ. ಇದರಿಂದ ಸ್ಮಾರ್ಟ್‌ಫೋನ್‌ನಲ್ಲಿ ಅಧಿಸೂಚನೆ ಬಂದಾಗಲೆಲ್ಲಾ ಅದು ಕಂಪಿಸಲು ಪ್ರಾರಂಭಿಸುತ್ತದೆ, ಇದರಿಂದಾಗಿ ಬ್ಯಾಟರಿ ಡ್ರೈನ್ ವಿಪರೀತವಾಗಿ ಹೆಚ್ಚಾಗುತ್ತದೆ.
ತಂತ್ರಜ್ಞಾನ ಬೆಳೆದಂತೆ ಆಯ್ಕೆಗಳು ಕೂಡ ಹೆಚ್ಚಾಗಿವೆ. ಈಗ ನಮ್ಮ ಸ್ಮಾರ್ಟ್‌ಫೋನ್‌ನಲ್ಲಿ ನಮಗೆ ಬೇಕಾದ ರಿಂಗ್‌ಟೋನ್ ಅನ್ನು ಬಳಸಲು ಕೂಡ ಅವಕಾಶವಿದೆ. ಆದರೆ, ನೀವು ಯಾವಾಗಲೂ ಸ್ಮಾರ್ಟ್‌ಫೋನ್‌ನಲ್ಲಿರುವ ರಿಂಗ್‌ಟೋನ್‌ಗಳನ್ನು ಮಾತ್ರ ಆಯ್ಕೆ ಮಾಡಬೇಕು ಏಕೆಂದರೆ ಅವುಗಳ ಬೀಟ್‌ಗಳು ಮತ್ತು ಅವುಗಳ ಧ್ವನಿಯು ತುಂಬಾ ಕಡಿಮೆಯಿರುತ್ತದೆ. ಹಾಗಾಗಿ, ಬ್ಯಾಟರಿ ಬೇಗ ಖಾಲಿಯಾಗುವುದಿಲ್ಲ. ಒಂದೊಮ್ಮೆ ನೀವು ರಿಂಗ್‌ಟೋನ್ ಅನ್ನು ಡೌನ್‌ಲೋಡ್ ಮಾಡಿ ಹೊಂದಿಸಿದರೆ ಅದರ ಆವರ್ತನವು ಅಧಿಕವಾಗಿರುತ್ತದೆ. ಇದಕ್ಕಾಗಿ ಹೆಚ್ಚಿನ ಬ್ಯಾಟರಿ ವ್ಯಯವಾಗುತ್ತದೆ.
ನಮ್ಮಲ್ಲಿ ಎಷ್ಟೋ ಮಂದಿ ಫೋನ್‌ನಲ್ಲಿ ತಮಗೆ ಅಗತ್ಯವಿಲ್ಲದಿದ್ದರೂ ಹೆಚ್ಚು ಫೋಟೋ, ವಿಡಿಯೋ, ಫೈಲ್‌ಗಳನ್ನು ಡಿಲೀಟ್ ಮಾಡುವುದೇ ಇಲ್ಲ. ಆದರೆ, ಸ್ಮಾರ್ಟ್‌ಫೋನ್‌ನಲ್ಲಿರುವ ಅನಗತ್ಯ ಫೈಲ್‌ಗಳಿಂದಾಗಿ ಸ್ಮಾರ್ಟ್‌ಫೋನ್‌ನ ಪ್ರೊಸೆಸರ್‌ನಲ್ಲಿ ಹೆಚ್ಚಿನ ಒತ್ತಡ ಉಂಟಾಗುತ್ತದೆ. ಇದರಿಂದಾಗಿ ಫೋನ್ ಅತಿಯಾಗಿ ಬಿಸಿಯಾಗಬಹುದು. ಇದು ಬ್ಯಾಟರಿಯ ಕಾರ್ಯಕ್ಷಮತೆಯ ಮೇಲೂ ಪರಿಣಾಮ ಬೀರುತ್ತದೆ.